This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Local NewsNational NewsState News

ಎಫ್ ಎಂ ರೆಡಿಯೋ ಟ್ಯೂನ್ ಮಾಡಿ 100.1 ಬಾಗಲಕೋಟೆ ಎಫ್‍ಎಂ ಕೇಂದ್ರಕ್ಕೆ ಗದ್ದಿಗೌಡ ಚಾಲನೆ

ಬಾಗಲಕೋಟೆ

ಬಹು ದಿನಗಳ ಬೇಡಿಕೆಯಾಗಿದ್ದ ಪ್ರಸಾರ ಭಾರತೀಯ ಆಕಾಶವಾಣಿ ಎಫ್.ಎಂ ಕೇಂದ್ರವನ್ನು ಸಂಸದ ಪಿ.ಸಿ.ಗದ್ದಿಗೌಡ ಶುಕ್ರವಾರ ಚಾಲನೆ ನೀಡಿದರು.

ಮದರಾಸನಿಂದ ವಿಡಿಯೋ ವಚ್ರ್ಯೂವಲ್ ಮೂಲಕ ಪ್ರಧಾನ ಮಂತ್ರಿಯವರು ಏಕ ಕಾಲದಲ್ಲಿ 4 ಎಫ್‍ಎಂ ಕೇಂದ್ರ ಹಾಗೂ 2 ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ವೀಕ್ಷಿಸಿ ನಂತರ ಬಾಗಲಕೋಟೆ ಆಕಾಶವಾಣಿ ಎಫ್.ಎಂ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಬೇಡಿಕೆಯಲ್ಲಿರುವ ಆಕಾಶವಾಣಿ ಎಫ್‍ಎಂ ಕೇಂದ್ರ ಪ್ರಾರಂಭಗೊಳ್ಳಬೇಕಿದ್ದು, ತಾಂತ್ರಿಕ ಕಾರಣಗಳಿಂದಾಗಿ ತಡೆಯಾಗಿದೆ. ಇಂದು ಆ ಕಾಲ ಕೂಡಿ ಬಂದಿದೆ ಎಂದರು.

ಸದ್ಯ 15 ರಿಂದ 20 ಕಿ.ಮೀ ವ್ಯಾಪ್ತಿಯವರಗೆ ಎಫ್‍ಎಂ ರೇಡಿಯೋ ಕೇಳಲು ಅವಕಾಶವಿದ್ದು, ಇದರಲ್ಲಿ ಪ್ರಸಾರವಾಗುವ ಸರಕಾರದ ಯೋಜನೆಗಳನ್ನು ಹಾಗೂ ಕೃಷಿಕರಿಗೆ ಉಪಯುಕ್ತವಾದ ಮಾಹಿತಿ ವಿದ್ಯಾರ್ಥಿಗಳಲ್ಲಿ ವ್ಯಾಸಂಗಕ್ಕೆ ಅನುಕೂಲವಾಗುವ ಕಾರ್ಯಕ್ರಮ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ಸಹ ಪ್ರಸಾರವಾಗಲಿದೆ. ಈ ಕೇಂದ್ರಕ್ಕೆ ಸದ್ಯ ಇಬ್ಬರು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸ್ಟುಡಿಯೋ ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದರು.

ಧಾರವಾಡ ಆಕಾಶವಾಣಿ ಕೇಂದ್ರದ ಡೆಪ್ಯೂಟಿ ಡೈರೆಕ್ಟ ಅರುಣ ಪ್ರಬಾಕರ ಮಾತನಾಡಿ ರಾಜ್ಯದಲ್ಲಿ ಬೀದರ, ರಾಣೆಬೆನ್ನೂರ, ಕೆಜಿಎಫ್ ಹಾಗೂ ಬಾಗಲಕೋಟೆಯಲ್ಲಿ ತಲಾ ಒಂದು ಎಫ್‍ಎಂ ಕೇಂದ್ರ ಪ್ರಾರಂಭ ಹಾಗೂ ಉಡಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಎಫ್‍ಎಂ ಕೇಂದ್ರ ಶಿಲ್ಯಾನ್ಯಾಸಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಚಾಲನೆ ನೀಡಿದ್ದಾರೆ.

ಬಾಗಲಕೋಟೆ 100 ವ್ಯಾಟ್‍ನ ಸಾಮಥ್ರ್ಯವಿರುವ ಎಫ್‍ಎಂ ಕೇಂದ್ರವಾಗಿದ್ದು, 100.1 ತರಂಗಾಂತರ ಹೊಂದಿದೆ. ಉತ್ತಮ ಹಾಗೂ ಸ್ಪಷ್ಟವಾದ ಧ್ವನಿಯಲ್ಲಿ ಕೇಳಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಗಲಕೋಟೆ ಶಾಸಕ ಎಚ್.ವಾಯ್.ಮೇಟಿ ವಹಿಸಿದ್ದರು. ಬಾಗಲಕೋಟೆ ಪಟ್ಟಣ ಅಭಿವೃಧ್ದಿ ಪ್ರಾಧಿಕಾರದ ಮುಖ್ಯ ಅಭಿಯಂತರ ಮನ್ಮಥಯ್ಯಸ್ವಾಮಿ, ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ, ಪ್ರಸಾರ ಭಾರತಿ ಕೇಂದ್ರದ ನಿವೃತ್ತ ಅಧಿಕಾರಿ ಈರಣ್ಣ ಬಣವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.