This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಅಗತ್ಯ ಆಕ್ಸಿಜನ್, ರೆಮ್ಡಿಸಿವಿರ್ ಪೂರೈಕೆಗೆ ಕ್ರಮ:ಸಚಿವ ಉಮೇಶ ಕತ್ತಿ

ಉಸ್ತುವಾರಿ ಸಚಿವರಿಂದ ಪ್ರಗತಿ ಪರಿಶೀಲನಾ ಸಭೆ

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಗೆ ಅಗತ್ಯವಾದ ಆಮ್ಲಜನಕ, ಲಸಿಕೆ, ರೆಮ್ಡಿಸಿವಿರ್ ಸೇರಿದಂತೆ ಇತರ ಔಷಧಿಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದುದೆಂದು ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವರು ಹಾಗೂ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ತಿಳಿಸಿದರು.

ಜಿ.ಪಂ ನೂತನ ಸಭಾಭವನದಲ್ಲಿಂದು ಕೋವಿಡ್-೧೯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ೨ನೇ ಅಲೆ ಇನ್ನೂ ೧೫ ದಿನಗಳ ಕಾಲ ಹೆಚ್ಚಾಗುವ ನಿರೀಕ್ಷೆ ಇದ್ದು, ಈ ಕಾಲಕ್ಕೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಜನತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಕೋರೋನಾ ನಿಯಂತ್ರಣದಲ್ಲಿ ಜನರ ಸಹಕಾರವೂ ಅಗತ್ಯವಾಗಿದೆ ಎಂದರು.

ಜಿಲ್ಲೆಗೆ ನಿತ್ಯ ಅಗತ್ಯವಾಗಿರುವ ೧೭ ಕೆ.ಎಲï ಆಮ್ಲಜನಕವನ್ನು ಪೂರೈಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ರೆಮ್ಡಿಸಿವಿರ್ ಇಂಜೇಕ್ಷನ್, ಲಸಿಕೆ ಸಹ ಪೂರೈಸಲು ಕ್ರಮ ಕೈಗೊಳ್ಳಲಾಗುವದು ಅಲ್ಲದೇ ಇತರ ಅಗತ್ಯವಾದ ಔಷಧಗಳ ವ್ಯವಸ್ಥೆಯನ್ನು ಸಹ ಮಾಡಲಾಗುವದು ಎಂದರು.

ಕೋರೋನಾ ಎರಡನೇ ಅಲೆ ಇನ್ನೂ ೧೫ ದಿನಗಳ ಹೆಚ್ಚಾಗುವ ನಿರೀಕ್ಷೆ ಇದ್ದು ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಕಡ್ಡಾಯವಾಗಿ ಹೊರಗಿನಿಂದ ಬಂದವರಿಗೆ ಟೆಸ್ಟ ಮಾಡಿಸಬೇಕು, ಕೋರೋನಾ ಲಕ್ಷಣ ಇದ್ದರೆ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೊಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವ ಉಮೇಶ ಕತ್ತಿ ಅವರು ಸೂಚಿಸಿದರು. ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಮಾಹಿತಿಯನ್ನು ನಿತ್ಯ ಕಲೆ ಹಾಕಿ ಜನತೆಗೆ ಮಾಹಿತಿ ಒದಗಿಸಬೇಕು. ಆಸ್ಪತ್ರೆಗಳಲ್ಲಿರುವ ಖಾಲಿ ಬೆಡ್, ಔಷಧ, ಆಮ್ಲಜನಕದ ಕುರಿತು ಮಾಹಿತಿ ನೀಡಬೇಕೆಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಮಾತನಾಡಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೫೬೭೩೭೬ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದ್ದು ಈ ಪೈಕಿ ೫೩೬೫೪೫ ನೆಗೆಟೆವ್ ಹಾಗೂ ೧೯೫೪೦ ಪಾಸಿಟಿವ್ ಕೇಸಗಳು ಪತ್ತೆಯಾಗಿದ್ದು ೧೬೦೮೭ ಜನರನ್ನು ಡಿಸ್ಟಾಚಾರ್ಜ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ವಿವರಿಸಿ ಆಸ್ಪತ್ರೆಗಳಲ್ಲಿನ ಸಂಪೂರ್ಣ ಮಾಹಿತಿಯನ್ನು ವೆಬ್ ನಲ್ಲಿ ಪ್ರಕಟಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದೊರಕಿದ ೫೪೧೮ ರೆಮ್ಡಿಸಿವಿರ್ ಇಂಜೆಕ್ಷನ್ ಪೈಕಿ ಒಟ್ಟು ೫೨೧೬ ಇಂಜೆಕ್ಷನ್ ಬಳಸಲಾಗಿದ್ದು, ಇನ್ನೂ ೧೫೭ ಇಂಜೆಕ್ಷನ್ ಲಭ್ಯ ಇದೆ. ನಿತ್ಯ ಜಿಲ್ಲೆಗೆ ೧೭ ಕೆ.ಎಲ್ ಆಮ್ಲಜನಕದ ಅವಶ್ಯಕತೆ ಇದ್ದು ಆದರೆ ೭.೫ ಕೆ.ಎಲ್ ಮಾತ್ರ ಸರಬರಜಾಗುತ್ತಿದ್ದು ಈ ಪ್ರಮಾಣವನ್ನು ಜಿಲ್ಲೆಗೆ ನಿತ್ಯ ಅಗತ್ಯಕ್ಕೆ ತಕ್ಕಂತೆ ಪೂರೈಸಬೇಕೆಂದು ಸಚಿವರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು. ಜಿಲ್ಲೆಯಲ್ಲಿ ಕೋವಿಶೀಲ್ಡ ೫೯೦, ಕೋವ್ಯಾಕ್ಸಿನ್ ೩೦ ಸೇರಿ ಒಟ್ಟು ೬೨೦ ಡೋಸ್ ಲಸಿಕೆಗಳು ಲಭ್ಯವಿವೆ ಎಂದರು.

ರಾಜ್ಯ ಸರಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗೆ ಲಾಕಡೌನ್ ಅವಧಿಯಲ್ಲಿ ೪೫೦೧ ಜನರು ಆಗಮಿಸಿದ್ದು ೨೦೯೩ ಜನರನ್ನು ತಪಾಸಣೆ ಮಾಡಲಾಗಿದೆ. ೮೯ ಜನರಿಗೆ ಸೋಂಕು ತಗುಲಿದ್ದು ಅವರೆಲ್ಲರನ್ನು ಹೋಂ ಐಸೋಲೇಶನದಲ್ಲಿ ಇರಿಸಿ ಅವರ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯಲ್ಲಿ ಬಾಗಲಕೋಟೆ ಉಪವಿಭಾಗದಲ್ಲಿ ೫೮೯ ಹಾಗೂ ಜಮಖಂಡಿ ಉಪವಿಭಾಗದಲ್ಲಿ ೨೨೧ ಮದುವೆ ಕಾರ್ಯಕ್ರಮಗಳನ್ನು ಪಾಸ್ ವಿತರಿಸಿ ಮಾಡಿ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ.

ನಿಯಮ ಉಲ್ಲಂಘನೆ ಮಾಡಿದ ಬಾಗಲಕೋಟೆ ಉಪವಿಭಾಗದಲ್ಲಿ ೮, ಜಮಖಂಡಿ ಉಪ ವಿಭಾಗದಲ್ಲಿ ೧ ಪ್ರಕರಣ ದಾಖಲಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಈವರೆಗೆ ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದ ೭೦೨೯೯ ಜನರಿಗೆ ೬೭೩೯೩೮೯ ರೂ.ಗಳ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ  ನಾಯಕ ಎಸ್.ಆರ್. ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಅಗತ್ಯಕ್ಕೆ ಸಿಕ್ಕಂತೆ ಆಮ್ಲಜನಕ ಪೂರೈಕೆಯಾಗುತ್ತಿಲ್ಲ. ಈ ಕುರಿತು ಸಚಿವರು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ನಿತ್ಯ ಬೇಕಾದ ಆಮ್ಲಜನಕವನ್ನು ಒದಗಿಸಬೇಕು. ಜೊತೆಗೆ ಅಗತ್ಯ ಲಸಿಕೆಯನ್ನು ಒದಗಿಸಬೇಕು. ಜಿಲ್ಲೆಗೆ ಹೊರಗಿನಿಂದ ಬಂದವರನ್ನು ಕಡ್ಡಾಯವಾಗಿ ಟೆಸ್ಟ ಮಾಡಬೇಕು, ಗ್ರಾಮೀಣ ಪರಿಸರಕ್ಕೆ ಕೋರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದರು.

ಸಂಸದ ಪಿ.ಸಿ. ಗದ್ದಿಗೌಡರ ಅವರು ಮಾತನಾಡಿ ಜಿಲ್ಲೆಯ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಆಮ್ಲಜನಕವನ್ನು, ಲಸಿಕೆಯನ್ನು ಪೂರೈಸಬೇಕು, ಜನತೆಗೆ ಯಾವದೇ ರೀತಿಯ ತೊಂದರೆಯಾಗದAತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದರು.

ವಿಧಾನಸಭೆ ಸದಸ್ಯ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ ಬ.ವಿ.ವ. ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಸರಬರಾಜಾಗುತ್ತಿರುವ ಆಮ್ಲಜನಕವನ್ನು ಅಗತ್ಯವಾಗುವಷ್ಟು ಇಟ್ಟುಕೊಂಡು ಜಿಲ್ಲಾಸ್ಪತ್ರೆಗೆ ಪೂರೈಸಲಾಗುತ್ತಿದೆ ಆದರೆ ಜಿಲ್ಲೆಯ ಸರಕಾರಿ, ತಾಲೂಕಾ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತಿದ್ದು ಇದನ್ನು ಪೂರೈಸಲು ಮೊದಲು ಆದ್ಯತೆ ನೀಡಬೇಕೆಂದರು.

ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಮಾತನಾಡಿ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು, ಔಷಧಿ, ಆಮ್ಲಜನಕ ಪೂರೈಕೆಯ ಕುರಿತು ನಿತ್ಯ ಮಾಹಿತಿ ಒದಗಿಸಬೇಕು, ಕೋರೋನಾ ಸೋಂಕು ಕಂಡುಬಂದವರನ್ನು ಮನೆಯಲ್ಲಿ ಬಿಡದೇ ಅವರನ್ನು ಹಾಸ್ಟೇಲ್, ಶಾಲಾ, ಕಾಲೇಜುಗಳಲ್ಲಿ ಕ್ವಾರಂಟೆನ್‌ಗೊಳಪಡಿಸಬೇಕು, ಇಂತಹ ಕ್ರಮಗಳನ್ನು ಕೋರೋನಾ ಹೆಚ್ಚಳವನ್ನು ತಡೆಗಟ್ಟಬಹುದಾಗಿದೆ, ಜಿಲ್ಲೆಗೆ ಅಗತ್ಯವಾಗಿರುವ ಆಮ್ಲಜನಕ, ಲಸಿಕೆ, ಔಷಧಿಗಳನ್ನು ಪೂರೈಸಬೇಕೆಂದರು.

ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಅವರು ಮಾತನಾಡಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಪೂರೈಸಿ ಕೋರೋನಾ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು, ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು, ಆಸ್ಪತ್ರೆಗಳಲ್ಲಿರುವ ನಿತ್ಯದ ಮಾಹಿತಿಯನ್ನು ಒದಗಿಸಬೇಕೆಂದು ಸಲಹೆ ಮಾಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿ.ಪಂ. ಉಪಾಧ್ಯಕ್ಷ  ಮುತ್ತಪ್ಪ ಕೋಮಾರ, ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ಲೋಕೇಶ ಜಗಾಲಸರ, ಜಿ.ಪಂ. ಸಿಇಓ ಭೂಬಾಲನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ, ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

 

Nimma Suddi
";