This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

ಪಂಚರತ್ನ-ಪಂಚಸೂತ್ರ ತಂತ್ರದಿಂದ ಗೆಲುವು ಶತಸಿದ್ಧ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ನಿಮ್ಮ ಸುದ್ದಿ ಬೆಂಗಳೂರು

ಬಿಜೆಪಿ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಪಂಚರತ್ನ ಸಮಿತಿ ರಚನೆ ಮತ್ತು ಪಂಚಸೂತ್ರದ ಅನುಷ್ಠಾನದ ಮೂಲಕ ಎದುರಿಸಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‌ಕುಮಾರ್ ಕಟೀಲ್ ಅವರು ವಿಶ್ವಾಸದಿಂದ ನುಡಿದರು.

ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ರಾಜ್ಯದ ಪ್ರಥಮ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರ ಮಾತನಾಡಿದರು.

ಜಿಲ್ಲೆಯಲ್ಲಿ ಒಂದು ವಾರ್ ರೂಂ, ಜಿಲ್ಲೆಗೊಂದು ಕಾಲ್ ಸೆಂಟರ್, ಪ್ರತಿ ಮತಗಟ್ಟೆಯಲ್ಲಿ ಪಂಚರತ್ನ ಸಮಿತಿ, ಕುಟುಂಬ ಸಮ್ಮಿಲನ, ಪೇಜ್ ಪ್ರಮುಖ್ ಹೊಂದಿರುವುದೇ ಈ ಪಂಚಸೂತ್ರದ ಕಾರ್ಯತಂತ್ರವಾಗಿದೆ. ಇದು ಬಿಜೆಪಿ ಬೆಂಬಲಿತರ ಗೆಲುವಿನ ವೇಗವನ್ನು ವೃದ್ಧಿಸಲಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಪಂಚಾಯತ್ ಚುನಾವಣಾ ಕೆಲಸ ಪ್ರಾರಂಭ ಮಾಡಬೇಕೆಂಬ ಉದ್ದೇಶದಿಂದ ಗ್ರಾಮ ಸ್ವರಾಜ್ ಸಮಾವೇಶಗಳಿಗೆ ಚಾಲನೆ ಕೊಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳು ಹಾಗೂ ಪಂಚಾಯತ್‌ಗಳಿಗೆ ಕೊಟ್ಟ ಗರಿಷ್ಠ ಅನುದಾನ, ಯೋಜನೆಗಳ ಕುರಿತು ಜನರಿಗೆ ತಿಳಿಸುವುದೇ ಈ ಸಮಾವೇಶದ ಉದ್ದೇಶ ಎಂದು ವಿವರಿಸಿದರು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರಕಾರ ನೇರ-ಅತಿ ಹೆಚ್ಚು ಅನುದಾನದ ಮೂಲಕ ಪಂಚಾಯತ್‌ಗಳನ್ನು ಸಶಕ್ತೀಕರಣಗೊಳಿಸಿದೆ. ಗ್ರಾಮಗಳು ಸಶಕ್ತವಾದರೆ ದೇಶ ಬಲಿಷ್ಠವಾಗಲು ಸಾಧ್ಯ ಎಂಬ ಮಹಾತ್ಮ ಗಾಂಧಿಯವರ ಚಿಂತನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮುಂದಾಗಿದೆ ಎಂದು ವಿವರಿಸಿದರು.

ಶ್ರೀ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸರಕಾರವೂ ಪಂಚಾಯತ್‌ಗಳನ್ನು ಬಲಪಡಿಸುತ್ತಾ ಸಾಗಿದೆ ಎಂದು ಶ್ರೀ ಕಟೀಲ್ ಅವರು ಮೆಚ್ಚುಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ್, ರಾಜ್ಯ ಉಪಾಧ್ಯಕ್ಷರು ಮತ್ತು ಸಂಸದರಾದ ಕು. ಶೋಭಾ ಕರಂದ್ಲಾಜೆ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ, ಸಂಸದರಾದ ಶ್ರೀ ಎಸ್. ಮುನಿಸ್ವಾಮಿ, ಶಾಸಕರುಗಳಾದ ಶ್ರೀ ರಘುಪತಿ ಭಟ್, ಶ್ರೀ ಬಿ. ಎಂ. ಸುಕುಮಾರ್ ಶೆಟ್ಟಿ, ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಗೀತಾ ವಿವೇಕಾನಂದ, ವಿಭಾಗ ಪ್ರಭಾರಿಗಳಾದ ಶ್ರೀ ಉದಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.

 

Nimma Suddi
";