This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

*ಗ್ರಾ.ಪಂ ಅಧ್ಯಕ್ಷರು, ಉಪಾದ್ಯಕ್ಷರು, ಪಿಡಿಓಗಳಿಗೆ ಕಾರ್ಯಾಗಾರ

6 ತಿಂಗಳಲ್ಲಿ ಕೆರೆ, ಪುಷ್ಕರಣಿ ಅಭಿವೃದ್ದಿಗೆ ಕ್ರಮ : ಸಚಿವ ಈಶ್ವರಪ್ಪ

ನಿಮ್ಮ ಸುದ್ದಿ ಬಾಗಲಕೋಟೆ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕರೆ ಮತ್ತು ಪುಷ್ಕರಿಣಿಗಳನ್ನು ಬರುವ 6 ತಿಂಗಳಲ್ಲಿ ಅಭಿವೃದ್ದಿಪಡಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮವಹಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನವನಗರದ ಕಲಾಭವನದಲ್ಲಿಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮೈಸೂರಿನ ಅಬ್ದುಲ್ ನಜೀರ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡ ಗ್ರಾ.ಪಂ ಅಧ್ಯಕ್ಷರು, ಉಪಾದ್ಯಕ್ಷರು ಮತ್ತು ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ, ನರೇಗಾ ಪ್ರಗತಿ ಪುಸ್ತಕ ಹಾಗೂ ವಿಡಿಯೋ ಪ್ರದರ್ಶನ ಉದ್ಘಟಿಸಿ ಅವರು ಮಾತನಾಡಿದರು.

ಗ್ರಾಮದ ಜನತೆ ತಮ್ಮನ್ನು ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದಾರೆ. ಬರುವ 6 ತಿಂಗಳಲ್ಲಿ ಗ್ರಾಮದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಬೇಕು. ಮುಖ್ಯವಾಗಿ ಕೆರೆ ತುಂಬಿಸುವದು, ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣಿಗಳನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕು. ಇದರ ಜೊತೆಗೆ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ, ಶಾಲೆ, ಕಂಪೌಂಡ್ ರಿಪೇರಿ, ಸೇರಿದಂತೆ, ಇತರೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ತಿಳಿಸಿದರು.

ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ನರೇಗಾದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.

 

ಗ್ರಾಮ ಪಂಚಾಯತಿಗಳಿಗೆ ವಿದ್ಯುತ್ ಬಿಲ್ ಪಾವತಿ ಕುರಿತಂತೆ ಸಮಸ್ಯೆ ಆಲಿಸಿದ ಸಚಿವರು ಬರುವ 6 ತಿಂಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯತಿಗೆ ಸೋಲಾರ್ ವಿದ್ಯುತ್ ಅಳವಡಿಕೆಗೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಅಭಿವೃದ್ದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಹಕಾರ ಅಗತ್ಯವಾಗಿದ್ದು, ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸಹಕಾರ ನೀಡಬೇಕು. ಒಂದು ವೇಳೆ ಸಹಕಾರ ನೀಡದಿದ್ದಲ್ಲಿ ವರ್ಗಾವಣೆ, ಅಮಾನತ್ತು ಮಾಡದೇ ನೇರವಾಗಿ ವಜಾಗೊಳಿಸುವ ಕಾರ್ಯ ಕೈಗೊಳ್ಳಲಾಗುವುದೆಂದು ಕಟ್ಟುನಿಟ್ಟಾಗಿ ಸೂಚಿಸಿದರು.

 

ರೈತ ಅಭಿವೃದ್ದಿಗೊಂಡರೆ ಹಳ್ಳಿ ಅಭಿವೃದ್ದಿಗೊಂಡಂತೆ, ಹಳ್ಳಿ ಅಭಿವೃದ್ದಿಗೊಂಡರೆ ದೇಶವೇ ಅಭಿವೃದ್ದಿಯಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಗಿದ್ದು, ಈ 75 ವರ್ಷದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಲಜೀವನ ಮಿಷನ್ ದಡಿ ಪ್ರತಿ ಮನೆಗಳಿಗೆ ನಲ್ಲಿ ನೀರು ಜೋಡನೆಗೆ ಕ್ರಮಕೈಗೊಳ್ಳಬೇಕು. ಬಾಗಲಕೋಟೆಯಲ್ಲಿ ನೆರೇಗಾದಡಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದು, ಮೊದಲನೇ ಸ್ಥಾನಕ್ಕೆ ಬರಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 750 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮೂಲಭೂತ ಸೌಲಭ್ಯಕ್ಕಾಗಿ 25 ಲಕ್ಷ ರೂ.ಗಳ ನೀಡಲಾಗಿದೆ. ಇನ್ನು ಒಂದುವರೆ ಸಾವಿರ ಗ್ರಾಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಯಲು ಶೌಚಾಲಯ ಆರೋಗ್ಯಕ್ಕೆ ಒಳ್ಳೆಯದಲ್ಲಿ. ಅದು ನಮ್ಮ ನಾಗರಿಕತೆನು ಅಲ್ಲ. ಬಯಲು ಮುಕ್ತ ಶೌಚಾಲಯಕ್ಕೆ ಎಲ್ಲರೂ ಶ್ರಮಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ 40 ಗ್ರಾ.ಪಂಗಳಿಗೆ ತ್ಯಾಜ್ಯ ನಿರ್ವಹಣೆಗೆ ಜಾಗದ ಅವಶ್ಯಕತೆ ಇದ್ದು, ಖರೀದಿಗೆ ಕ್ರಮವಹಿಸಲಾಗುವುದೆಂದು ತಿಳಿಸಿದರು.

ಕಾರ್ಯಾಗಾರದಲ್ಲಿ ನರೇಗಾ ಕುರಿತು ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಬಯಲು ಶೌಚ ಮುಕ್ತ ಹಾಗೂ ಘನತ್ಯಾಜ್ಯ ನಿರ್ವಹಣೆ, ಜಲಜೀವನ ಮಿಷನ್ ಕುರಿತು ಬೆಂಗಳೂರಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈವರ್iಲ್ಯ ಇಲಾಖೆಯ ನಿರ್ದೇಶಕ ಪರಮೇಶ್ವರ ಹೆಗಡೆ, ಜೀವನ ವೈವಿದ್ಯತೆ ಕುರಿತು ವಿಜಯಪುರದ ಆಯ್.ಆರ್.ಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬು ಸಜ್ಜನ, ಕೋವಿಡ್-19 ಕುರಿತು ಅರಿವು, ಮುನ್ನಚ್ಚರಿಕೆ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ವೀಕೇಂದ್ರಿಕರಂ ಕುರಿತು ಕ.ರಾ.ವಿ.ಯೋಅ ಸಮಿತಿ ಉಪಾದ್ಯಕ್ಷ ಪ್ರಮೋದ ಹೆಗಡೆ, ಕೆರೆ ಪುನಚ್ಛೆತನ ಕುರಿತು ಪರಿಸರವಾದಿ ಶಿವಾನಂದ ಕವಳೆ ಮಾತನಾಡಿದರು.

ಪ್ರಾರಂಭದಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಮೈಸೂರಿನ ಅಬ್ದುಲ್ ನಜೀರ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಸಂಸ್ಥೆಯ ಉಪನಿರ್ದೇಶಕ ಮನೋಜ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿವಿಧ ಇಲಾಖೆಯ ಮಳಿಗೆ ವೀಕ್ಷಣೆ
————————-
ಕಲಾಭವನದ ಆವರಣದಲ್ಲಿ ಹಾಕಲಾದ ಜಿಲ್ಲಾ ಪಂಚಾಯತನ ಅಮೃತ ಯೋಜನೆ, ಚೆಕ್‍ಡ್ಯಾಂ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ, ಪಶು ಸಂಗೋಪನಾ, ಕೈಮಗ್ಗ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ವಸ್ತುಪ್ರದರ್ಶನ ಮಳಿಗೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ಸಚಿವ ಕೆ.ಎಸ್.ಈಶ್ವರಪ್ಪ ವೀಕ್ಷಿಸಿದರು.

*ಘನತ್ಯಾಜ್ಯ ನಿರ್ವಹಣೆಗೆ ಒಡಂಬಡಿಕೆ*
————————-
ಜಿಲ್ಲೆಯ ಸುನಗ, ಕೋಟಿಕಲ್ ಮತ್ತು ಗುಡೂರ ಎಸ್‍ಸಿ ಗ್ರಾಮಗಳ ಸಂಜೀವಿನಿ ಮಹಿಳಾ ಒಕ್ಕೂಟಗಳಿಗೆ ಘನತ್ಯಾಜ್ಯ ನಿರ್ವಹಣೆ ಮಾಡಲು ಒಡಂಬಡಿಕೆ ಹಸ್ತಾಂತರ, ಸಂಜೀವಿನಿ ಎನ್‍ಆರ್‍ಎಲ್‍ಎಂ ಯೋಜನೆಯಡಿ ಸಾರ್ವಜನಿಕರಿಗೆ ಗ್ರಾಮೀಣ ಬ್ಯಾಂಕ್ ಸೇವೆ ಒದಗಿಸಲು ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬರಂತೆ ಬಿ.ಸಿ ಸಖಿ ಎಂದು ಗುರುತಿಸಲಾಗಿದ್ದು, ಸಾಂಕೇತಿಕವಾಗಿ ಮೂರು ಜನರಿಗೆ ಬಯೋಮ್ಯಾಟ್ರಿಕ್ ಮತ್ತು ತರಬೇತಿ ಪ್ರಮಾಣ ಪತ್ರ ವಿತರಣೆ ಹಾಗೂ 41 ಗ್ರಾಮೀಣ ಒಕ್ಕೂಟಗಳಿಗೆ 672.75 ಲಕ್ಷ ರೂ.ಗಳ ಸಮುದಾಯ ಬಂಡವಾಳ ನಿಧಿಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ಸಚಿವ ಕೆ.ಎಸ್.ಈಶ್ವರಪ್ಪ ವಿತರಿಸಿದರು.

";