This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಗ್ರಾಪಂ ಚುನಾವಣೆ ಫಲಿತಾಂಶ

*ಗ್ರಾ.ಪಂ ಚುನಾವಣೆಗಳ ಫಲಿತಾಂಶ : ವರ್ಗವಾರು ವಿವರ*
—————————————
ನಿಮ್ಮ ಸುದ್ದಿ ಬಾಗಲಕೋಟೆ

9 ತಾಲೂಕಿನ 191 ಗ್ರಾಮ ಪಂಚಾಯತಿಗಳ 3139 ಸ್ಥಾನಗಳಿಗೆ ಪೈಕಿ 3089 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 317 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ ಉಳಿದ 2772 ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಒಟ್ಟು 91 ಗ್ರಾಮ ಪಂಚಾಯತಿಗಳ 3139 ಸ್ಥಾನಗಳ ಪೈಕಿ 50 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವದಿಲ್ಲ. 2772 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸಲಾಗಿದ್ದು, ವರ್ಗವಾರು ಫಲಿತಾಂಶ ಇಂತಿದೆ. ಗ್ರಾಮ ಪಂಚಾಯತಿಗಳ ಒಟ್ಟು 3139 ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ ಕ್ಷೇತ್ರದಿಂದ 1521, ಮಹಿಳಾ ಕ್ಷೇತ್ರದಿಂದ 1618 ಜನ ಇದ್ದಾರೆ. ಅನುಸೂಚಿತ ಜಾತಿಯ ಸಾಮಾನ್ಯ ಕ್ಷೇತ್ರದಿಂದ 231, ಮಹಿಳಾ ಕ್ಷೇತ್ರದಿಂದ 329 ಸೇರಿ ಒಟ್ಟು 560 ಜನ ಆಯ್ಕೆಯಾಗಿದ್ದಾರೆ.
ಅನುಸೂಚಿತ ಪಂಗಡದ ಸಾಮಾನ್ಯ ಕ್ಷೇತ್ರದಿಂದ 65, ಮಹಿಳಾ ಕ್ಷೇತ್ರದಿಂದ 213 ಸೇರಿ ಒಟ್ಟು 278 ಜನ ಆಯ್ಕೆಯಾದರೆ, ಹಿಂದುಳಿದ ಅ ವರ್ಗದ ಸಾಮಾನ್ಯ ಕ್ಷೇತ್ರದಿಂದ 219, ಮಹಿಳಾ ಕ್ಷೇತ್ರದಿಂದ 322 ಸೇರಿ ಒಟ್ಟು 541 ಜನ ಆಯ್ಕೆಯಾಗಿದ್ದಾರೆ. ಹಿಂದುಳಿದ ಬಿ ವರ್ಗದ ಸಾಮಾನ್ಯ ಕ್ಷೇತ್ರದಿಂದ 71, ಮಹಿಳಾ ಕ್ಷೇತ್ರದಿಂದ 67 ಜನ ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದ ಸಾಮಾನ್ಯ ಕ್ಷೇತ್ರದಿಂದ 910, ಮಹಿಳಾ ಕ್ಷೇತ್ರದಿಂದ 662 ಸೇರಿ ಒಟ್ಟು 1572 ಜನ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

*ತೊಗರಿ ಖರೀದಿ : ನೊಂದಣಿಗೆ ಅವಧಿ ವಿಸ್ತರಣೆ*

ಬಾಗಲಕೋಟೆ: ಸರಕಾರದ ಆದೇಶದನ್ವಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ 6 ಸಾವಿರ ರೂ.ಗಳಂತೆ ತೊಗರಿ ಉತ್ಪನ್ನವನ್ನು ಖರೀದಿಸಲಾಗುತ್ತಿದ್ದು, ನೊಂದಣಿ ಅವಧಿಯನ್ನು ಜನವರಿ 28 ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಗ್ರಂಥಾಲಯ ಸೇವೆ ಒದಗಿಸುವ ಸಂಸ್ಥೆಗಳಿಗೆ ಸಹಾಯಧನ*

ಬಾಗಲಕೋಟೆ: ಗ್ರಂಥಾಲಯ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಕೊಲ್ಕತ್ತಾ ರಾಜಾರಾಂ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದ ನೆರವು ಧನ ಸಹಾಯ ಯೋಜನೆಯಡಿ ಉಚಿತ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ನೊಂದಾಯಿತ ಸ್ವಯಂ ಸೇವಾ ಸಂಘ ಸಂಸ್ಥೆಗಳು ಸಂಬಂಧಪಟ್ಟ ಜಿಲ್ಲೆಗಳ ಉಪನಿರ್ದೇಶಕರು, ಮುಖ್ಯಗ್ರಂಥಾಲಯಾಧಿಕಾರಿಗಳು, ನಗರ, ಜಿಲ್ಲಾ ಕೇಂದ್ರ ಗ್ರಂಥಾಲಯ ಇವರಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜನವರಿ 30 ರೊಳಗಾಗಿ ಸಲ್ಲಿಸಬೇಕು. ಅರ್ಜಿ ಮತ್ತು ಸಂಬಂಧಪಟ್ಟ ದಾಖಲಾತಿಗಳನ್ನು ಆಂಗ್ಲ ಭಾಷೆಯಲ್ಲಿ ಭರ್ತಿಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nimma Suddi
";