This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಬಿಜೆಪಿಯಿಂದ ಗ್ರಾಪಂ ಸದಸ್ಯರಿಗೆ ಸನ್ಮಾನ

ಗ್ರಾಮದ ಅಭಿವೃದ್ಧಿಯೇ ಮೂಲ ಮಂತ್ರವಾಗಲಿ

ನಿಮ್ಮ ಸುದ್ದಿ ಬಾಗಲಕೋಟೆ

ಗ್ರಾಮದ ದೇವಾಲಯದಲ್ಲಿ ಹೇಗೆ ಸ್ವಚ್ಚತೆ ಕಾಣುತ್ತೇವೆಯೋ ಅದರಂತೆ ಗ್ರಾಮವನ್ನೇ ದೇವಾಲಯ ಎಂದು ತಿಳಿದು ನೂತನ ಗ್ರಾಪಂ ಸದಸ್ಯರು ಗ್ರಾಮ ಸ್ವಚ್ಚತೆಯತ್ತ ಗಮನ ಹರಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ನಗರದ ಬವಿವ ಸಂಘದ ನೂತನ ಸಭಾಭವನದಲ್ಲಿ ಬಾಗಲಕೋಟೆ ಮತಕ್ಷೇತ್ರದ ಗ್ರಾಮ ಪಂಚಾಯಿತಿಗಳು ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮದ ಅಭಿವೃದ್ಧಿಯಲ್ಲೇ ದೇಶದ ಅಭಿವೃದ್ಧಿ ಅಡಗಿದೆ. ಅದನ್ನು ಅರಿತು ಗ್ರಾಪಂ ಸದಸ್ಯರು ರಾಜಕೀಯ ಬದಿಗೊತ್ತಿ ನಿಮ್ಮ ನಿಮ್ಮ ಗ್ರಾಮಗಳ ಅಭಿವೃದ್ಧಿ ಗಮನ ನೀಡಬೇಕು ಎಂದು ಹೇಳಿದರು.

ಬಿಜೆಪಿಯಲ್ಲಿ ಮೇಲ್ವರ್ಗ, ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡ ಹೀಗೆ ಪ್ರತಿಯೊಂದು ವರ್ಗಕ್ಕೂ ಸ್ಥಾನ ನೀಡಿದೆ. ಸಾಕಷ್ಟು ಜನ ಪಕ್ಷ ಬೆಳೆಸಿದ್ದು ಅದನ್ನು ಉಳಿಸಿಕೊಂಡು ಹೋಗಬೇಕಾದ ಜವಬ್ದಾರಿ ಎಲ್ಲರ ಮೇಲಿದೆ. ಆಲದ ಮರದ ಬೇರಿನಂತೆ ಗ್ರಾಮಾಂತರ ಪ್ರದೇಶದ ಜನರ ಹೃದಯದಲ್ಲಿ ಬಿಜೆಪಿ ಬೇರು ಬಿಟ್ಟಿದೆ. ೨೨ ಗ್ರಾಪಂಗಳಲ್ಲಿ ೧೮ ಬಿಜೆಪಿ ಬೆಂಬಲಿತರ ಕೈಯಲ್ಲಿದ್ದು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರುವಂತಾಗಲಿ ಎಂದು ತಿಳಿಸಿದರು.

ಮಾಜಿ ಶಾಸಕ ಪಿ.ಎಚ್.ಪೂಜಾರಿ ಮಾತನಾಡಿ, ೮೦ರ ದಶಕದಲ್ಲಿ ನಗರ ಕೇಂದ್ರಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡ ಬಿಜೆಪಿಗೆ ಇಂದು ಗ್ರಾಮೀಣ ಪ್ರದೇಶದ ಪ್ರತಿ ಬೂತ್‌ನಲ್ಲೂ ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ಅವರಿಂದಲೇ ಪಕ್ಷ ರಾಷ್ಟçಮಟ್ಟದಲ್ಲಿ ಗೆಲುವು ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಪಕ್ಷ ಬೆಳೆದಾಗ ಮಾತ್ರ ಎಲ್ಲೆಡೆ ಬೇರೂರಲು ಸಾಧ್ಯ. ಮುಂದಿನ ೫ ವರ್ಷದೊಳಗೆ ಗ್ರಾಪಂ ಸದಸ್ಯರಾದವರು ಜನತೆಗೆ ನಿಮ್ಮ ಕೆಲಸದ ಲೆಕ್ಕ ಕೊಡಬೇಕಿದ್ದು, ಉದಾಸೀನ ತೋರದೆ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಕಿವಿ ಮಾತು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಬಾಂಢಗೆ, ಎಂಪಿ ಚುನಾವಣೆಗಿಂತ ಜಿಪಿ ಚುನಾವಣೆ ಕಠಿಣ. ಇಂದು ಚುನಾವಣೆ ಎಂದರೆ ಬಿಜೆಪಿ, ಮತದಾನ ಎಂದರೆ ಬಿಜೆಪಿ ಎಂಬಂತಾಗಿದೆ. ಪಕ್ಷ ಬೆಳೆದಂತೆ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗಿ ಕಾಣುತ್ತವೆ. ಅವುಗಳನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜು ರೇವಣಕರ, ಸದ್ಯ ಬಿಜೆಪಿ ಎಲ್ಲೆಡೆ ಗೆಲುವಿನ ಪಕ್ಷವಾಗಿ ಹೊರಹೊಮ್ಮುತ್ತಿದೆ. ಪಕ್ಷದ ಬಿ ಪರ‍್ಮಂ ದೊರೆತರೆ ಸಾಕು ಶೇ.೭೦ರಷ್ಟು ಜಯ ಗಳಿಸಿದಂತೆ. ದೇಶದ ಒಗ್ಗಟ್ಟು, ಭದ್ರತೆಗಾಗಿ ಇರುವ ಏಕೈಕ ಪಕ್ಷವೇ ಬಿಜೆಪಿ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾ, ವೀರಣ್ಣ ಹಳೇಗೌಡರ, ಜಿಪಂ ಸದಸ್ಯ ರಂಗನಗೌಡ ಗೌಡರ, ಜಯಂತ ಕುರಂದವಾಡ, ಸುರೇಶ ಕೊಣ್ಣೂರ, ಶಿವಾನಂದ ಟವಳಿ, ಕುಮಾರ ಯಳ್ಳಿಗುತ್ತಿ, ರಾಜಶೇಖರ ಮುದೇನೂರ, ಪ್ರಭುಸ್ವಾಮಿ ಗಣಾಚಾರಿ, ಈರಪ್ಪ ಐಕೂರ, ರಾಜು ನಾಯ್ಕರ, ಮಲ್ಲೇಶ ವಿಜಾಪೂರ, ಮುತ್ತು ಸೀಮಿಕೇರಿ, ಎಪಿಎಂಸಿ ಅಧ್ಯಕ್ಷ ಕೃಷ್ಣಪ್ಪ ನಾಯಕ, ಸಂಗಣ್ಣ ಕಲಾದಗಿ ಹಾಗೂ ನೂರಾರು ಗ್ರಾಪಂ ಸದಸ್ಯರು ಇದ್ದರು.

 

Nimma Suddi
";