ಮತದಾನ ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಮೊದಲ ಹಂತದ ೮೯ ಗ್ರಾಮ ಪಂಚಾಯತಿಗಳ ಒಟ್ಟು ೧೩೯೭ ಸ್ಥಾನಗಳಿಗೆ ಡಿಸೆಂಬರ ೨೨ರಂದು ಮತದಾನ ನಡೆಯಲಿದ್ದು, ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಜಮಖಂಡಿ ಮತ್ತು ಮುಧೋಳ ತಾಲೂಕಿನಲ್ಲಿ ಬರುವ ಮತಗಟ್ಟೆಗಳಿಗೆ ಸೋಮವಾರ ಭೇಟಿ ನೀಡಿ ಮತದಾನದ ಸಿದ್ದತೆಯನ್ನು ಪರಿಶೀಲನೆ ಮಾಡಿದರು. ಕೋವಿಡ್-೧೯ ಹಿನ್ನಲೆಯಲ್ಲಿ ಗ್ರಾ.ಪಂ ಸಾರ್ವತ್ರಿಕ ಚುನಾವಣೆ ನಡೆಸಲು ಅನುಸರಿಸಬೇಕಾದ ಕ್ರಮ, ಮತಗಟ್ಟೆಯಲ್ಲಿ ಕೊಠಡಿ ಸ್ಯಾನಿಟೈಜರ್, ಮತಗಟ್ಟೆಯ ೨೦೦ ಮೀಟರ್ ಅಂತರದಲ್ಲಿ ಅಭ್ಯರ್ಥಿಗಳು, ಮತದಾರರಿಗೆ ಗುರುತಿನ ಚೀಟಿ ನೀಡಲು ಸಾಮಾಜಿಕ ಅಂತರ ಕಾಯ್ದುಕೊಂಡು ಗುಂಪುಗೂಡದAತೆ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
ಮತಗಟ್ಟೆ ಅಧಿಕಾರಿಗಳು ಖಡ್ಡಾಯವಾಗಿ ಫೇಸ್ ಮಾಸ್ಕ ಮತ್ತು ಹ್ಯಾಂಡ್‌ಗ್ಲೌಸ್ ಧರಿಸಬೇಕು. ಮತದಾರರು ಮತ ಚಲಾಯಿಸುವ ಸಂದರ್ಭದಲ್ಲಿ ಖಡ್ಡಾಯವಾಗಿ ಮಾಸ್ಕ ಧರಿಸುವದರ ಜೊತೆಗೆ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಾಲಾಯಿಸಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳ ಜಿಲ್ಲಾ ವೀಕ್ಷಕರಾದ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ ಸೇರಿದಂತೆ ಇತರರು ಇದ್ದರು.
ಜಮಖಂಡಿ ಉಪವಿಭಾಗದ ೮೯ ಗ್ರಾಮ ಪಂಚಾಯತಿಗಳ ೧೫೯೨ ಸ್ಥಾನಗಳ ಪೈಕಿ ೧೫೪ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದರೆ, ೪೧ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವದಿಲ್ಲ. ೮೮ ಗ್ರಾ.ಪಂಗಳ ಒಟ್ಟು ೧೩೯೭ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯಕ್ಕೆ ೭೨೦ ಪ್ರಿಸೆಂಡಿಗ್ ಅಧಿಕಾರಿ, ೭೨೦ ಸಹಾಯಕ ಪ್ರಿಸೆಂಡಿAಗ್ ಅಧಿಕಾರಿ ಹಾಗೂ ೧೪೪೦ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು ೨೮೮೦ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಮಖಂಡಿ ಉಪವಿಭಾಗದ ಒಟ್ಟು ೪೮೦೨೪೨ ಮತದಾರರು ಇದ್ದು, ಅದರಲ್ಲಿ ೨೩೯೪೩೭ ಪುರುಷ ಮತದಾರರು, ೨೪೦೭೮೭ ಮಹಿಳಾ ಮತದಾರರಿದ್ದರೆ, ೧೮ ಇತರೆ ಮತದಾರರಿದ್ದಾರೆ. ಜಮಖಂಡಿ ತಾಲೂಕಿನ ೨೫ ಗ್ರಾಮ ಪಂಚಾಯತಿಗಳಿಗೆ ೧೯೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೭೮೪೭೭ ಪುರುಷರು, ೭೬೯೯೫ ಮಹಿಳಾ ಹಾಗೂ ೪ ಇತರೆ ಸೇರಿ ಒಟ್ಟು ೧೫೫೪೭೬ ಮತದಾರರಿದ್ದಾರೆ. ಮುಧೋಳ ತಾಲೂಕಿನಲ್ಲಿ ೨೨ ಗ್ರಾಮ ಪಂಚಾಯತಿಗಳಿಗೆ ೧೫೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೫೯೨೧೮ ಪುರುಷ, ೬೧೦೭೯ ಮಹಿಳಾ ಮತ್ತು ೧ ಇತರೆ ಸೇರಿ ಒಟ್ಟು ೧೨೦೨೯೮ ಮತದಾರರಿದ್ದಾರೆಂದು ತಿಳಿಸಿದರು.
ರಬಕವಿ ಬನಹಟ್ಟಿ ತಾಲೂಕಿನಲ್ಲಿ ೧೭ ಗ್ರಾಮ ಪಂಚಾಯತಿಗಳಿಗೆ ೧೨೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೪೬೦೦೩ ಪುರುಷ, ೪೫೭೯೪ ಮಹಿಳಾ ಮತ್ತು ೪ ಇತರೆ ಸೇರಿ ಒಟ್ಟು ೯೧೮೦೧ ಮತದಾರರಿದ್ದಾರೆ. ಬೀಳಗಿ ತಾಲೂಕಿನಲ್ಲಿ ೨೪ ಗ್ರಾಮ ಪಂಚಾಯತಿಗಳಿಗೆ ೧೩೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೫೫೭೩೯ ಪುರುಷ, ೫೬೯೧೯ ಮಹಿಳಾ ಮತ್ತು ೯ ಇತರೆ ಸೇರಿ ಒಟ್ಟು ೧೧೨೬೬೭ ಮತದಾರರಿದ್ದಾರೆ ಎಂದು ತಿಳಿಸಿದರು.
ಮತದಾರರ ಎಡಗೈ ಹೆಬ್ಬಟ್ಟಿಗೆ ಅಳಿಸಲಾಗದ ಶಾಹಿ
ಜಿಲ್ಲೆಯಲ್ಲಿ ಡಿಸೆಂಬರ ೨೨ ರಂದು ನಡೆಯಲಿರುವ ಮೊದಲ ಹಂತದ ಹಾಗೂ ಡಿಸೆಂಬರ ೨೭ ರಂದು ನಡೆಯಲಿರುವ ಎರಡನೇ ಹಂತದ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೆ ಅಳಿಸಲಾಗದ ಶಾಯಿಯನ್ನು ಮತದಾರನ ಎಡಗೈನ ಹೆಬ್ಬರಳಿಗೆ ಹಚ್ಚುವಂತೆ ರಾಜ್ಯ ಚುನಾವಣಾ ಆಯೋಗವು ನಿರ್ಧಿಷ್ಟಪಡಿಸಿದೆ.