This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

National News

ಹಣಕಾಸು ಸ್ಥಿರತೆ ಸಾಧಿಸುವ ಗುರಿಗೆ ನಾವು ಬದ್ಧರಾಗಿರುತ್ತೇವೆ: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಂದಾಜು

ಹಣಕಾಸು ಸ್ಥಿರತೆ ಸಾಧಿಸುವ ಗುರಿಗೆ ನಾವು ಬದ್ಧರಾಗಿರುತ್ತೇವೆ: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಂದಾಜು

ನವದೆಹಲಿ: ಭಾರತದ ಆರ್ಥಿಕತೆ ಈ ಹಣಕಾಸು ವರ್ಷ ಶೇ 8ಕ್ಕೆ ಸಮೀಪದಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಂದಾಜು ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.4ರಷ್ಟು ಅಮೋಘ ಹೆಚ್ಚಳ ಕಂಡಿದ್ದು, ಬೆನ್ನಲ್ಲೇ ಸರ್ಕಾರ 2024ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ತನ್ನ ನಿರೀಕ್ಷೆಯನ್ನು ಶೇ. 7.3ರಿಂದ ಶೇ. 7.6ಕ್ಕೆ ಹೆಚ್ಚಿಸಿತ್ತು. ಈಗ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇದಕ್ಕೂ ಹೆಚ್ಚಿನ ಪ್ರಮಾಣದ ಬೆಳವಣಿಗೆಯ ಸಾಧ್ಯತೆಯನ್ನು ಅಂದಾಜಿಸಿದ್ದಾರೆ.‘ಆರ್ಥಿಕ ಚಟುವಟಿಕೆಯ ವಿವಿಧ ಸೂಚಕ ಮತ್ತು ಗತಿಗಳನ್ನು ಗಮನಿಸಿದಾಗ ನಾಲ್ಕನೇ ಕ್ವಾರ್ಟರ್​ನಲ್ಲಿ (ಜನವರಿಯಿಂದ ಮಾರ್ಚ್) ಶೇ. 5.9ರಷ್ಟಾದರೂ ವೃದ್ಧಿ ಆಗಬಹುದು.

ಇಡೀ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ಶೇ. 7.6ಕ್ಕಿಂತಲೂ ಹೆಚ್ಚೇ ಆಗುತ್ತಿದ್ದು, ಜಿಡಿಪಿ ಬೆಳವಣಿಗೆ ಶೇ. 8ಕ್ಕೆ ಬಹಳ ಸಮೀಪವಂತೂ ಇರಬಹುದು,’ ಎಂದು ಶಕ್ತಿಕಾಂತ್ ದಾಸ್ ಇಟಿ ನೌ ವಾಹಿನಿಯ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.‘ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿ ಬೇಡಿಕೆ ಬಹಳ ಉತ್ತಮವಾಗಿದ್ದು, ನಗರದಲ್ಲಿಯೂ ಬೇಡಿಕೆ ಉತ್ತಮವಾಗಿದೆ. ಹೂಡಿಕೆ ಚಟುವಟಿಕೆ ಪ್ರಬಲವಾಗಿದೆ. ಸರ್ಕಾರ ಮತ್ತು ಖಾಸಗಿ ಎರಡೂ ಕಡೆಯಿಂದಲೂ ಬಂಡವಾಳ ವೆಚ್ಚ ಹರಿದುಬರುತ್ತಿದೆ. ಅದರಲ್ಲೂ ಉಕ್ಕು ಇತ್ಯಾದಿ ಪ್ರಮುಖ ಕ್ಷೇತ್ರಗಳಲ್ಲಿ ಬಂಡವಾಳ ಸಿಗುತ್ತಿದೆ. ಕಟ್ಟಡ ನಿರ್ಮಾನ, ಜವಳಿ, ರಾಸಾಯನಿಕಕ್ಕೆ ಸಂಬಂಧಿಸಿದ ಕೆಲ ವಲಯಗಳಲ್ಲೂ ಬಂಡವಾಳ ವೆಚ್ಚ ಹೆಚ್ಚಾಗುತ್ತಿದೆ,’ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಆರ್​ಬಿಐ ಅಂದಾಜು ಪ್ರಕಾರ ಜಿಡಿಪಿ ದರ 2023-24ರ ಹಣಕಾಸು ವರ್ಷದಲ್ಲಿ ಶೇ. 8ಕ್ಕೆ ಸಮೀಪ ಇರಬಹುದು. 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7ರಷ್ಟು ಬೆಳೆಯಬಹುದು ಎಂದು ಅದು ನಿರೀಕ್ಷಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಅದೇ ನಿರೀಕ್ಷೆ ಪುನರುಚ್ಚರಿಸಿದ್ದಾರೆ.ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವ ಗುರಿಯತ್ತ ಆರ್​​ಬಿಐನ ಎಂಪಿಸಿ ಗಮನ ನೆಟ್ಟಿರುತ್ತದೆ. ಯಾವ ರೀತಿಯಲ್ಲೂ ನಿರಾಳರಾಗಿರಲು ಅವಕಾಶ ಇರದು. ಹಣಕಾಸು ಸ್ಥಿರತೆ ಸಾಧಿಸುವ ಗುರಿಗೆ ನಾವು ಬದ್ಧರಾಗಿರುತ್ತೇವೆ ಎಂದು ದಾಸ್ ತಿಳಿಸಿದರು.

Nimma Suddi
";