ಮಹಾರಾಷ್ಟ್ರ: ನಾವು ನಿಮ್ಮೊಂದಿಗೇ ಇದ್ದೆವು ಆದರೆ ನೀವೇ ನಮ್ಮನ್ನು ದೂರ ತಳ್ಳಿದ್ದೀರಿ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕೂಡ ನಮ್ಮ ಪಕ್ಷ ಎಂದಿಗೂ ಬಿಜೆಪಿಯ ಶತ್ರುವಲ್ಲ, 2019ರಲ್ಲಿ ಶಿವಸೇನೆ ನಿಮ್ಮೊಂದಿಗಿತ್ತು, ನೀವು ಪ್ರಧಾನಿಯಾದಿರಿ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿ ಮಾತನಾಡಿದ್ದು, ಹೊರತಾಗಿಯೂ ಬಿಜೆಪಿ ಶಿವಸೇನೆಯನ್ನು ದೂರ ತಳ್ಳಿತ್ತು ಎಂದು ಹೇಳಿದ್ದಾರೆ.ಠಾಕ್ರೆ ಹೇಳಿಕೆ ನಂತರ ಸಾಕಷ್ಟು ಊಹಾಪೋಹಗಳು ಹುಟ್ಟಿದೆ.
ಇತ್ತೀಚೆಗಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ಡಿಎಗೆ ಮರಳಿದ್ದು, ಉದ್ಧವ್ ಅವರ ಹೇಳಿಕೆಯಿಂದ ಹಲವು ಅರ್ಥ ಕಲ್ಪಿಸಿಕೊಳ್ಳಲಾಗುತ್ತಿದ್ದು, ಉದ್ಧವ್ ಠಾಕ್ರೆ ಅವರ ಶಿವಸೇನೆ ದೀರ್ಘಕಾಲದಿಂದ ಎನ್ಡಿಎ ಭಾಗವಾಗಿದೆ, ಕೆಲವು ವರ್ಷಗಳ ಹಿಂದೆ ಬಿಜೆಪಿ ಹಾಗೂ ಶೀವಸೇನೆ ನಡುವೆ ಘರ್ಷಣೆ ನಡೆದಿತ್ತು.