This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ತೋವಿವಿ ಬಾಗಲಕೋಟೆಯ ೧೨ನೇ ಸಂಸ್ಥಾಪನಾ ದಿನಾಚರಣೆ

ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ೨೦೦೮ರಲ್ಲಿ ರಾಷ್ಟçದ ೩ನೇ ಮತ್ತು ರಾಜ್ಯದ ಪ್ರಥಮ ತೋಟಗಾರಿಕೆ ವಿಶ್ವವಿದ್ಯಾಲಯವಾಗಿ ಸ್ಥಾಪನೆಗೊಂಡು ೧೧ ಸಾರ್ಥಕ ಸಂವತ್ಸರ ಪೂರ್ಣಗೊಳಿಸಿ ೧೨ನೇ ವಸಂತಕ್ಕೆ ದಾಪುಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿ ನ.೨೩ರಂದು ವಿವಿ ತನ್ನ ೧೨ನೇ ಸಂಸ್ಥಾಪನಾ ದಿನವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳುತ್ತಿದೆ.
ಈ ಸಂದರ್ಭದಲ್ಲಿ ಡಾ.ಕೆ.ಸಿ.ನಾರಾಯಣಗೌಡ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರು ಕರ್ನಾಟಕ ಸರ್ಕಾರ, ಬೆಂಗಳೂರು ಇವರು ಸಮಾರಂಭವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಲಿದ್ದು, ಬಾಗಲಕೋಟೆಯ ಜನಪ್ರೀಯ ಶಾಸಕ ಡಾ.ವೀರಣ್ಣ ಚರಂತಿಮಠ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಡಾ.ಆರ್.ಸಿ.ಅಗರವಾಲಾ, ಗೌರವಾನ್ವಿತ ಉಪ ಮಹಾನಿರ್ದೇಶಕರು, ಐಸಿಎಆರ್ ಕೃಷಿ ಅನುಸಂಧಾನ ಭವನ, ನವದೆಹಲಿ ಹಾಗೂ ಡಾ.ವಸಂತಕುಮಾರ್.ಟಿ ತಾಂತ್ರಿಕ ನಿರ್ದೇಶಕರು, ಗ್ರೀನ್ ಲೈಫ್ ಸೈನ್ಸ್ ಟೆಕ್ನಾಲೊಜಿಸ್, ಮೈಸೂರು ಇವರು ಪಾಲ್ಗೊಳ್ಳಲಿದ್ದಾರೆ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಕೆ.ಎಮ್.ಇಂದಿರೇಶ್ ವಹಿಸಲಿದ್ದಾರೆ.
ವಿಶ್ವವಿದ್ಯಾಲಯವು ತನ್ನ ಆವರಣದಲ್ಲಿ ತೋಟಗಾರಿಕೆ ಬೆಳೆಗಳ ಸಮಗ್ರ ಮಾಹಿತಿ ಹಾಗೂ ಸಂಶೋಧನಾ ಮಾದರಿ ತಾಕುಗಳು ಮತ್ತು ಸಮಗ್ರ ಕೃಷಿ ಪದ್ದತಿ ಮಾದರಿಗಳನ್ನು ನಿರ್ಮಿಸಿ ಕರ್ನಾಟಕ ರಾಜ್ಯದಲ್ಲಿ ಮತ್ತು ರಾಷ್ಟç ಮಟ್ಟದಲ್ಲಿ ಒಂದು ಮಾದರಿ ವಿಶ್ವವಿದ್ಯಾಲಯವಾಗಿದೆ. ತೋಟಗಾರಿಕೆ ವಿಶ್ವವಿದ್ಯಾಲಯವು ಮುಖ್ಯ ಆವರಣ ಮಾತ್ರವಲ್ಲದೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೯ ಮಹಾವಿದ್ಯಾಲಯಗಳು, ೧೧ ಸಂಶೋಧನಾ ಕೇಂದ್ರಗಳು, ೧೦ ಅಖಿಲ ಭಾರತ ಸಮನ್ವಯ ಬೆಳೆ ಯೋಜನೆಗಳು ೧೨ ವಿಸ್ತರಣಾ ಶಿಕ್ಷಣ ಘಟಕಗಳು ಮತ್ತು ಒಂದು ಕೃಷಿ ವಿಜ್ಞಾನ ಕೇಂದ್ರದ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ ಸೂಕ್ತ ಮಾನವ ಸಂಪನ್ಮೂಲಗಳೊಂದಿಗೆ ರೈತರ ಅಭಿವೃದ್ಧಿಗಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾದ ಕರ್ನಾಟಕ ಘನ ಸರ್ಕಾರಕ್ಕೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿಗೆ ವಿಶ್ವವಿದ್ಯಾಲಯವು ಆಭಾರಿಯಾಗಿದೆ.
ಶಿಕ್ಷಣ
ವಿಶ್ವವಿದ್ಯಾಲಯವು ಈಗಾಗಲೇ ರಾಷ್ಟçಮಟ್ಟದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ. ವಿಶ್ವವಿದ್ಯಾಲಯದ ವಿಮರ್ಶನಾ ಸಮಿತಿಯು ಭೇಟಿಕೊಟ್ಟು ಕಳೆದ ವರ್ಷ ಐದು ವರ್ಷಗಳ ಅವಧಿಯಲ್ಲಿ ವಿಶ್ವವಿದ್ಯಾಲಯದ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿ, ಶ್ಲಾಘಿಸಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿ ತೋ.ವಿ.ವಿ.ಬಾಗಲಕೋಟೆಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನವದೆಹಲಿಯಿಂದ ದಿನಾಂಕ ೦೧.೦೪.೨೦೧೯ ರಿಂದ ೩೧.೦೩.೨೦೨೪ರ ವರೆಗೆ ೫ ವರ್ಷಗಳ ಅವಧಿಗೆ ಮಾನ್ಯತೆಯನ್ನು ನೀಡಿರುವುದು ಒಂದು ಹೆಮ್ಮೆಯ ವಿಷಯವಾಗಿದೆ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಬೆಂಗಳೂರು ವಿಶ್ವವಿದ್ಯಾಲಯದ ಸಾಧನೆಯನ್ನು ಗಮನಿಸಿ ೨೦೧೯-೨೦ ನೇ ಸಾಲಿಗೆ ೪ ಸ್ಟಾರ್(ನಕ್ಷತ್ರ) ನ ಮಾನ್ಯತೆ ನೀಡಿರುತ್ತದೆ. ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ಸಾಧಿಸಿ ತನ್ನದೇ ಛಾಪು ಮೂಡಿಸಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್, ನವದೆಹಲಿ ಶಿಫಾರಸ್ಸು ಮೇರೆಗೆ ೨೦೧೮-೧೯ ರಲ್ಲಿ ದೇಶದ ೬೩ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ರಾಷ್ಟçಮಟ್ಟದಲ್ಲಿ ೪೩ನೇ ಸ್ಥಾನ ಪಡೆದಿದೆ. ದೇಶದ ೮ ತೋಟಗಾರಿಕೆ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರದಲ್ಲಿ ಮೊದಲನೇಯ ಸ್ಥಾನವನ್ನು ಅಲಂಕರಿಸಿದೆ. ಅಲ್ಲದೇ, ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನಡೆಸುವ ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಗಣನೀಯ ಸಾಧನೆ ತೋರಿಸಿದ್ದಾರೆ, ಪ್ರಸಕ್ತ ಸಾಲಿನಲ್ಲಿ ೫೯ ಜೆ.ಆರ್.ಎಫ್, ೪೮ ನಾನ್ ಜೆಆರ್‌ಎಫ್, ೧೫ ಎಸ್.ಆರ್.ಎಫ್ ಹಾಗೂ ೦೫ ನಾನ್ ಎಸ್.ಆರ್. ಎಫ್‌ಗಳನ್ನು ಪಡೆದುಕೊಂಡು ವಿಶ್ವವಿದ್ಯಾಲಯದ ಕೀರ್ತಿಯನ್ನು ರಾಷ್ಟçಮಟ್ಟದಲ್ಲಿ ಹೆಚ್ಚಿಸಿರುತ್ತಾರೆ. ನಮ್ಮ ವಿಶ್ವವಿದ್ಯಾಲಯವು ಸ್ಥಾಪನೆಯಾದ ೧೧ ವರ್ಷಗಳ ಅಲ್ಪಾವಧಿಯಲ್ಲಿ ರಾಷ್ಟç ಮಟ್ಟದಲ್ಲಿ ಸತತವಾಗಿ ೫ ಬಾರಿ ಪ್ರಥಮ ಸ್ಥಾನವನ್ನು ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ವಿಶ್ವವಿದ್ಯಾಲಯವು ಹಸಿರು ಪದವಿಧಾರಣೆ ಎಂಬ ವಿನೂತನ ಕಾರ್ಯಕ್ರಮವನ್ನು ೮ನೇ ಸಂಸ್ಥಾಪನಾ ದಿನಾಚರಣೆಯಂದು ಜಾರಿಗೊಳಿಸಲಾಗಿತ್ತು. ಈ ಕಾರ್ಯಕ್ರಮದಡಿಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ತಮ್ಮ ಮಹಾವಿದ್ಯಾಲಯಗಳ ಆವರಣದಲ್ಲಿ ಒಂದು ಸಸಿ ನಾಟಿ ಮಾಡಿ ತಮ್ಮ ನಾಲ್ಕು ವರ್ಷದ ಪದವಿ ಅವಧಿಯಲ್ಲಿ ಪೋಷಿಸುವ ಅವಕಾಶವನ್ನು ಕಲ್ಪಿಸಿ, ತಾವೇ ಪೋಷಿಸಿದ ಗಿಡದ ಛಾಯಾಚಿತ್ರದೊಂದಿಗೆ ಹಸಿರು ಪದವಿ ಪ್ರಶಸ್ತಿ ಪತ್ರವನ್ನು ನೀಡುವ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಇಲ್ಲಿಯವರೆಗೆ ಸುಮಾರು ೪ ಸಾವಿರ ವಿವಿಧ ತರಹದ ಸಸಿಗಳನ್ನು ಈ ಕಾರ್ಯಕ್ರಮದಲ್ಲಿ ಬೆಳೆಸಲಾಗಿದೆ ಹಾಗೂ ಹಸಿರು ಪರಿಸರವನ್ನು ನಿರ್ಮಿಸಲು ಈ ವಿಶ್ವವಿದ್ಯಾಲಯವು ಕಾರ್ಯೋನ್ಮುಖವಾಗಿದೆ.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಕೂಡ, ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಯನ್ನು ತೋರಿಸಿರುತ್ತಾರೆ ಹಾಗೂ ರಾಷ್ಟಿçÃಯ ಸ್ವಯಂ ಸೇವೆ ಯೋಜನೆಯ ಅಡಿಯಲ್ಲಿ ರಾಷ್ಟçಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಸಕ್ತ ಸಾಲಿನಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಸುಮಾರು ೧೯೬ ಡಿಪ್ಲೊಮ, ೨೨೯೧ ಸ್ನಾತಕ, ೩೦೯ ಸ್ನಾತಕೋತ್ತರ ಮತ್ತು ೧೮೯ ಪಿ.ಹೆಚ್.ಡಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುತ್ತಾರೆ. ಇದುವರೆಗೂ ಈ ವಿಶ್ವವಿದ್ಯಾಲಯದಿಂದ ಸುಮಾರು ೪,೪೦೨ ವಿದ್ಯಾರ್ಥಿಗಳು ಡಿಪ್ಲೊಮಾ ಹಾಗೂ ವಿವಿಧ ಪದವಿಗಳನ್ನು ಪಡೆದುಕೊಂಡಿರುತ್ತಾರೆ.
ಸಂಶೋಧನೆ:
ರಾಜ್ಯದ ೨೩ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ ವಿಶ್ವವಿದ್ಯಾಲಯವು ರೈತರ ಸಮಸ್ಯೆಗಳಿಗೆ ಹಲವಾರು ರೀತಿಯಿಂದ ಸ್ಪಂದಿಸುತ್ತಿದೆ. ಇದಲ್ಲದೆ ಬೇರೆ ಬೇರೆ ಸಂಸ್ಥೆಗಳಿಂದ ಆರ್ಥಿಕ ಅನುಧಾನವನ್ನು ಪಡೆದು ವಿವಿಧ ಸಂಶೋಧನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದುವರೆದು, ಸುಮಾರು ೨೮ ಬಾಹ್ಯ ಸಂಸ್ಥೆಗಳ ಅನುಧಾನ ಯೋಜನೆಗಳು ಮತ್ತು ೩೫ ರೈತರ ಕ್ಷೇತ್ರ ಪ್ರಯೋಗಗಳನ್ನು ಮುಂದುವರೆಸಲಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಇದುವರೆಗೂ ಸುಮಾರು ೧೩ ಮುಖ್ಯ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವುಗಳಲ್ಲಿ ಪ್ರಮುಖವಾದವುಗಳೆಂದರೆ ೧) ಭಾಗ್ಯ ೨) ಚೈನ ಆಸ್ಟರ್, ೩) ಕೊತ್ತಂಬರಿ ೪) ಫೆನುಗ್ರೀಕ್ ೫) ಮೆಣಸಿನಕಾಯಿ ೬) ಮೆಣಸಿನಕಾಯಿ ೭) ಟೊಮ್ಯಾಟೊ ೮) ಹುಣಸೆ ೯) ಹಲಸು ೧೦) ಕ್ಲಸ್ಟರ ಬೀನ್ಸ್ ೧೧) ಈರುಳ್ಳಿ ೧೨) ಸೊಯಾಬಿನ್ ತರಕಾರಿ ೧೩) ಓರಿಯೆಂಟಲ್ ಪಿಕಲಿಂಗ್ ಮೆಲೊನ್ ೧೪) ಓರಿಯೆಂಟಲ್ ಪಿಕಲಿಂಗ್ ಮೆಲೊನ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ೫ ತಳಿಗಳನ್ನು (ಚಿಕ್ಕು- ಕೋತಂಬರಿ- ವರದೇವಿ ಮೆಣಸಿನಕಾಯಿ- ವರದಾ (ಮತ್ತು ಅಡಿಕೆ – ಸೈಹ್ಯಾದ್ರಿ ಅಡಿಕೆ-೨ ಮತ್ತು ಸೈಹ್ಯಾದ್ರಿ ಅಡಿಕೆ -೩ ನವದೆಹಲಿಯ ಕೇಂದ್ರೀಯ ತಳಿಗಳ ಗುಣಮಟ್ಟ ಅಧಿಸೂಚನೆ ಮತ್ತು ತಳಿ ಬಿಡುಗಡೆ ಉಪಸಮಿತಿಯಿಂದ ಅಧಿಸೂಚನೆ ಹೊರಡಿಸಿದೆ. ತೋ.ವಿ.ವಿ. ಬಾಗಲಕೋಟೆಯು ಹಲವಾರು ಹೂವು, ಹಣ್ಣು, ತರಕಾರಿ ಹಾಗೂ ಕೋಯ್ಲೋತ್ತರ ತಂತಜ್ಞಾನಗಳ ವಿಭಾಗದಲ್ಲಿ ಉತ್ಕೃಷ್ಟ ಕೇಂದ್ರಗಳನ್ನು ಸ್ಥಾಪಿಸಿದೆ. ಇದಲ್ಲದೇ, ಮಣ್ಣು ಹಾಗೂ ನೀರನ್ನು ವಿಶ್ಲೇಷಣೆ, ಸಸಿಗಳಲ್ಲಿ ವಿಶ್ಲೇಷಣೆ, ತೋಟಗಾರಿಕೆ ರಫ್ತು ಮತ್ತು ತೋಟಗಾರಿಕೆ ಉದ್ಯಮದಲ್ಲಿ ಉತ್ಕೃಷ್ಟ ಕೇಂದ್ರಗಳನ್ನು ಸ್ಥಾಪಿಸಿ ಸಂಶೋಧನೆ ನಡೆಸುತ್ತಿದೆ. ವಿಶ್ವವಿದ್ಯಾಲಯವು ೨೦೧೯-೨೦ನೇ ಸಾಲಿನಲ್ಲಿ ವಿವಿಧ ಮಹಾವಿದ್ಯಾಲಯಗಳು ಹಾಗೂ ಸಂಶೋಧನಾ ಕೇಂದದ್ರಗಳಿAದ ಸುಮಾರು ೨,೪೮,೭೨೬ ಗಳ ವಿವಿಧ ತಳಿ ಕಸಿ ಮಾಡಿದ ಉತ್ಕೃಷ್ಟ ಸಸಿಗಳನ್ನು ಹಾಗೂ ೮೭,೫೭೫ ಕೆ.ಜಿ. ಗಳಷ್ಟು ಬೀಜಗಳನ್ನು ವಿವಿಧ ಬೆಳೆಗಳಾದ ನುಗ್ಗೆ, ಈರುಳ್ಳಿ, ಮೆಣಸಿನಕಾಯಿ ಹಾಗೂ ತರಕಾರಿ ತಳಿಗಳಲ್ಲಿ ಉತ್ಪಾದಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದು, ಅದರಿಂದ ಸುಮಾರು ರೂ.೬೦.೦೦ ಲಕ್ಷಗಳಷ್ಟು ಆದಾಯವನ್ನು ಗಳಿಸಿರುತ್ತದೆ. ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಜೈವಿಕ ಉತ್ಪನ್ನಗಳು, ಸಸ್ಯ ಪ್ರಚೋದಕಗಳು, ದುಂಡಾಣು ರಕ್ಷಕ, ದಾರಕ್ಷಕ, ಟ್ರೆöಕೋಕವಚ ತಂತ್ರಜ್ಞಾನಗಳನ್ನು ರೈತರಿಗೆ ಸುಲಭವಾಗಿ ದೊರಕುವಂತಾಗಲು ನಮ್ಮ ವಿದ್ಯಾರ್ಥಿಗಳ ಮತ್ತು ಖಾಸಗೀ ಉದ್ಯಮಿಗಳ ಮೂಲಕ ತಂತ್ರಜ್ಞಾನಗಳನ್ನು ರೈತರಿಗೆ ವರ್ಗಾವಣೆಗೊಳಿಸಲಾಗುತ್ತಿದೆ. ಸಂಶೋಧನೆ ಕಾರ್ಯಗಳಿಗೆ ಒಟ್ಟು ರೂ.೧,೬೯೩.೦೦ ಲಕ್ಷಗಳ ಅನುದಾನವನ್ನು ವಿವಿಧ ರಾಜ್ಯಮಟ್ಟದ ಹಾಗೂ ರಾಷ್ಟç ಮಟ್ಟದ ಸಂಸ್ಥೆಗಳಿAದ ಕ್ರೋಢಿಕರಿಸಿ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಆಲೂಗಡ್ಡೆಯಲ್ಲಿ ಎಪಿಕಲ್ ರೂಟೆಡ್ ಕಟಿಂಗ್ ತಾಂತ್ರಿಕತೆಯನ್ನು ಅಳವಡಿಸಿ ಉತ್ತಮ ಗುಣಮಟ್ಟದ ಆಲೂಗಡ್ಡೆ ಸಸಿಗಳನ್ನು ರೈತರಿಗೆ ಒದಗಿಸಲಾಗಿದೆ. ಇದಲ್ಲದೇ, ಈ ವಿಶ್ವವಿದ್ಯಾಲಯದಿಂದ ಸುಮಾರು ೩೪ ತಾಂತ್ರಿಕತೆಗಳನ್ನು ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಿ ರೈತಾಪಿ ವರ್ಗಕ್ಕೆ ಸಮರ್ಪಣೆ ಮಾಡಲಾಗಿದೆ. ವಿವಿಧ ಜೈವಿಕ ಗೊಬ್ಬರಗಳನ್ನು ಹಾಗೂ ಜೀವಾಣುಗಳ ಉತ್ಪಾದನೆ, ಅಂಗಾAಶ ಕೃಷಿ, ಸಸಿಗಳ ಉತ್ಪಾದನೆ, ಮತ್ತು ಕೋಯ್ಲೋತ್ತರ ಉತ್ಪನ್ನಗಳ ಅಭಿವೃದ್ಧಿಗೆ ಹಾಗೂ ಇನುಕ್ಯೂಬೇಷನ್ ಕೇಂದ್ರಗಳನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಸಂಶೋಧನೆ ಹಾಗೂ ಶಿಕ್ಷಣದ ಅಭಿವೃದ್ಧಿಗಾಗಿ ಸುಮಾರು ೫೫ ವಿವಿಧ ಅಂತರ್‌ರಾಷ್ಟಿçÃಯ ಹಾಗೂ ರಾಷ್ಟಿçಯ ಮತ್ತು ಖಾಸಗಿ ಸಂಸ್ಥೆಗಳಿಂದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ವಿಸ್ತರಣೆ:
ತೋ.ವಿ.ವಿ. ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿ ೧೨ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ೧ ಕೃಷಿ ವಿಜ್ಞಾನ ಕೇಂದ್ರ, ಒಂದು ಪ್ರಕಟಣಾ ಕೇಂದ್ರ ಹಾಗೂ ತೋಟಗಾರಿಕೆ ಮಾಹಿತಿ ಕೇಂದ್ರ ಹಾಗೂ ರೈತ ತರಬೇತಿ ಕೇಂದ್ರಗಳು ಸಹ ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷವು ಈ ನಿರ್ದೇಶನಾಲಯದಿಂದ ಉದ್ಯಾನ ಮೇಳ, ನಿರ್ದಿಷ್ಟ ಬೆಳೆಗಳ ಪ್ರದರ್ಶನಗಳನ್ನು, ವಿಜ್ಞಾನಿಗಳಿಂದ ಸಮಸ್ಯಾತ್ಮಕ ತಾಕುಗಳ ಭೇಟಿ, ಗುರುತಿಸಿದ ತಾಕುಗಳ ಭೇಟಿ, ಕ್ಷೇತ್ರ ಪ್ರಯೋಗಗಳು ಹಾಗೂ ಪ್ರದರ್ಶನಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದುವರೆದು, ರೈತರ ಪ್ರವಾಸಗಳು, ಎಸ್.ಎಂ.ಎಸ್ ಸೇವೆಗಳು, ರೈತರ ಸಹಾಯವಾಣಿ, ರೈತರ ತರಬೇತಿ ಹಾಗೂ ವಿಚಾರ ಸಂಕಿರಣಗಳನ್ನು ಕೂಡ ಈ ವಿಭಾಗದಿಂದ ಹಮ್ಮಿಕೊಳ್ಳಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಉದ್ಯಾನ ಮಿತ್ರ [ಹಾರ್ಟಿ ಆಪ್] ಎಂಬ ಆಪ್‌ನ್ನು ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದೆ. ಇದರಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.
ವಿನೂತನ ವಿಸ್ತರಣಾ ಕಾರ್ಯಕ್ರಮಗಳು :
• “ಪ್ರತಿವಾರ-ಪರಿಹಾರ”
• “ಉದ್ಯಾನ ಸಹಾಯವಾಣಿ” ರೈತರಿಗಾಗಿ ಉಚಿತ ಕರೆ (ನಂ. ೧೮೦೦ ೪೨೫ ೭೯೧೦) ಸೌಲಭ್ಯವನ್ನು ಲೋಕಾರ್ಪಣೆಗೊಂಡಿದ್ದು, ರೈತರ ಸಮಸ್ಯೆಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸಿ ತಾಂತ್ರಿಕ ಮಾಹಿತಿ ನೀಡಲಾಗಿದೆ.
• “ಉದ್ಯಾನ ಮಿತ್ರ” ಎಂಬ ಹಾರ್ಟಿ ಆ್ಯಪ್ ತಂತ್ರಾAಶ : ರೈತರಿಗೆ ಅವರ ಅಂಗೈಯಲ್ಲಿಯೇ ತೋಟಗಾರಿಕೆ ಬೆಳೆಗಳ ಮಾಹಿತಿ ಹಾಗೂ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸುವ ಉದ್ದೇಶದಿಂದ “ಉದ್ಯಾನ ಮಿತ್ರ” ಎಂಬ ಹಾರ್ಟಿ ಆ್ಯಪ್ ತಂತ್ರಾAಶವನ್ನು ಅಭಿವೃದ್ಧಿಪಡಿಸಿ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಲಿದೆ.
• ಉದ್ಯಾನಲೋಕ ತ್ರೆöÊಮಾಸಿಕ ಪತ್ರಿಕೆ – ರೈತರಿಗೆ ತಾಂತ್ರಿಕ ಮಾಹಿತಿ ವರ್ಗಾವಣೆ ಮಾಡಲು ಪ್ರಕಟಿಸುತ್ತಿದೆ.

ರಾಷ್ಟç ಹಾಗೂ ರಾಜ್ಯಮಟ್ಟದಲ್ಲಿ ಆತಂಕವನ್ನು ಮೂಡಿಸಿದ್ದ ಕೋವಿಡ್-೧೯ರಂತಹ ಪರಿಸ್ಥಿತಿಯಲ್ಲಿಯೂ ಕೂಡ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯದಿಂದ ಹಲವಾರು ಗುಂಪುಗಳನ್ನು ರಚಿಸಿ ರೈತರ ಮಾಹಿತಿ ಹಾಗೂ ಮಾರುಕಟ್ಟೆಗೆ ಸಂಬAಧಿಸಿದ ಮಾಹಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ ಮತ್ತು ಖರೀಧಿದಾರರಿಗೆ ಒಂದು ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸಲಾಗಿರುತ್ತದೆ.
ವಿಶ್ವವಿದ್ಯಾಲಯವು ರಾಜ್ಯದ ತೋಟಗಾರಿಕೆ ಕ್ಷೇತ್ರ ಎದುರಿಸುತ್ತಿರುವ ಹಲವಾರು ತಾಂತ್ರಿಕ ಸವಾಲುಗಳನ್ನು, ಎದುರಿಸಲು ವಿವಿಧ ಯೋಜನೆಗಳ ಮುಖಾಂತರ ಸೂಕ್ತ ಪರಿಹಾರೋಪಾಯವನ್ನು ರೈತ ಸಮುದಾಯಕ್ಕೆ ನೀಡಲು ಬದ್ಧವಾಗಿದೆ ಎಂದು ಸಂಸ್ಥಾಪನಾ ದಿನಾಚರಣೆ ಸ್ವಾಗತ ಸಮಿತಿ ಅಧ್ಯಕ್ಷ ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಎಂ.ಎಸ್.ಕುಲಕರ್ಣಿ ತಿಳಿಸಿದ್ದಾರೆ.

Nimma Suddi
";