ನಿಮ್ಮ ಸುದ್ದಿ ಬೆಂಗಳೂರು
ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೆಲ ನಿಯಮಗಳನ್ನು ಜಾರಿಗೊಳಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ತಜ್ಞರ ಸಭೆ ನಡೆಸಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಸಭೆ ನಿರ್ಧಾರಗಳನ್ನು ಮಾದ್ಯಮದವರಿಗೆ ತಿಳಿಸಿದ ಸಚಿವ ಆರ್.ಅಶೋಕ, ಓಮಿಕ್ರಾನ್ ವೈರಸ್ ತೀವ್ರತೆ ಇಲ್ಲ, ಆದರೂ ಮುಂಜಾಗ್ರತೆ ಕ್ರಮವಾಗಿ ಕೆಲ ನಿಯಮ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ ಎಂದರು.
ಸಿನೇಮಾ ಹಾಲ್, ಮಾಲ್, ಹಾಗೂ ಶಾಲೆಗಳಲ್ಲಿ ಪ್ರವೇಶಿಸುವವರು ಕಡ್ಡಾಯವಾಗಿ ಕೋವಿಡ್ ಎರಡೂ ಡೋಸ್ ಪಡೆದಿರಲೇಬೇಕು. ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ 2 ಡೋಸ್ ಪಡೆದಿರಲೇಬೇಕು ಎಂದು ಹೇಳಿದರು.
ರಾಜ್ಯದ ಯಾವುದೇ ಶಾಲೆಗಳಲ್ಲಿ ಸಭೆ ಹಾಗೂ ಸಮಾರಂಭ ನಡೆಸುವುದನ್ನು ರದ್ದುಗೊಳಿಸಲಾಗಿದೆ. ವಿವಾಹ ಸಮಾರಂಭದಲ್ಲಿ 500 ಜನರಿಗೆ ಮಾತ್ರ ಅವಕಾಶವಿದೆ. ಸದ್ಯಕ್ಕೆ 60 ಸಾವಿರ ಪರೀಕ್ಷೆ ನಡೆಸಲಾಗುತ್ತಿದ್ದು ಅದನ್ನು ಈಗ 1 ಲಕ್ಷಕ್ಕೆ ಏರಿಸಲಾಗಿದೆ. ಈ ಕುರಿತು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.
ರಾಜ್ಯಾಂದ್ಯಂತ ಕಂಟ್ರೋಲ್ ರೂಂ ಆರಂಭಗೊಳ್ಳುತ್ತಿದ್ದು, ಕೋವಿಡ್ ಲಸಿಕೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.