This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

National News

2024 ಬಜೆಟ್ ಡೀಟೇಲ್ಸ್ : ಯಾವುದಕ್ಕೆ ಎಷ್ಟು ಹಣ ವಿನಿಯೋಗ? ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಸಂಪೂರ್ಣ ವಿವರ

2024 ಬಜೆಟ್ ಡೀಟೇಲ್ಸ್ : ಯಾವುದಕ್ಕೆ ಎಷ್ಟು ಹಣ ವಿನಿಯೋಗ? ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಸಂಪೂರ್ಣ ವಿವರ

ನವದೆಹಲಿ: ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಘೋಷಣೆಗಳನ್ನು ಮಾಡಿಲ್ಲ. ಹಿಂದಿನ ವರ್ಷಗಳಲ್ಲಿ ಆಗಿರುವ ಸಾಧನೆ, ಮುಂದಿನ ದಶಕಗಳಲ್ಲಿ ಸರ್ಕಾರ ಇಟ್ಟಿರುವ ಅಭಿವೃದ್ಧಿ ಗುರಿ, ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ದೂರದೃಷ್ಟಿಯ ಯೋಜನೆ ಇತ್ಯಾದಿ ಕಡೆ ಬಜೆಟ್ ಗಮನ ಕೊಟ್ಟಿತ್ತು. ಸರ್ಕಾರಕ್ಕೆ ಬರುವ ಆದಾಯ ಎಷ್ಟು, ಅದು ಎಲ್ಲಿಗೆ ಹರಿದುಹೋಗುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ.
ಸರ್ಕಾರಕ್ಕೆ ಹಣದ ಹರಿವು ಎಲ್ಲೆಲ್ಲಿಂದ?

ಸಾಲಗಳಿಂದ: ಶೇ. 28
ಆದಾಯ ತೆರಿಗೆ: ಶೇ. 19
ಕೇಂದ್ರ ಅಬಕಾರಿ ಸುಂಕ: ಶೇ. 5
ಕಾರ್ಪೊರೇಶನ್ ತೆರಿಗೆ: ಶೇ. 17
ಜಿಎಸ್​ಟಿ ಮತ್ತಿತರ ತೆರಿಗೆ: ಶೇ. 18
ತೆರಿಗೆಯೇತರ ಸ್ವೀಕೃತಿ: ಶೇ. 7
ಸಾಲವಲ್ಲದ ಬಂಡವಾಳ ಸ್ವೀಕೃತಿ: ಶೇ. 1
ಆಮದು ಸುಂಕ ಅಥವಾ ಕಸ್ಟಮ್ಸ್: ಶೇ. 4

ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಆಗಿಲ್ಲ ಬದಲಾವಣೆ; ಹಿಂದಿನ ವರ್ಷದ ಟ್ಯಾಕ್ಸ್ ರೇಟ್ ಎಷ್ಟಿದೆ?
ಸರ್ಕಾರದಿಂದ ಹಣದ ವೆಚ್ಚ ಎಲ್ಲಿಗೆ?
ಬಡ್ಡಿ ಪಾವತಿ: ಶೇ. 20
ಕೇಂದ್ರದ ಪ್ರಾಯೋಜಿತ ಯೋಜನೆಗಳು: ಶೇ. 8
ಪಿಂಚಣಿ: ಶೇ. 4
ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆ: ಶೇ. 20
ಹಣಕಾಸು ಆಯೋಗ ಮತ್ತಿತರ ವರ್ಗಾವಣೆ: ಶೇ. 8
ಕೇಂದ್ರ ವಲಯ ಸ್ಕೀಮ್​ಗಳು: ಶೇ. 16
ಸಬ್ಸಿಡಿ: ಶೇ. 6
ರಕ್ಷಣಾ ವಲಯ: ಶೇ. 8

ಯಾವ್ಯಾವ ಇಲಾಖೆಗೆ ಎಷ್ಟು ಹಣ ನಿಯೋಜನೆ
ರಕ್ಷಣಾ ಸಚಿವಾಲಯ: 6.2 ಲಕ್ಷ ಕೋಟಿ ರೂ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂ
ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂ
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ: 2.13 ಲಕ್ಷ ಕೋಟಿ ರೂ
ಗೃಹ ವ್ಯವಹಾರಗಳ ಸಚಿವಾಲಯ: 2.03 ಲಕ್ಷ ಕೋಟಿ ರೂ
ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂ
ರಾಸಾಯನಿಕ ಮತ್ತು ರಸಗೊಬ್ಬರ: 1.68 ಲಕ್ಷ ಕೋಟಿ ರೂ
ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂ
ಕೃಷಿ ಮತ್ತು ರೈತರ ಕಲ್ಯಾಣ: 1.27 ಲಕ್ಷ ಕೋಟಿ ರೂ

ಪ್ರಮುಖ ಯೋಜನೆಗಳಿಗೆ ಸಿಕ್ಕ ಹಣ
ಮನ್​ರೇಗಾ ಯೋಜನೆ: 60,000 ರಿಂದ 86,000 ಕೋಟಿ ರೂಗೆ ಏರಿಕೆ
ಆಯುಷ್ಮಾನ್ ಭಾರತ್: 7,200 ರಿಂದ 7,500 ಕೋಟಿ ರೂಗೆ ಏರಿಕೆ
ಪಿಎಲ್​ಐ ಸ್ಕೀಮ್: 4,645ರಿಂದ 6,200 ಕೋಟಿ ರೂಗೆ ಏರಿಕೆ
ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಯೋಜನೆ: 3,000ದಿಂದ 6,903 ಕೋಟಿ ರೂಗೆ ಏರಿಕೆ
ಸೌರ ವಿದ್ಯುತ್: 4,970ರಿಂದ 8,500 ಕೋಟಿ ರೂಗೆ ಏರಿಕೆ
ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್: 297ರಿಂದ 600 ಕೋಟಿ ರೂಗೆ ಏರಿಕೆ