This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Crime News

40 ವರ್ಷದ ಪ್ರಕರಣ:40 ಗಂಟೆಯಲ್ಲಿ ಪೂರ್ಣ

*ಎರಡು ಗ್ರಾಮಗಳ ನಡುವಿನ ವಾಜ್ಯ ಲೋಕ ಅದಾಲತ್‍ನಲ್ಲಿ ಸಂದಾನ*

ನಿಮ್ಮ ಸುದ್ದಿ ಬಾಗಲಕೋಟೆ

ಗ್ರಾಮಗಳ ನಡುವೆ ಕಳೆದ 40 ವರ್ಷಗಳಿಂದ ಬಗೆಹರಿಯಲಾಗದ ಪ್ರಕರಣವನ್ನು ಕೇವಲ 5 ದಿನಗಳಲ್ಲಿ 40 ಗಂಟೆಗಳ ರಾಜಿ ಸಂದಾನದ ಮೂಲಕ ಲೋಕ ಅದಾಲತ್ ಶಿಬಿರದಲ್ಲಿ  ಇತ್ಯರ್ಥಪಡಿಸಲಾಯಿತು.

          ಜಿಲ್ಲಾ ನ್ಯಾಯಾಲಯದಲ್ಲಿ ಡಿಸೆಂಬರ 19 ರಂದು ನಡೆದ ಲೋಕ ಅದಾಲತ್‍ನಲ್ಲಿ ಬಾಗಲಕೋಟೆ ತಾಲೂಕಿನ ಕಡ್ಲಿಮಟ್ಟಿ ಮತ್ತು ಮುಡಪಲಜೀವಿ ಗ್ರಾಮಗಳ ನಡುವೆ ಸಿದ್ದೇಶ್ವರ ದೇವಸ್ಥಾನದ ಬಾಬುಗಳಿಗೆ ಸಂಬಂಧಿಸಿದಂತೆ ಸುಮಾರು 1977 ರಿಂದ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ 40 ವರ್ಷಗಳಿಂದ ಜೀವಂತವಾಗಿದ್ದ ವ್ಯಾಜ್ಯವನ್ನು ಪ್ರಧಾನ ಹಿರಿಯ ನ್ಯಾಯಾಧೀಶ ಪ್ರಕಾಶ ವಿ ಅವರು ಮದ್ಯಸ್ಥಿಕೆ ವಹಿಸಿ ಎರಡು ಗ್ರಾಮದ ಮುಖಂಡರನ್ನು ಸೇರಿಸಿ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದಾರೆ.

ಸಿದ್ದೇಶ್ವರ ದೇವಸ್ಥಾನದ ಬಾಬುಗಳಿಗೆ ಸಂಬಂಧಿಸಿದಂತೆ ಮುಡಪಲಜೀವಿ, ಚಿಕ್ಕ ಹೊದ್ಲೂರ, ಕಡ್ಲಿಮಟ್ಟಿ, ಶಿರಗುಪ್ಪಿ, ಅಚನೂರು, ಬೆನ್ನೂರು, ಲವಳೇಶ್ವರ, ಜಡ್ರಾಮಕುಂಟಿ ಸೇರಿದಂತೆ ಮುಂತಾದ ಗ್ರಾಮಗಳು ಹೊಂದಾಣಿಕೆ ಇದ್ದವು. ಆದರೆ ದೇವಸ್ಥಾನದ ಕಳಸದ ವಿಚಾರವಾಗಿ ಕಡ್ಲಿಮಟ್ಟಿ ಮತ್ತು ಮುಡಪಲಜೀವಿ ಗ್ರಾಮಗಳ ನಡುವೆ ವ್ಯಾಜ್ಯ ಉಂಟಾಗಿತ್ತು. ನ್ಯಾ.ಪ್ರಕಾಶ ವಿ ಅವರು ಸತತ 5 ಬಾರಿ ಗ್ರಾಮಸ್ಥರನ್ನು ಸಂಧಾನಕ್ಕಾಗಿ ಕರೆಯಿಸಲಾಗಿತ್ತು ಎಂದರು.

ಮುಖ್ಯ ಕಳಸವು 2005 ರಿಂದ ಬಾಗಲಕೋಟೆ ತಹಶೀಲ್ದಾರರ ವಶದಲ್ಲಿತ್ತು. ಕಳಸವು ಎರಡು ಗ್ರಾಮಗದವರ ವಶಕ್ಕೆ ನೀಡದೇ ದೇವಸ್ಥಾನದಲ್ಲಿ ಇಡಬೇಕು. ಜಾತ್ರೆಯ ದಿನ ಎರಡು ಗ್ರಾಮದ ಹಿರಿಯರು ಮತ್ತು ದೇವಸ್ಥಾನದ ಅರ್ಚಕರು ಕಳಸವನ್ನು ಕಡ್ಲಿಮಟ್ಟಿ ಗ್ರಾಮಕ್ಕೆ ತೆಗೆದುಕೊಂಡ ಹೋಗಿ ಗ್ರಾಮಸ್ಥರಿಂದ ಪೂಜೆ ಸಲ್ಲಿಸಿ ನಂತರ ಮುಡಪಲಜೀವಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಕಳಸಾರೋಣದ ಮಾಡಿ ರಥೋತ್ಸವದ ನಂತರ ದೇವಸ್ಥಾನದ ಗರ್ಭಗುಡಿಯಲ್ಲಿಟ್ಟು ಪೂಜೆ ಪುನಸ್ಕಾರದ ಜವಾಬ್ದಾರಿಯನ್ನು ನಿರ್ವಹಿಸಲು ದೇವಸ್ಥಾನದ ಅರ್ಚಕರಿಗೆ ಜವಾಬ್ದಾರಿ ನೀಡುವ ಮೂಲಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಕರಣವನ್ನು ಇತ್ಯರ್ಥಪಡಿಸಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ರಾಜೀ ಸಂಧಾನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಮುಡಪಲಜೀವಿ ಗ್ರಾಮದ ಪರ ವಕೀಲರಾದ ಎಸ್.ಎಸ್.ಹಿರೇಮಠ, ಎಂ.ಎಸ್.ಹಿರೇಮಠ, ಕಡ್ಲಿಮಟ್ಟ ಪರ ವಕೀಲರಾದ ಪಿ.ಎ.ಕುಲಕರ್ಣಿ, ಎಸ್.ಎಸ್.ಹುಬ್ಬಳ್ಳಿ, ಬಾಗಲಕೋಟೆ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಹಾಗೂ ಅವರ ಪರ ವಕೀಲರಾದ ಎಸ್.ಎಲ್.ಕೋರಾ, ಮದ್ಯಸ್ಥಿಕೆದಾರರಾದ ಎನ್.ಪಿ.ಪತ್ತಾರ, ಹಿರಿಯ ವಕೀಲರಾದ ಎ.ಎ.ಜವಳಿ, ಆರ್.ಎಸ್.ನಿಂಗೊಳ್ಳಿ, ಎಸ್.ಎಸ್.ಅನಾಮಿ, ಆರ್.ಬಿ.ಕುಂಟೋಜಿ, ನ್ಯಾಯಾಲಯದ ಬೆಂಚ್ ಸಹಾಯಕ ದಿನೇಶ ರಡ್ಡಿ ಕರಿರಡ್ಡೇರ ಇದ್ದರು.

*ರಾಜೀ ಸಂಧಾನ 5632 ಪ್ರಕರಣಗಳು ಇತ್ಯರ್ಥ*
ಜಿಲ್ಲೆಯಾದ್ಯಂತ ಡಿಸೆಂಬರ 19 ರಂದು ನಡೆದ ಲೋಕ ಅದಾಲತ್‍ನಲ್ಲಿ ಒಟ್ಟು 9615 ಪ್ರಕರಣಗಳ ಪೈಕಿ 5632 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ 3442 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸಂಧಾನಕ್ಕಾಗಿ ಒಟ್ಟು 9615 ಪ್ರಕರಣಗಳಲ್ಲಿ 1039 ವ್ಯಾಜ್ಯಪೂರ್ವ ಪ್ರಕರಣಗಳು ಮತ್ತು 8576 ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 1039 ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು 4593 ನ್ಯಾಯಾಲದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 5632 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
–  *ಕಲ್ಪನಾ ಕುಲಕರ್ಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ*

     ಮುಡಪಲಜೀವಿ ಮತ್ತು ಕಡ್ಲಿಮಟ್ಟಿ ಗ್ರಾಮಗಳ ನಡುವೆ ಮುಖ್ಯ ಕಳಸದ ವಿಚಾರವಾಗಿ ವ್ಯಾಜ್ಯ ಪ್ರಾರಂಭವಾದಾಗ ನನಗೆ 30 ವರ್ಷ. 40 ವರ್ಷದಿಂದ ನ್ಯಾಯಾಲಯದಲ್ಲಿ ವ್ಯಾಜ್ಯವನ್ನು ನಡೆಸಿಕೊಂಡು ಬಂದರೂ ಸಹಿತ ಒಮ್ಮತವಾದ ನ್ಯಾಯ ಸಿಕ್ಕಿರಲಿಲ್ಲ. ಲೋಕ ಅದಾಲತ್ ಶಿಬಿರದಲ್ಲಿ ನಮ್ಮೂರಿನ ಕಳಸದ ವ್ಯಾಜ್ಯವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಗ್ರಾಮಗಳು ಒಂದಾಗಿ ಜಾತ್ರೆ ನೆರವೇರಿಸಲು ಅನುಕೂಲಮಾಡಿಕೊಟ್ಟಿದ್ದಾರೆ. ತೀರ್ಪಿನಿಂದ ಎರಡು ಗ್ರಾಮಗಳ ಗ್ರಾಮಸ್ಥರಿಗೆ ಸಂತೋಷವಾಗಿದೆ.
–  *ವಸಂತರಾವ್ ಕೃಷ್ಣಮೂರ್ತಿ ಸರಾಫ್, ಮುಡಪಲಜೀವಿ ಗ್ರಾಮದ ಹಿರಿಯರು*

Nimma Suddi
";