This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

೪೦ ಜಿಲ್ಲಾ ಪಂಚಾಯಿತಿ ಮತಕ್ಷೇತ್ರ ನಿಗದಿ

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜಿಪಂನ ೪೦ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ರಾಜ್ಯ ಚುನಾವಣೆ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿದೆ.

ಜಿಲ್ಲೆಯಲ್ಲಿ ಒಟ್ಟು ೪೦ ಜಿಪಂ ಕ್ಷೇತ್ರಗಳನ್ನು ನಿಗದಿಪಡಿಸಿದ್ದು, ಪ್ರತಿ ಕ್ಷೇತ್ರಕ್ಕೆ ನಾನಾ ಗ್ರಾಪಂಗಳನ್ನು ಪೂರ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಒಳಪಡಿಸಿ ಆದೇಶಿಸಲಾಗಿದೆ. ಕ್ಷೇತ್ರ ವಿಂಗಡಣೆಯಿಂದಾಗಿ ಕಳೆದ ಬಾರಿಯಲ್ಲಿದ್ದ ಕ್ಷೇತ್ರಗಳಲ್ಲಿ ಕೆಲ ಬದಲಾವಣೆ ಕಂಡು ಬಂದಿದೆ. ಯಾವ ಗ್ರಾಪಂ ಯಾವ ಜಿಪಂ ಕ್ಷೇತ್ರಕ್ಕೆ ಸೇರಲಿದೆ ಎಂಬ ಕುತೂಹಲಕ್ಕೆ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸುವ ಮೂಲಕ ತೆರೆ ಎಳೆದಿದೆ.

ಬಾಗಲಕೋಟೆ ತಾಲೂಕು:

೫ ಜಿಪಂ ಕ್ಷೇತ್ರಗಳಿದ್ದು ಅದರಲ್ಲಿ ಕಲಾದಗಿ (ಕಲಾದಗಿ, ಖಜ್ಜಿಡೋಣಿ, ಚಿಕ್ಕಶೆಲ್ಲಿಕೇರಿ, ತುಳಸಿಗೇರಿ, ದೇವನಾಳ ಗ್ರಾಪಂ ವ್ಯಾಪ್ತಿ), ಗದ್ದನಕೇರಿ (ಮುರನಾಳ, ಕದಾಂಪೂರ, ಗದ್ದನಕೇರಿ, ಯಡಹಳ್ಳಿ, ಸೀಮಿಕೇರಿ), ಶೀಗಿಕೇರಿ (ಶೀಗಿಕೇರಿ, ನೀರಲಕೇರಿ, ಬೇವಿನಮಟ್ಟಿ, ಬೆನಕಟ್ಟಿ, ಮುಗಳೊಳ್ಳಿ, ಭಗವತಿ), ಬೇವೂರ (ಬೇವೂರ, ಬೆಣ್ಣೂರ, ಕಡ್ಲಿಮಟ್ಟಿ, ಹಳ್ಳೂರ, ಬಿಲ್‌ಕೆರೂರ, ತಿಮ್ಮಾಪೂರ), ರಾಂಪೂರ (ರಾಂಪೂರ, ಹಿರೇಗುಳಬಾಳ, ನಾಯನೇಗಲಿ, ಹೊಸೂರ, ಚಿಕ್ಕಮ್ಯಾಗೇರಿ, ಸುತಗುಂಡಾರ) ಕ್ಷೇತ್ರಗಳಿವೆ.

ಹುನಗುಂದ ತಾಲೂಕು:

೩ ಜಿಪಂ ಕ್ಷೇತ್ರಗಳಿದ್ದು ಅದರಲ್ಲಿ ಕೂಡಲಸಂಗಮ (ಕೂಡಲಸಂಗಮ, ಬಿಸಲದಿನ್ನಿ, ಚಿತ್ತರಗಿ, ಬೆಳಗಲ್, ಗಂಜಿಹಾಳ, ಹಿರೇಮಳಗಾವಿ, ಧನ್ನೂರ), ಅಮರಾವತಿ (ಅಮರಾವತಿ, ಬಿಂಜವಾಡಗಿ, ಮರೋಳ, ಹಾವರಗಿ, ನಾಗೂರ, ಹಿರೇಬಾದವಾಡಗಿ, ರಕ್ಕಸಗಿ), ಸೂಳಿಬಾವಿ (ಸೂಳಿಬಾವಿ, ಐಹೊಳೆ, ಹೂವಿನಹಳ್ಳಿ, ಹಿರೇಮಾಗಿ, ಮೂಗನೂರ) ಕ್ಷೇತ್ರಗಳಿವೆ.

ಬಾದಾಮಿ ತಾಲೂಕು:

೬ ಜಿಪಂ ಕ್ಷೇತ್ರಗಳಿದ್ದು ಹಲಕುರ್ಕಿ (ಹಲಕುರ್ಕಿ, ಸೂಳಿಕೇರಿ, ಹೂಲಗೇರಿ, ಇನಾಂ ಹುಲ್ಲಿಕೇರಿ), ಜಲಗೇರಿ (ನೀರಬೂದಿಹಾಳ, ಅನವಾಲ, ಕೈನಕಟ್ಟಿ, ಫಕೀರಬೂದಿಹಾಳ, ಹಾಲಿಗೇರಿ), ಕರಡಿಗುಡ್ಡ ಎಸ್‌ಎನ್ (ಮಮಟಗೇರಿ, ನೀರಲಕೇರಿ, ಮುಷ್ಠಿಗೇರಿ, ಕಾಕನೂರ, ಆಲೂರ ಎಸ್‌ಕೆ), ಮುತ್ತಲಗೇರಿ (ಮುತ್ತಲಗೇರಿ, ನೀಲಗುಂದ, ಕಿತ್ತಲಿ, ನರಸಾಪುರ, ಕುಳಗೇರಿ ಕ್ರಾಸ್, ಹೆಬ್ಬಳ್ಳಿ), ಜಾಲಿಹಾಳ (ಜಾಲಿಹಾಳ, ಚೊಳಚಗುಡ್ಡ, ಹೊಸೂರ, ಕಾತರಕಿ, ಬೇಲೂರ), ನಂದಿಕೇಶ್ವರ (ನಂದಿಕೇಶ್ವರ, ಮಂಗಳೂರು, ಪಟ್ಟದಕಲ್ಲು, ಆಡಗಲ್, ಕೆಂದೂರ) ಕ್ಷೇತ್ರಗಳಿವೆ.

ಇಳಕಲ್ ತಾಲೂಕು:

೪ ಜಿಪಂ ಕ್ಷೇತ್ರಗಳಿದ್ದು ನಂದವಾಡಗಿ (ನಂದವಾಡಗಿ, ಕರಡಿ, ಬೂದಿಹಾಳ ಎಸ್‌ಕೆ), ಕಂದಗಲ್ (ಕಂದಗಲ್, ಹಿರೇಓತಗೇರಿ, ಹಿರೇಸಿಂಗನಗುತ್ತಿ, ಜಂಬಲದಿನ್ನಿ), ಬಲಕುಂದಿ (ಬಲಕುಂದಿ, ಗೊರಬಾಳ, ಚಿಕ್ಕಕೊಡಗಲಿ, ಹಿರೇಕೊಡಗಲಿ), ಗುಡೂರ ಎಸ್‌ಸಿ (ಗುಡೂರ ಎಸ್‌ಸಿ, ಕೆಲೂರ, ವಡಗೇರಿ, ಮುರಡಿ, ಚಿಕನಾಳ) ಕ್ಷೇತ್ರಗಳಿವೆ.

ಗುಳೇದಗುಡ್ಡ ತಾಲೂಕು:

೨ ಜಿಪಂ ಕ್ಷೇತ್ರಗಳಿದ್ದು ಹುಲ್ಲಿಕೇರಿ ಎಸ್‌ಪಿ (ಹುಲ್ಲಿಕೇರಿ ಎಸ್‌ಪಿ, ಹಳದೂರು, ಪರ್ವತಿ, ಲಾಯದಗುಂದಿ, ನಾಗರಾಳ ಎಸ್‌ಪಿ, ಹಾನಾಪುರ ಎಸ್‌ಪಿ, ಮಂಗಳಗುಡ್ಡ), ಕಟಗೇರಿ (ಕಟಗೇರಿ, ಹಂಸನೂರ, ಕೋಟೆಕಲ್, ಕೆಲವಡಿ, ಹಂಗರಗಿ, ಜಮ್ಮನಕಟ್ಟಿ) ಕ್ಷೇತ್ರಗಳಿವೆ.

ಜಮಖಂಡಿ ತಾಲೂಕು:

೬ ಜಿಪಂ ಕ್ಷೇತ್ರಗಳಿದ್ದು ತುಂಗಳ (ತುಂಗಳ, ಶೂರ್ಪಾಲಿ, ಜಂಬಗಿ ಬಿಕೆ, ಹಿರೇಪಡಸಲಗಿ), ಅಲಗೂರ (ಅಲಗೂರ, ಕುಂಬಾರಹಳ್ಳ, ಕಂಕನವಾಡಿ, ಕುಂಚನೂರ), ಕೊಣ್ಣೂರ (ಕೊಣ್ಣೂರ, ಮರೆಗುದ್ದಿ, ಹುಲ್ಯಾಳ, ಸಿದ್ದಾಪೂರ, ಲಿಂಗನೂರ), ಹುನ್ನೂರ (ಹುನ್ನೂರ, ಕಡಪಟ್ಟಿ, ಮದರಖಂಡಿ, ಮುತ್ತೂರ, ಮೈಗೂರ), ತೊದಲಬಾಗಿ (ತೊದಲಬಾಗಿ, ಅಡಿಹುಡಿ, ಬಿದರಿ, ಚಿಕ್ಕಪಡಸಲಗಿ), ಸಾವಳಗಿ (ಸಾವಳಗಿ, ಕನ್ನೊಳ್ಳಿ, ಖಾಜಿಬೀಳಗಿ, ಗೋಠೆ) ಕ್ಷೇತ್ರಗಳಿವೆ.

ಮುಧೋಳ ತಾಲೂಕು:

೫ ಜಿಪಂ ಕ್ಷೇತ್ರಗಳಿದ್ದು ನಾಗರಾಳ (ನಾಗರಾಳ, ಒಂಟಗೋಡಿ, ಉತ್ತೂರು, ಗುಲಗಾಲಜಂಬಗಿ), ಶಿರೋಳ (ಶಿರೋಳ, ಮಳಲಿ, ಸೊರಗಾಂವ, ಮುಗಳಖೋಡ, ಕುಳಲಿ), ಮಂಟೂರ (ಮಂಟೂರ, ಮೆಳ್ಳಿಗೇರಿ, ಹಲಗಲಿ, ಮಾಚಕನೂರ), ಹೆಬ್ಬಾಳ (ಹೆಬ್ಬಾಳ, ಲಕ್ಷಾನಟ್ಟಿ, ದಾದನಟ್ಟಿ, ಭಂಟನೂರ), ಮೆಟಗುಡ್ಡ (ಮೆಟಗುಡ್ಡ, ಬರಗಿ, ಇಂಗಳಗಿ, ವಜ್ಜರಮಟ್ಟಿ, ಕಸಬಾಜಂಬಗಿ, ಚಿಚಕಂಡಿ ಕೆಡಿ) ಕ್ಷೇತ್ರಗಳಿವೆ.

ಬೀಳಗಿ ತಾಲೂಕು:

೫ ಜಿಪಂ ಕ್ಷೇತ್ರಗಳಿದ್ದು ಗಲಗಲಿ (ಗಲಗಲಿ, ಕೋಳೂರ, ಯಡಹಳ್ಳಿ, ತೆಗ್ಗಿ), ಸಿದ್ದಾಪೂರ (ಸಿದ್ದಾಪುರ, ಬಾಡಗಿ, ಇನಾಂಹಂಚಿನಾಳ, ನಾಗರಾಳ, ಸೊನ್ನ, ಹೊಸಕೊರ್ತಿ), ಗಿರಿಸಾಗರ (ಗಿರಿಸಾಗರ, ಬಾಡಗಂಡಿ, ಹೆಗ್ಗೂರ, ಕಂದಗಲ್, ಹೊನ್ನಿಹಾಳ), ಸುನಗ (ಸುನಗ, ಹೆರಕಲ್, ಅನಗವಾಡಿ, ಬೂದಿಹಾಳ ಎಸ್‌ಎಚ್), ಕುಂದರಗಿ (ಕುಂದರಗಿ, ಕಾತರಕಿ, ಜಾನಮಟ್ಟಿ, ಅರಕೇರಿ, ಚಿಕ್ಕಾಲಗುಂಡಿ) ಕ್ಷೇತ್ರಗಳಿವೆ.

ರಬಕವಿ-ಬನಹಟ್ಟಿ ತಾಲೂಕು:

೪ ಜಿಪಂ ಕ್ಷೇತ್ರಗಳಿದ್ದು ಸಸಾಲಟ್ಟಿ (ಸಸಾಲಟ್ಟಿ, ಗೊಲಬಾಂವಿ, ಹನಗಂಡಿ, ಹಳಿಂಗಳಿ, ತಮದಡ್ಡಿ), ಹಿಪ್ಪರಗಿ (ಹಿಪ್ಪರಗಿ, ಕುಲಹಳ್ಳಿ, ಯಲ್ಲಟ್ಟಿ, ನಾವಲಗಿ), ಚಿಮ್ಮಡ (ಚಿಮ್ಮಡ, ಜಗದಾಳ, ಆಸಂಗಿ), ಸೈದಾಪುರ (ಸೈದಾಪುರ, ಮದಬಾವಿ, ಕೆಸರಗೊಪ್ಪ, ಡವಳೇಶ್ವರ, ನಂದಗಾಂವ) ಕ್ಷೇತ್ರಗಳಿವೆ.