ಮೂಲ ಸೌಲಭ್ಯ ಒದಗಿಸುವಲ್ಲಿ ಪ್ರಯತ್ನ
ನಿಮ್ಮ ಸುದ್ದಿ ಬಾಗಲಕೋಟೆ
ಪಟ್ಟಣ ಪಂಚಾಯಿತಿಯ ಆಡಳಿತದೊಂದಿಗೆ ಸೇರಿ ಪಟ್ಟಣದ ಜನತೆಗೆ ಮೂಲ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ನೂತನ ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ ತಿಳಿಸಿದರು.
ವಾರ್ಡ್ ನಂ.2 ರಲ್ಲಿನ ಕೆಎಚ್‌ಡಿಸಿ ಕಾಲೋನಿಯಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜನರ ಆಶೀರ್ವಾದದಿಂದ ಒಬ್ಬ ಸದಸ್ಯೆಯಾಗಿ ಆಯ್ಕೆ ಆಗಿ ಸದ್ಯ ಉಪಾಧ್ಯಕ್ಷೆಯಾಗಿದ್ದೇನೆ. ಆಯ್ಕೆ ಮಾಡಿದ ಜನರ ಋಣ ತೀರಿಸುವಲ್ಲಿ ಮತ್ತೊಂದು ಅವಕಾಶ ದೊರೆತಂತಾತಿದೆ ಎಂದರು.
ಕಳೆದ 4 ವರ್ಷದಿಂದ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದೆಯೂ ಜನರಿಗೆ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ಪಟ್ಟಣ ಪಂಚಾಯಿತಿ ಆಡಳಿತ ನಿಮ್ಮೊಂದಿಗಿದೆ. ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯೊಂದಿಗೆ ಸೇರಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಲಾಗುವುದು. ನಿಮ್ಮ ಸಮಸ್ಯೆಗಳೇನೇ ಇದ್ದರೂ ನೇರವಾಗಿ ನಮ್ಮೊಂದಿಗೆ ಚರ್ಚಿಸಿ. ನಿಮ್ಮ ಸೇವೆಗೆ ಸದಾ ಸಿದ್ಧ ಎಂದು ಹೇಳಿದರು.
ಬಿಜೆಪಿ ಮುಖಂಡ ರಾಘವೇಂದ್ರ ಗೌಡರ ಮಾತನಾಡಿದರು. ಶೇಖಪ್ಪ ಹೊಟ್ಟಿ, ಈರಣ್ಣ ತೊರವಿ, ವಿರುಪಾಕ್ಷ ಮದ್ಲಿ, ಸಂಗಪ್ಪ ಹಂಡಿ, ಸುಭಾಷ ನಿಡಗುಂದಿ, ಹನಮಂತ ಕುಂಟೋಜಿ, ವಿಶ್ವನಾಥ ಬೇವಿನಮಟ್ಟಿ, ವಿನಾಯಕ ರಕ್ಕಸಗಿ, ವಿಠ್ಠಲ ಜಾಲಿಹಾಳ, ಶಂಕ್ರವ್ವ ಹೊಕ್ರಾಣಿ, ರುಕ್ಮವ್ವ ತೊರವಿ, ಪ್ರೀತಿ ಜಾಲಿಹಾಳ, ವಾಸು ಗೌಡರ ಇತರರು ಇದ್ದರು.