ನಾಮಪತ್ರ ಸಲ್ಲಿಕೆಗೆ ಡಿ.೧೧ ಕೊನೆ ದಿನ:ಡಿಸಿ ರಾಜೇಂದ್ರ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಜಮಖಂಡಿ ಉಪವಿಭಾಗದಲ್ಲಿನ ೮೯ ಗ್ರಾಪಂಗಳ ಮೊದಲ ಹಂತದ ಚುನಾವಣೆಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೋಮವಾರ ಅಧಿಸೂಚನೆ ಹೊರಡಿಸಿ, ಚುನಾವಣಾ ವೇಳಾ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಡಿ.೧೧ ಕೊನೆಯ ದಿನವಾಗಿದ್ದು, ೧೨ರಂದು ಪರಿಶೀಲನೆ, ಡಿ.೧೪ ನಾಮಪತ್ರ ಹಿಂಪಡೆಯುವುದಕ್ಕೆ ಅಂತಿಮ ದಿನವಾಗಿದೆ. ಮತದಾನ ಡಿ.೨೨ ರಂದು ಬೆಳಗ್ಗೆ ೭ ರಿಂದ ಸಂಜೆ ೫ರ ವರೆಗೆ ನಡೆಯಲಿದ್ದು, ಡಿ.೩೦ರಂದು ಬೆಳಗ್ಗೆ ೮ರಿಂದ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜಮಖಂಡಿ ತಾಲೂಕು (೨೬)
ಆಲಗೂರ-೧೭, ಬಿದರಿ-೨೭, ಚಿಕ್ಕಪಡಸಲಗಿ-೧೮, ಗೋಠೆ-೨೦, ಹಿರೇಪಡಸಲಗಿ-೨೪, ಹುಲ್ಯಾಳ-೧೬, ಹುನ್ನೂರ-೨೫, ಜಂಬಗಿ ಬಿ.ಕೆ-೨೦, ಕಡಪಟ್ಟಿ-೧೦, ಕಂಕಣವಾಡಿ-೧೬, ಕನ್ನೊಳ್ಳಿ-೨೧, ಕೊಣ್ಣೂರ-೨೩, ಕುಂಬಾರಹಳ್ಳ-೧೮, ಕುಂಚನೂರ-೧೯, ಲಿಂಗನೂರ-೧೯, ಮದರಖಂಡಿ-೨೨, ಮೈಗೂರ-೨೧, ಮುತ್ತೂರ-೧೬, ಸಾವಳಗಿ-೩೨, ಶೂರಪಾಲಿ-೧೯, ತೊದಲಬಾಗಿ-೨೨, ತುಂಗಳ-೧೯, ಕಾಜಿಬೀಳಗಿ-೧೦, ಸಿದ್ದಾಪೂರ-೧೩, ಮರೇಗುದ್ದಿ-೧೫, ಅಡಿಹುಡಿ-೧೪ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮುಧೋಳ ತಾಲೂಕು (22)
ನಾಗರಾಳ-೨೨, ಮುಗಳಖೋಡ-೨೨, ಮಳಲಿ-೧೫, ಕುಳಲಿ-೧೭, ಶಿರೋಳ-೩೧, ಮಂಟೂರ-೨೮, ಹಲಗಲಿ-೧೪, ಉತ್ತೂರ-೨೨, ಒಂಟಗೋಡಿ-೧೯, ಇಂಗಳಗಿ-೧೭, ವಜ್ಜರಮಟ್ಟಿ-೯, ಮಾಚಕನೂರ-೨೧, ಚಿಚಖಂಡಿ ಕೆ.ಡಿ-೧೯, ಸೋರಗಾಂವ-೧೬, ಮೆಳ್ಳಿಗೇರಿ-೯, ಬರಗಿ-೧೬, ಗುಲಗಾಲಜಂಬಗಿ-೧೨, ಹೆಬ್ಬಾಳ-೨೦, ಕಸಬಾಜಂಬಗಿ-೧೪, ಮೆಟ್ಟಗುಡ್ಡ-೨೧, ಭಂಟನೂರ-೧೯, ದಾದನಟ್ಟಿ-೧೩ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ರಬಕವಿ-ಬನಹಟ್ಟಿ ತಾಲೂಕು (೧೭)
ಆಸಂಗಿ-೨೨, ಚಿಮ್ಮಡ-೨೮, ಗೋಲಭಾವಿ-೧೯, ಹಳಿಂಗಳಿ-೧೯, ಹನಗಂಡಿ-೨೪, ಹಿಪ್ಪರಗಿ-೨೨, ಜಗದಾಳ-೨೦, ಕುಲಹಳ್ಳಿ-೨೧, ನಾವಲಗಿ-೨೦, ಸಸಾಲಟ್ಟಿ-೨೧, ತಮದಡ್ಡಿ-೮, ಯಲ್ಲಟ್ಟಿ-೧೪, ಕೆಸರಗೊಪ್ಪ-೧೯, ಸೈದಾಪೂರ-೨೦, ಮದಭಾವಿ-೨೨, ಢವಳೇಶ್ವರ-೧೯, ನಂದಗಾಂವ-೭ ಸ್ಥಾನಗಳಿಗೆ ನಡೆಯಲಿದೆ.
ಬೀಳಗಿ ತಾಲೂಕು (೨೪)
ಅನಗವಾಡಿ-೧೬, ಅರಕೇರಿ-೧೫, ಬಾಡಗಿ-೧೫, ಚಿಕ್ಕಾಲಗುಂಡಿ-೧೪, ಗಲಗಲಿ-೨೧, ಗಿರಿಸಾಗರ-೧೯, ಹೆರಕಲ್ಲ-೧೩, ಹೊನ್ನಿಹಾಳ-೧೭, ಇನಾಂಹಂಚಿನಾಳ-೭, ಕಂದಗಲ್ಲ-೮, ಕೋಲೂರ-೨೧, ಕುಂದರಗಿ-೧೩, ಕಾತರಕಿ-೧೭, ಸಿದ್ದಾಪೂರ-೧೪, ಸೊನ್ನ-೧೨, ಸುನಗ-೨೪, ಯಡಹಳ್ಳಿ-೧೮, ತೆಗ್ಗಿ-೨೪, ಹೊಸಕೊರ್ತಿ-೧೭, ಹೆಗ್ಗೂರ-೧೨, ಬಾಡಗಂಡಿ-೧೮, ನಾಗರಾಳ-೧೫, ಬೂದಿಹಾಳ ಎಸ್.ಎಚ್-೧೪ ಹಾಗೂ ಜಾನಮಟ್ಟಿ-೧೧ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.