This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Crime News

ಸಿದ್ದುಗೆ ಸಂಕಷ್ಟ?

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಮಹಾಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಿದ್ದು ಸವದಿಗೆ ಕಂಟಕ ಆಗುತ್ತಾ.?

ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಮಹಾಲಿಂಗಪುರ ಪುರಸಭೆ ಸದಸ್ಯೆಯ ತಳ್ಳಾಟ, ನೂಕಾಟ ಪ್ರಕರಣ ಕಂಟಕವಾಗುವ ಸಾಧ್ಯತೆ ಇದೆ. ಶಾಸಕ ಸಿದ್ದು ಸವದಿ ಸೇರಿದಂತೆ ೩೧ ಜನರ ವಿರುದ್ಧ ಕೇಸ್ ದಾಖಲಾಗಿದೆ. ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಸಂಬಂದ ವಿಚಾರಣೆ ನಡೆಯಲಿದೆ.

ನವೆಂಬರ್ ೯, ೨೦೨೦ರಂದು ನಡೆದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ವೇಳೆ ಈ ಘಟನೆ ನಡೆದಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಕುರಿತಂತೆ ಮತ ಹಾಕಲು ಪುರಸಭೆಯ ಒಳಗೆ ಬಾರದಂತೆ ಹೊರಗಡೆ ಕಳುಹಿಸಲು ಸದಸ್ಯರು ಯತ್ನಿಸಿದ ವೇಳೆ ನೂಕಾಟ, ತಳ್ಳಾಟ ನಡೆದಿತ್ತು. ಪುರಸಭೆ ಸದಸ್ಯೆ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ಅವರನ್ನು ತಳ್ಳಲಾಗಿದೆ. ಘಟನೆಗೆ ಸಂಬAಧಿಸಿದAತೆ ಚಾಂದಿನಿ ನಾಯಕ್ ಅವರಿಂದ ದೂರು ದಾಖಲಾಗಿತ್ತು.

ಈ ಘಟನೆ ಬಳಿಕ ಮೂರು ತಿಂಗಳ ಗರ್ಭಿಣಿ ಚಾಂದಿನಿ ನಾಯ್ಕ ಅವರಿಗೆ ಗರ್ಭಪಾತವಾಗಿತ್ತು. ಈ ಆರೋಪದ ಮೇಲೆ ಚಾಂದಿನಿ ನಾಯಕ್ ಅವರು ದೂರು ದಾಖಲು ಮಾಡಿದ್ದರು. ತೇರದಾಳ ಶಾಸಕ ಸಿದ್ದು ಸವದಿ, ಬೆಂಬಲಿಗರಾದ ೩೧ ಜನರ ವಿರುದ್ಧ ದೂರು ದಾಖಲಿಸಿದ್ದರು.

ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಗೌರವಕ್ಕೆ ಧಕ್ಕೆ, ಕಿಡ್ನಾಪ್, ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ ದಾಖಲು ಮಾಡಲಾಗಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ ಮಹಾಲಿಂಗಪುರ ಠಾಣೆಯಲ್ಲಿ ಡಿಸೆಂಬರ್ ೩೧ ರಂದು ಎಫ್‌ಐಆರ್ ಕೂಡಾ ದಾಖಲಾಗಿತ್ತು. ಜಮಖಂಡಿ ಪೊಲೀಸ್ ಉಪವಿಭಾಗದಿಂದ ದೂರುದಾರೆ ಚಾಂದಿನಿ ನಾಯಕ್ ಅವರಿಗೆ ನೊಟೀಸ್ ನೀಡಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಮಹಜರು ಮಾಡಲು ಸ್ಥಳಕ್ಕೆ ಬಂದ ಸಿಬ್ಬಂದಿಗೆ ಸಹಕರಿಸುವಂತೆ ಚಾಂದಿನಿ ಅವರಿಗೆ ನೊಟೀಸ್ ನೀಡಿದ್ದ ಹಿನ್ನೆಲೆಯಲ್ಲಿ, ಚಾಂದಿನಿ ನಾಯಕ್ ಅವರ ಸಮ್ಮುಖದಲ್ಲಿ ಸೋಮವಾರ ಸ್ಥಳ ಮಹಜರು ನಡೆಯಿತು. ಘಟನೆ ಬಗ್ಗೆ ಚಾಂದಿನಿ ನಾಯಕ್ ಅವರಿಂದ ಮಹಾಲಿಂಗಪುರ ಠಾಣೆ ಪೊಲೀಸರು ವಿವರಣೆ ಪಡೆದರು.

ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ಸೂಚನೆಯಂತೆ ಜಮಖಂಡಿ ಡಿವೈಎಸ್ಪಿ ಪಾಂಡುರAಗಯ್ಯ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಯಿತು. ಈ ವೇಳೆ, ಬಾಗಲಕೋಟೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಂದಿನಿ ನಾಯಕ್ ಅವರಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿವರಣೆ ಪಡೆದಿದ್ದಾರೆ.

Nimma Suddi
";