This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics News

ಹೊಸ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ

ಒಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಡಿಸಿಎಂ ಸೂಚನೆ

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಗೆ ವಿಧಾನಸಭಾ ಮತಕ್ಷೇತ್ರವಾರು ಹೊಸದಾಗಿ ೨೧ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ ದೊರೆತಿದ್ದು, ಒಂದುವರೆ ವರ್ಷದಲ್ಲಿ ಉಪಕೇಂದ್ರಗಳ ಸ್ಥಾಪನೆ ಕಾಮಗಾರಿ ಪೂರ್ಣಗೊಳಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ೨೧ ಹೊಸ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ೨೮೦ ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಈ ಕಾರ್ಯ ಒಂದೂವರೆ ವರ್ಷದಲ್ಲಿ ಪೂರ್ಣಗೊಂಡು ವಿದ್ಯುತ್ ಪೂರೈಸುವ ಕಾರ್ಯ ಪ್ರಾರಂಭವಾಗಬೇಕು ಎಂದು ತಿಳಿಸಿದರು.

ಜಿಲ್ಲೆಗೆ ಒಟ್ಟು ೧೦೦ ವಿದ್ಯುತ್ ಕೇಂದ್ರಗಳ ಅವಶ್ಯಕತೆ ಇದ್ದು, ಈಗಾಗಲೇ ಜಿಲ್ಲೆಯಲ್ಲಿ ೬೯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ೨೧ ಕೇಂದ್ರಗಳಿಗೆ ಮಂಜೂರಾತಿ ದೊರೆತಿದ್ದು, ಇನ್ನು ೧೦ ವಿದ್ಯುತ್ ಕೇಂದ್ರಗಳ ಅವಶ್ಯಕತೆ ಇರುವದರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಜೂರಾತಿಗೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು. ಇದರಿಂದ ಜಿಲ್ಲೆಯಲ್ಲಿ ಮುಂದಿನ ೨೫ ವರ್ಷಗಳವರೆಗೆ ವಿದ್ಯುತ್ ಸಮಸ್ಯೆ ಇರುವದಿಲ್ಲವೆಂದು ಕಾರಜೋಳ ತಿಳಿಸಿದರು.

ಜಿಲ್ಲೆಯಲ್ಲಿ ಐಟಿ ಸೆಕ್ಟರಗಳ ಸಂಖ್ಯೆ ಹೆಚ್ಚಾಗಿರುವದರಿಂದ ಶೇ.೧೦೦ ರಷ್ಟು ಲೋಡ್ ಆಗುತ್ತಿದೆ. ಇದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಾದ್ಯವಾಗುತ್ತಿಲ್ಲ. ಸಿಸ್ಟಮ್ ವ್ಯವಸ್ಥೆ ಬದಲಾವಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವ ಅಗತ್ಯವಿದೆ. ವ್ಯವಸ್ಥೆಯ ಪ್ರಗತಿಗೆ ೨೨೦ ಕೋಟಿ ರೂ. ನೀಡಲಾಗಿದೆ. ಒಟ್ಟಾರೆಯಾಗಿ ವಿದ್ಯುತ್‌ಗೆ ಸಂಬAಧಿಸಿದAತೆ ವಿವಿಧ ಕಾಮಗಾರಿಗಳಿಗಾಗಿ ಒಟ್ಟು ೫೦೦ ಕೋಟಿ ರೂ.ಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.

ಲೋಕಾಪೂರದಲ್ಲಿ ೪೦೦ ಕೆವಿ ಸ್ಟೇಷನ್ ನಿರ್ಮಾಣ ಕಾರ್ಯ ನಡೆದಿದ್ದು, ಇಂತಹ ದೊಡ್ಡ ಪ್ರಮಾಣದ ವಿದ್ಯುತ್ ಸ್ಟೇಷನ್ ನಿರ್ಮಾಣವಾಗುತ್ತಿರುವುದು ರಾಜ್ಯದಲ್ಲಿಯೇ ಬಹಳ ಕಡಿಮೆ ಎಂದರು. ವಿದ್ಯುತ್ ಸಂಪರ್ಕದಲ್ಲಿ ಏನಾದರೂ ತಾಂತ್ರಿಕ ತೊಂದರೆಯಾದಲ್ಲಿ ಬೇರ ಸಂಪರ್ಕ ಜೋಡನೆಗೆ ಅವಕಾಶವಿದೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗುವದಿಲ್ಲ. ದೇಶದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟರ ರಾಜ್ಯ ಮುಂಚೂನಿಯಲ್ಲಿದೆ. ರಾಜ್ಯದಲ್ಲಿ ಜಲವಿದ್ಯುತ್, ಪವನಶಕ್ತಿ, ಸೋಲಾರ, ಥರ್ಮಲ್ ಹಾಗೂ ಓಜೋನ್‌ದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಹಗಲು ೪ ಗಂಟೆ ಮತ್ತು ರಾತ್ರಿ ೩ ಗಂಟೆಗಳ ಕಾಲ ೩-ಫೇಸ್ ವಿದ್ಯತ್ ನೀಡುತ್ತಿದ್ದು, ರಾತ್ರಿವೇಳೆಯಲ್ಲಿ ಪಂಪ್‌ಸೆಟ್ ನಿರಂತರವಾಗಿ ಚಾಲನೆ ಮಾಡುತ್ತಿರುವದರಿಂದ ನೀರು ಪೋಲಾಗುತ್ತದೆ. ಇದರ ಬದಲಾಗಿ ಹಗಲಿನ ವೇಳೆಯಲ್ಲಿ ೭ ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಸುವಂತೆ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮುನಿರಾಜ ಮಾತನಾಡಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ೮೬ ಪೈಕಿ ೭೮ಕ್ಕೆ ವಿದ್ಯುದೀಕರಣಗೊಳಿಸಲಾಗಿದೆ. ೨೦೧೯-೨೦ರಲ್ಲಿ ಉಂಟಾದ ಪ್ರವಾಹದಿಂದ ವಿದ್ಯುತ್ ಇಲಾಖೆಗೆ ಒಟ್ಟು ೩೯.೧೦ ಕೋಟಿ ರೂ.ಗಳ ನಷ್ಟವಾಗಿದೆ. ಈ ಪೈಕಿ ೩೧.೨೮ ಕೋಟಿ ರೂ.ಗಳ ಪರಿಹಾರ ಬಿಡುಗಡೆಯಾಗಿರುತ್ತದೆ. ವಿಪಲಗೊಂಡ ೪೪೭೪ ಪರಿವರ್ತಕಗಳ ಪೈಕಿ ೪೪೪೮ ಪರಿವರ್ತಕಗಳನ್ನು ಬದಲಾಯಿಸಲಾಗಿದೆ. ಜಿಲ್ಲೆಯಲ್ಲಿ ೩೫೪೪೦ ಅನಧಿಕೃತ ಪಂಪಸೆಟ್‌ಗಳನ್ನು ಸಕ್ರಮೀಕರಣಗೊಳಿಸಲಾಗಿದೆ. ಶೀಘ್ರ ಸಂಪರ್ಕ ಯೋಜನೆಯಡಿ ಬಂದ ೨೯೫೪ ಅರ್ಜಿಗಳ ಪೈಕಿ ೧೧೪ ಮಾತ್ರ ಬಾಕಿ ಇರುತ್ತವೆ. ದೀನದಯಾಳ ಉಪಾದ್ಯಾಯ ಗ್ರಾಮಜ್ಯೋತಿ ಯೋಜನೆಯಡಿ ೮೨೮೭ ಮನೆಗಳಿಗೆ ಮತ್ತು ಪ್ರಧಾನಮಂತ್ರಿ ಸಹಜ್ ಬಿಜ್ಲಿಹರಘರ ಯೋಜನೆಯಡಿ ೧೧೪೦೪ ಮನೆಗಳಿಗೆ ವಿದ್ಯುದೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಆನಂದ ನ್ಯಾಮಗೌಡ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಕಾಂಬಳೆ, ಕೆಪಿಟಿಸಿಎಲ್ ಮುಖ್ಯ ಇಂಜಿನೀಯರ್ ಮಂಜುನಾಥ, ಬೆಂಗಳೂರಿನ ಕೆಪಿಟಿಸಿಎಲ್ ಮುಖ್ಯ ಇಂಜಿನೀಯರ್ ವಿಶ್ವನಾಥ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

";