ಕೊರೊನಾ ವಾರಿಯರ್ಸ್ಗಳನ್ನಾಗಿ ಘೋಷಿಸಲು ಒತ್ತಾಯ
ನಿಮ್ಮ ಸುದ್ದಿ ಬಾಗಲಕೋಟೆ
ಕೊರೊನಾ ಮಹಾಮಾರಿ ಆರಂಭದಿAದಲೂ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರು, ಕಾರ್ಯಕರ್ತರು ನಾನಾ ಜಾಗೃತಿ ಕಾರ್ಯದಲ್ಲಿ ತೊಡಗಿದ್ದು ಅವರನ್ನು ಕೊರೊನಾ ವಾರಿರ‍್ಸ್ಗಳೆಂದು ಘೋಷಿಸಬೇಕು ಎಂದು ಕರ್ನಾಟಕ ನಗರ ಹಾಗೂ ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಒತ್ತಾಯಿಸಿದ್ದಾರೆ.
ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕಾರ್ಯಕರ್ತರು ಕೊರೊನಾ ಜಾಗೃತಿ, ಮಾಸ್ಕ್, ಆಹಾರ ವಿತರಣೆ, ಧನಸಹಾಯ, ತರಬೇತಿ, ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಕೇಂದ್ರ, ತುರ್ತು ಸೇವೆಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ನಗರ ಹಾಗೂ ಗ್ರಾಮಗಳ ಸಮುದಾಯಗಳಿಗೆ, ಕೃಷಿ, ಪರಿಸರ, ಎಫ್‌ಪಿಓ, ಸಮುದಾಯ ಆಧಾರಿತ ಕಾರ್ಯಕ್ರಮ, ಜಲಾನಯನ, ಸಮುದಾಯ ಸಂಘಟನೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ.
ಸರಕಾರ ತೆಗೆದುಕೊಳ್ಳುವ ಯೋಜನೆಗಳ ಅನುಷ್ಠಾನ, ಶಿಕ್ಷಣ, ಆರೋಗ್ಯ ಮೂಢನಂಬಿಕೆ ಪಿಡುಗುಗಳ ಜಾಗೃತಿ ಮತ್ತು ಪ್ರಸಾರ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೋಡಗಿಸಿಕೊಂಡು ಜೀವದ ಹಂಗು ತೊರೆದು ಕೈ ಜೋಡಿಸುವಲ್ಲಿ ಮುಂಚೂಣಿಯಲ್ಲಿವೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಬೇಕು ಹಾಗೂ ಸಾಮಾಜಿಕ ಮತ್ತು ಆರೋಗ್ಯ ಭದ್ರತಾ ಸೌಲಭ್ಯ ಒದಗಿಸಬೇಕೇಂದು ಒತ್ತಾಯಿಸಿದ್ದಾರೆ.