ಕೋವಿಡ್ ನಿರ್ವಹಣೆ : ಜಿಲ್ಲಾಡಳಿತಕ್ಕೆ ವರದಾನವಾದ ಕುಮಾರೇಶ್ವರ ಆಸ್ಪತ್ರೆ
ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ಹೆಚ್ಚು ಪರಿಣಾಮ ಬೀರಲಿದ್ದು, ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯಿಂದ ಸನ್ನದ್ದರಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಪ್ರಗತಿ ಪರಿಶೀಲನೆ, ಸಂಭವನೀಯ 3ನೇ ಅಲೆ ಮುಂಜಾಗ್ರತಾ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೊದಲನೇ ಹಾಗೂ ಎರಡನೇ ಅಲೆ ನಿಯಂತ್ರಣ ಎಲ್ಲರೂ ಶ್ರಮಿಸಿದ್ದು, ಜಿಲ್ಲಾಡಳಿತಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಮೂಲಕ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆ ವರದಾನವಾಗಿ ಪರಿಣಮಿಸಿದೆ ಎಂದು ತಿಳಿಸಿದರು. ಜಿಲ್ಲೆಯ ಜನಪ್ರತಿನಿದಿಗಳು ಸಹ ಕೋವಿಡ್ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದರು.
ಸಂಭವನೀಯ 3ನೇ ಅಲೆ ನಿಯಂತ್ರಣಕ್ಕೂ ಸಹ ಬಿವಿವ ಸಂಘದ ಕುಮಾರೇಶ್ವರ ಆಸ್ಪತ್ರೆ ಕೈಜೋಡಿಸುತ್ತಿದೆ. ಈಗಾಗಲೇ ಚಿಕ್ಕ ಮಕ್ಕಳಿ ಚಿಕಿತ್ಸೆಗೆ 120 ಬೆಡ್, ಆಕ್ಸಿಜನ್, ವೆಂಟಿಲೇಟರ್‍ಗಳನ್ನು ಸಿದ್ದಪಡಿಸಿಕೊಳ್ಳುತ್ತಿರುವ ಕಾರ್ಯವನ್ನು ಕಂಡು ಅಭಿನಂಧಿಸಿದರು. ಸರಕಾರವು ಸಹ 3ನೇ ನಿಯಂತ್ರಣಕ್ಕೆ ಸನ್ನದ್ದವಾಗಿದೆ. ಗ್ರಾಮ ಮಟ್ಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ ಮನೆ ಮನೆ ಸರ್ವೆ ಕಾರ್ಯ ನಡೆಸಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಪ್ರತಿ ಜಿಲ್ಲೆಗೆ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ ಗಂಡು ಮತ್ತು ಹಣ್ಣು ಮಕ್ಕಳಿಗೆ ಪ್ರತ್ಯೇಕ ಆರೈಕೆಗೆ ವ್ಯವಸ್ಥೆ ಮಾಡಬೇಕು. ಮಕ್ಕಳಲ್ಲಿ ಪಾಜಿಟಿವ್ ಬಂದಲ್ಲಿ ಮಗುವಿನೊಂದಿಗೆ ತಾಯಿ ಇರಲು ವ್ಯವಸ್ಥೆ ಮಾಡಲು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ 6 ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಗುರುತಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದಾಗ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಮಕ್ಕಳ ಆರೈಕೆಗೆ ವಿಶಾಲವಾದ ಆಟದ ಮೈದಾನ ಹೊಂದಿರುವ ವಸತಿ ನಿಲಯಗಳನ್ನು ಗುರುತಿಸಿ ಪ್ರಕರಣಗಳಿಗೆ ತಕ್ಕಂತೆ ಬೆಡ್‍ಗಳ ತಯಾರಿಸಿಕೊಳ್ಳಬೇಕು. ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದ್ದಲ್ಲಿ ಎಲ್ಲ ರೀತಿ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ 15 ದಿನಗಳಲ್ಲಿ ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸರ್ವೆ ಕಾರ್ಯ ನಡೆಸಲಾಗಿದೆ. ಇದಕ್ಕಾಗಿ ಬಿವಿವಿ ಸಂಘದ ಮಹಾವಿದ್ಯಾಲಯದಿಂದ 150 ವೈದ್ಯರ ತಂಡ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯ ತಂಡ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಎ.ಕೆ.ಬಸಣ್ಣವರ ಮಾತನಾಡಿ ಕೋವಿಡ್ ಹಿನ್ನಲೆಯಲ್ಲಿ ವಲಸೆಯಿಂದ ಬಂದ ಮಕ್ಕಳು 657, ಗರ್ಭಿಣೀಯರು 178, ಬಾಣಂತಿಯರು 102 ಇದ್ದು, ಅವರೆಲ್ಲರಿಗೂ ಆಹಾರ ವಿತರಿಸಲಾಗಿದೆ. ಒಟ್ಟು 22 ಮಕ್ಕಳ ಪಾಲನೆ ಸಂಸ್ಥೆಗಳ ಪೈಕಿ 10 ಸಂಸ್ಥೆಗಳಲ್ಲಿ 62 ಮಕ್ಕಳು ಇವೆ. ವಿಕಲಚೇತನ, ಸ್ವಾದಾರ, ನಿರ್ಗತಿಕ ಮಕ್ಕಳ ಕುಟಿರ ಹಾಗೂ ಸುಧಾರಣಾ ಸಂಸ್ಥೆಯ ನಿವಾಸಿ ಸೇರಿ 103 ಪೈಕಿ 98 ಜನರಿಗೆ ಲಸಿಕೆ ಕೊಡಿಸಲಾಗಿದೆ. 5 ಜನ ಮಾತ್ರ ಬಾಕಿ ಉಳಿದಿರುವಾಗಿ ತಿಳಿಸಿದರು.
ಕೋವಿಡ್ ಮೊದಲೇ ಅಲೆಯಲ್ಲಿ ಬಾದಾಮಿ ತಾಲೂಕಿನ ಓರ್ವ ಅಂಗನವಾಡಿ ಕಾರ್ಯಕರ್ತೆ ಮೃತಪಟ್ಟಿದ್ದು, ಕೇಂದ್ರ ಸದರಕಾರದಿಂದ 50 ಲಕ್ಷ ಮರಣ ಪರಿಹಾರ ನೀಡಲಾಗಿದೆ. 2ನೇ ಅಲೆಯಲ್ಲಿ ಮುಧೋಳ ಮತ್ತು ಜಮಖಂಡಿ ತಾಲೂಕಿನ ತಲಾ ಒಬ್ಬರು ಮೃತಪಟ್ಟಿದ್ದು, ಪರಿಹಾರಧನಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಕೋವಿಡ್‍ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ 5 ಇದ್ದು, ಮಕ್ಕಳ ಪ್ರಾಯೋಜಕತ್ವ ಯೋಜನೆಯಡಿ ಆರ್ಥಿಕ ಸಹಾಯಧನ ನೀಡಲು ಗುರುತಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಅಪೌಷ್ಠಿಕ ಮಕ್ಕಳಿಗೆ ಮನೆ ಮನೆಗೆ ತೆರಳಿ ಮಗುವಿನ ಆರೈಕೆ ಪೋಷಣೆ ಕುರಿತು ತಿಳುವಳಿಕೆ ಹಾಗೂ ಆಹಾರ ವಿತರಿಸಲಾಗುತ್ತಿದೆ ಎಂದು ಎ.ಕೆ.ಬಸಣ್ಣವರ ತಿಳಿಸಿದಾಗ ಅಂತಹ ಮಕ್ಕಳಿಗೆ ಚವನ್‍ಪ್ರಾಸ್ ನೀಡಲು ಕ್ರಮಕೈಗೊಳ್ಳುವಂತೆ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ಜಿಲ್ಲೆಯ 2221 ಅಂಗನವಾಡಿ ಕೇಂದ್ರಗಳಿಗೆ ವೈದ್ಯಾದಿಕಾರಿಗಳ ಬೇಟಿ ನೀಡಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್ . . .
*ರಾಜ್ಯಕ್ಕೆ ಮಾದರಿಯಾದ ಸುರಕ್ಷಣಿ ವೆಬ್‍ಸೈಟ್‍ಗೆ ಚಾಲನೆ*
—————————————
ಜಿಲ್ಲೆಯ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಬಾಗಲಕೋಟೆ ಎನ್.ಐ.ಸಿಯಿಂದ ತಯಾರಿಸಲಾದ ಸುರಕ್ಷಿಣಿ ವೆಬ್‍ಸೈಟ್‍ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಈ ವೆಬ್‍ಸೈಟ್ ರಾಜ್ಯಕ್ಕೆ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೂ ಅಳವಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ.