ಬಾದಾಮಿ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಬಾದಾಮಿ ತಾಲೂಕಿನ ಕೈನಕಟ್ಟಿ ಗ್ರಾಮದ ರಿ.ಸ.ನಂ 60/4, 12/2 ಉತಾರಗಳ ತಿದ್ದುಪಡಿಗಾಗಿ ಲಂಚದ ಆರೋಪದ ಹಿನ್ನಲೆ ಬಾದಾಮಿ ತಹಶಿಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರವೀಂದ್ರ ಹುಲ್ಲನ್ನವರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪಿರ್ಯಾದಿತ ಬಾದಾಮಿ ತಾಲೂಕಿನ ಕೈನಕಟ್ಟಿ ಗ್ರಾಮದ ಹನಮಂತಗೌಡ ರಾಮನಗೌಡ ಪಾಟೀಲ ಇವರಿಂದ ಉತಾರ ತಿದ್ದುಪಡಿಗಾಗಿ 18 ಸಾವಿರ ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ದಾಳಿ ಸಂದರ್ಭದಲ್ಲಿ ಡಿ.ವಾಯ್.ಎಸ್.ಬಿ ಸುರೇಶರೆಡ್ಡಿ, ಪೊಲೀಸ್ ಇನ್ಸಪೆಕ್ಟರ ಸಮೀರ ಮುಲ್ಲಾ, ವಿಜಯ ಮಹಾಂತೇಶ ಮಠಪತಿ, ಸಿಬ್ಬಂದಿಗಳಾದ ಹೂಗಾರ, ಕಾಕಂಡಕಿ, ಪತ್ತಾರ, ಮುಲ್ಲಾ, ಅಚನೂರ, ಹಂಗರಗಿ, ಚುರ್ಚಾಳ, ಪಾಟೀಲ, ರಾಠೋಡ ಇದ್ದರು.