ಕೆರೆಗಳ ಸರ್ವೆ, ಒತ್ತುವರಿ ಕುರಿತು ಸಭೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಬಾದಾಮಿ ತಾಲೂಕಿನ ೬೦ ಕೆರೆಗಳಲ್ಲಿ ೫೯ ಕೆರೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಅದರಲ್ಲಿ ೩೩ ಕೆರೆಗಳು ಒತ್ತುವರಿಯಿಂದ ಮುಕ್ತವಾಗಿವೆ ಎಂದು ಉಪವಿಭಾಗಾಕಾರಿ ಎಂ.ಗAಗಪ್ಪ ತಿಳಿಸಿದರು.
ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಕೆರೆಗಳ ಸಂರಕ್ಷಣೆ, ಸಮೀಕ್ಷೆ ಮತ್ತು ಕೆರೆಗಳ ಒತ್ತುವರಿ ತೆರವುಗೊಳಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ೬೦ ಕೆರೆಗಳಲ್ಲಿ ೫೯ ಕೆರೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಒಂದು ಕೆರೆ ಮಾತ್ರ ಬಾಕಿ ಉಳಿದಿದ್ದು, ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಲೈನಮೆಂಟ್ ಮ್ಯಾಪ್, ಕೆರೆಯ ಮಾಲಿಕತ್ವದ ಪಹಣಿ ಹಾಗೂ ಭೂಸ್ವಾÃನ ಕ್ಷೇತ್ರದ ದಾಖಲೆ ಸಲ್ಲಿಸದಿರುವುದರಿಂದ ಆ ಒಂದು ಕೆರೆ ಸಮೀಕ್ಷೆ ಬಾಕಿ ಇರುವುದಾಗಿ ತಿಳಿಸಿದರು.
ಒತ್ತುವರಿಯಿಂದ ಮುಕ್ತಗೊಂಡ ೩೩ ಕೆರೆಗಳ ವಿಸ್ತೀರ್ಣ ೧೧೮೯-೦೨*೧/೨ ಎಕರೆ ಇದ್ದು, ೧೮ ಕೆರೆಗಳು ವಿಸ್ತೀರ್ಣ ೬೧-೦೩-೦೧ ಎಕರೆ ಒತ್ತುವರಿಯಾಗಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿರುತ್ತದೆ. ಒತ್ತುವರಿ ಜಾಗವನ್ನು ತೆರವುಗೊಳಿಸಲು ಪ್ರಥಮ ಆದ್ಯತೆ ನೀಡಿ ಉಚ್ಛ ನ್ಯಾಯಾಲಯದ ಆದೇಶದಂತೆ ಒತ್ತುವರಿ ಜಾಗ ತೆರವುಗೊಳಿಸಬೇಕು ಎಂದು ಸೂಚಿಸಿ ಒತ್ತುವರಿಯಿಂದ ಮುಕ್ತವಾಗಿರುವ ಕೆರೆಗಳಿಗೆ ತಂತಿಬೇಲಿ, ನಾಮಫಲಕ ಅಳವಡಿಸುವ ಕುರಿತು ಕ್ರಿಯಾ ಯೋಜನೆ ತಯಾರಿಸಿ ಕ್ರಮಕೈಗೊಳ್ಳಲು ತಿಳಿಸಿದರು.
ಕೆರೆಯಲ್ಲಿನ ನೀರು ಕುಡಿಯಲು ಯೋಗ್ಯವಿರುವ ಕುರಿತು ಸಂಬAಧಪಟ್ಟ ಇಲಾಖೆಯಿಂದ ಪರೀಕ್ಷೆಗೊಳಪಡಿಸಿ ಶುದ್ಧ ನೀರಿನ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಕೆರೆಗಳಿಗೆ ಕಲುಷಿತಗೊಂಡ ನೀರು ಸೇರದಂತೆ ನೋಡಿಕೊಳ್ಳುವುದು ಸಂಬAಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ. ಮುಂದಿನ ಹಂತದಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೆರೆಯ ಅಂಚಿನಿAದ ೩೦ ಮೀಟರ ಭಪರ್ ಝೋನ್ ಗುರುತಿಸುವುದು ಹಾಗೂ ಈ ಪ್ರದೇಶದ ಸರ್ವೆ ಕಾರ್ಯ ಕೈಗೊಳ್ಳಲು ಕ್ರಮ ಜರುಗಿಸಬೇಕು ಎಂದರು.
ತಾಲೂಕಿನಲ್ಲಿ ರಾಜ ಕಾಲುವೆಗಳನ್ನು ಗುರುತಿಸಿ ಪಟ್ಟಿ ಮಾಡಿ, ಕಾಲುವೆಗಳನ್ನು ಸಮೀಕ್ಷೆ ಮಾಡಿಸಿ ಒತ್ತುವರಿ ಆಗಿದ್ದಲ್ಲಿ ಅದನ್ನು ತೆರವುಗೊಳಿಸುವಂತಾಗಬೇಕು. ಕೆರೆಗಳ ಸರ್ವೆ ಕಾರ್ಯದ ನಂತರ ಸಂಬAಧಪಟ್ಟ ಇಲಾಖೆಗಳು ಕೆರೆಯ ಗಡಿ ಕಲ್ಲುಗಳನ್ನು ಇಟ್ಟುಕೊಂಡು ಈ ಕುರಿತು ೧೫ ದಿನದೊಳಗೆ ಎಲ್ಲಾ ಇಲಾಖೆಗಳು ಕ್ರಮ ವಹಿಸತಕ್ಕದ್ದು. ಕೆರೆಯ ಸಂರಕ್ಷಣೆ ಮತ್ತು ಒತ್ತುವರಿ ತೆರವುಗೊಳಿಸಲು ತಾಲೂಕ ಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ಪ್ರತಿ ತಿಂಗಳು ಸಭೆ ನಡೆಸಿ, ಸಮಗ್ರ ಕೆರೆ ಅಭಿವೃದ್ಧಿಗೆ ಕ್ರೀಯಾ ಯೋಜನೆ ತಯಾರಿಸಲು ತಿಳಿಸಿದರು.
ತಹಸೀಲ್ದಾರ್ ಸುಭಾಷ ಇಂಗಳೆ, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ಪುರಸಭೆ ಮುಖ್ಯಾಕಾರಿ ಗೋಪಾಲ ಕಾಸೆ ಸೇರಿದಂತೆ ವಲಯ ಅರಣ್ಯ ಅಕಾರಿ, ಭೂ ದಾಖಲೆ ಸಹಾಯಕ ನಿರ್ದೇಶಕ, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ, ಬಾದಾಮಿ, ಕೆರೂರ, ಕುಳಗೇರಿಯ ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.