- ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ವಿಜಯ ಗದ್ದನಕೇರಿ ರಾಜಿನಾಮೆ ನೀಡಿದ್ದಾರೆ.
ಹುನಗುಂದ ತಾಲ್ಲೂಕು ಜಾತ್ಯತೀತ ಜನತಾದಳದ ಅಧ್ಯಕ್ಷ ವಿಜಯಮಹಾಂತೇಶ್ ಗದ್ದನಕೇರಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತಕ್ಷೇತ್ರದಲ್ಲಿ ಜಾತ್ಯತೀತ ಮತಗಳು ವಿಭಜನೆಯಾಗಬಾರದು. ತನ್ಮೂಲಕ ಜಾತ್ಯತೀತ ನಿಲುವಿನ ಪಕ್ಷಗಳಿಗೆ ಹಿನ್ನಡೆ ಆಗಬಾರದು ಎಂಬ ಉದ್ದೇಶದಿಂದ ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು .
ಮತಕ್ಷೇತ್ರದಲ್ಲಿ ಪಕ್ಷವು ಕೇವಲ ವ್ಯಕ್ತಿಗತ ಸ್ಥಾನಮಾನ ಪ್ರತಿಷ್ಠೆಗಳಿಗೆ ಬಳಕೆಯಾಗುತ್ತಿದೆ .ಸೈದ್ಧಾಂತಿಕ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ರಾಜ್ಯಮಟ್ಟದ ನಾಯಕರು ಗಳಲ್ಲಿಯೂ ಕೂಡ ಗೊಂದಲವಿರುವುದರಿಂದ ಸ್ಥಳೀಯ ಮಟ್ಟದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತಲಿದೆ.
ಈ ಕಾರಣಕ್ಕೋಸ್ಕರ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು ತಮ್ಮ ಮೇಲೆ ವಿಶ್ವಾಸ ಇರಿಸಿದ್ದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಅವರಿಗೆ ಕೃತಜ್ಞತೆ ತಿಳಿಸುತ್ತಾ ಮುಂಬರುವ ದಿನಗಳಲ್ಲಿ ಜಾತ್ಯತೀತ ನಿಲುವಿನ ಸೈದ್ಧಾಂತಿಕ ಬದ್ಧತೆಯ ಪರವಾಗಿರುವವರ ಜೊತೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.