This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ನೈಜ ಇತಿಹಾಸ ಅರಿತು ಆರೋಪಿಸಿ, ಕರವೇ ವಿರುದ್ಧ ಚರಂತಿಮಠ ಆಕ್ರೋಶ

ನಿಮ್ಮ ಸುದ್ದಿ ಬಾಗಲಕೋಟೆ

ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಬೂಟ್ ಪಾಲಿಶ್ ಮಾಡುವುದನ್ನು ಊರ ತುಂಬಾ, ಜಿಲ್ಲೆಯ ತುಂಬಾ ವಿಸ್ತರಣೆ ಮಾಡಿದಲ್ಲಿ ಚೊಲೋ ದುಡ್ಡು ಕೂಡುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗೆ ಶಾಸಕ ವೀರಣ್ಣ ಚರಂತಿಮಠ ತಿರುಗೇಟು ನೀಡಿದರು.

ಬವಿವಿ ಸಂಘದ ಮಿನಿ ಸಭಾಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷರು, ಶಾಸಕರಾದ ವೀರಣ್ಣ ಚರಂತಿಮಠ ಅವರು ಕರವೇ ಜಿಲ್ಲಾಧ್ಯಕ್ಷ ರಮೇಶ ಬನ್ನೂರ ಪ್ರತಿಯೊಂದು ಆರೋಪಕ್ಕೆ ಪ್ರತ್ಯುತ್ತರ ನೀಡಿ ತಮ್ಮ ಪ್ರತಿ ಮಾತಿನಲ್ಲಿ ಇತಿಹಾಸದ ಘಟನಾವಳಿಗಳನ್ನು ವಿವರಿಸುತ್ತ ಕರವೇ ಸಂಘಟನೆಯ ಆರೋಪಕ್ಕೆ ಉತ್ತರಿಸಿದರು.

ವಾಸ್ತವವಾಗಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಆಗಿಲ್ಲ. ಬರೀ ಬಜೆಟ್‌ನಲ್ಲಿ ಘೋಷಣೆ ಮಾತ್ರ ಆಗಿದೆ. ಆಗ ಘೋಷಣೆ ಮಾಡಿದ್ದವರೇ ಐದು ಪೂರ್ತಿ ಮುಖ್ಯಮಂತ್ರಿ ಆಗಿದ್ದರು ಬಾಗಲಕೋಟೆಯವರೇ ಬಲಾಡ್ಯ ಶಾಸಕರಿದ್ದರು. ಅವರು ಮಂತ್ರಿ ಕೂಡ ಆಗಿದ್ದರು. ಅವರೇ ಆಗ ಹಣ ತಂದು ಮೆಡಿಕಲ್ ಕಾಲೇಜು ಮಾಡಬಹುದಿತ್ತು. ಅವರ ಕಡೆಯಿಂದ ದುಡ್ಡು ಇಡಿಸಿಕೊಂಡು ಆಗಲೇ ಕೆಲಸ ಆರಂಭಿಸಬಹುದಿತ್ತು .

ಆಗ ಸಂಘಟನೆಯವರು ಏಕೆ ಚಕಾರ ಎತ್ತಲಿಲ್ಲ ಎಂದು ಪ್ರಶ್ನಿಸಿದರು. ಕಾಲೇಜು ಆರಂಭವಾಗದ ವಿಚಾರದಲ್ಲಿ ನಮ್ಮದೇನೂ ತಪ್ಪು ಇಲ್ಲ. ಈಗಲೂ ನಾವು ಕಾಲೇಜು ಮಾಡುವಂತೆ ಸರ್ಕಾರಕ್ಕೆ ಹೇಳಿದ್ದೇವೆ ಪ್ರವಾಹ, ಕೋವಿಡ್ ಸಂಕಷ್ಟದ ಕಾರಣ ಹಣದ ಮುಗ್ಗಟ್ಟು ಇದೆ ಹೀಗಾಗಿ ಮಾಡಿಲ್ಲ ಎಂದು ಹೇಳಿದರು.

ಬಿವಿವಿ ಸಂಘಕ್ಕೆ ಪಡೆದಿರುವ ಭೂಮಿ ಮುಂದೆ ಪಡೆಯುತ್ತಿರುವ ಜಮೀನು ಕಾನೂನು ಚೌಕಟ್ಟಿನಲ್ಲಿ ಎಲ್ಲ ವ್ಯವಹಾರ ಇದೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ನೈಜ ಇತಿಹಾಸ ಅರಿಯದೆ, ಸಂಪೂರ್ಣ ಮಾಹಿತಿ ಇಲ್ಲದೆ ಆರೋಪಿಸುವುದು ತರವಲ್ಲ.

ಬಿವಿವಿ ಸಂಘದ ಆಡಳಿತ ಮಂಡಳಿಗೆ 35 ವರ್ಷ ಹಿಂದೆ ಸೇರ್ಪಡೆಯಾದೆ. 30 ವರ್ಷಗಳಿಂದ ಚೇರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಬಾಗಲಕೋಟೆ ನಗರದಲ್ಲಿ ಮುಳುಗಡೆಯಾಗಿರುವ ಅಂಜುಮನ್ ಸಂಸ್ಥೆಯ ಸಮೀಪದ ಅಡವಿ ಸ್ವಾಮಿಮಠ ಸರ್ಕಾರಿ ಶಾಲೆ ನಂಬರ್ -9 ಹತ್ತಿರದ ಹುಂಡೇಕಾರ ಮಠ, ಐತಿಹಾಸಿಕ ಮೋಟಗಿ ಬಸವೇಶ್ವರ ದೇವಸ್ಥಾನಗಳು ಸೇರಿದಂತೆ ನಗರದ ವಿವಿಧ ಮಠ, ದೇವಸ್ಥಾನಗಳು ಬಿವಿವಿ ಸಂಘಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ದಾಖಲೆಗಳಿವೆ.

ಇದುವರೆಗೂ ಮುಳುಗಡೆಯಾಗಿರುವ ಈ ಆಸ್ತಿಗಳ ಜಾಗ ಬಿಟಿಡಿಎದಿಂದ ನವನಗರದಲ್ಲಿ ಪಡೆದುಕೊಂಡಿಲ್ಲ. ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿಗೆ 253 ಎಕರೆ, ಮೆಡಿಕಲ್ ಕಾಲೇಜಿಗೆ 249 ಎಕರೆ ಸರ್ಕಾರದಿಂದ ಜಾಗ ಪಡೆಯಲಾಗಿದೆ. ಈ ಮೊದಲ ಲೇಜ್ ಮೂಲಕ ಭೂಮಿ ಪಡೆಯಲಾಗಿತ್ತು. ನಂತರ ರಾಜ್ಯದಲ್ಲಿ ಜೆ.ಎಚ್ ಪಟೇಲ್ ಅವರ ಸರ್ಕಾರವಿದ್ದಾಗ 1998 ರಲ್ಲಿ ಸರ್ಕಾರದ ಶುಲ್ಕ ಪಾವತಿ ಮಾಡಿ ಭೂಮಿ ಖರೀದಿಸಲಾಗಿದೆ. ಉತಾರಗಳು ಕೂಡ ಸಂಘದ ಹೆಸರಿನಲ್ಲಿವೆ.

ಇನ್ನು ಇದರಲ್ಲಿ ವಿದ್ಯಾಗಿರಿ – ನವನಗರ ಸಂಪರ್ಕ ಕಲ್ಪಿಸಲು, ನವನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ನೀರಿನ ಟ್ಯಾಂಕ್ ನಿರ್ಮಿಸಲು 13 ಎಕರೆ ಜಮೀನು ಸಾರ್ವಜನಿಕರಿಗೆ ಅನುಕೂಲವಾಗಲು ಸರ್ಕಾರಕ್ಕೆ ನೀಡಲಾಗಿದೆ. ಕಳೆದಕೊಂಡ ಭೂಮಿಯಿಂದ ಇಲ್ಲಿವರೆಗೆ ನವನಗರದಲ್ಲಿ ಜಾಗ ಪಡೆದುಕೊಂಡಿಲ್ಲ. ಎಲ್ಲವು ಕಾನೂನು ಮೂಲಕ ವ್ಯವಹಾರ ನಡೆಸಲಾಗಿದೆ ಎಂದು ಹೇಳಿದರು.

ಆದಿಕೇಶವಲು ಅವರಿಂದ ಜಮೀನು ಕೇಳಿಲ್ಲ

ಗ್ರೀನ್ ಪುಡ್ ಪಾರ್ಕ್‌ನಲ್ಲಿ ಜಮೀನು ಬಿವಿವಿ ಸಂಘಕ್ಕೆ ಕೇಳಲಾಗಿದೆ ಆದಿಕೇಶವಲು ಅವರಿಂದ ಜಮೀನು ಕೇಳಿಲ್ಲ. ಕೆಐಡಿಬಿ ಮೂಲಕ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಆದಿಕೇಶವಲು ಅವರಿಂದ 21 ಎಕರೆ ಜಾಗ ಹುಬ್ಬಳ್ಳಿ ಮೂಲದ ವ್ಯಕ್ತಿ ಜಮೀನು ಪಡೆದಿದ್ದಾರೆ. ಅದನ್ನು ಮಾರಾಟ ಮಾಡಲು ಆ ವ್ಯಕ್ತಿ ಮುಂದೆ ಬಂದಿದ್ದು ಬಿವಿವಿಸಂಘ ಖರೀದಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಸರಿಯಾದ ದಾಖಲೆ, ಕಾನೂನು ಚೌಕಟ್ಟು ಇದ್ದಾಗ ಭೂಮಿ ಖರೀದಿಸಲಾಗುವುದು. ಗ್ರೀನ್ ಪುಡ್ ಪಾರ್ಕ್‌ನಲ್ಲಿ ಸರ್ಕಾರದಿಂದ ಸಂಘಕ್ಕೆ ಜಮೀನು ಕೇಳುವುದರಲ್ಲಿ ತಪ್ಪು ಏನಿದೆ? ಎಂದು ಚರಂತಿಮಠ ಪ್ರಶ್ನಿಸಿದರು.

ಕರವೇ ಸಂಘಟನೆಗೆ ಸವಾಲು : ಬಿವಿವಿ ಸಂಘ, ಶಾಸಕ ಚರಂತಿಮಠ ಗುರಿಯಾಗಿಸಿ ಆರೋಪ, ಹೋರಾಟ ಮಾಡುವುದರಲ್ಲಿ ಹುರಳಿಲ್ಲ ಗದ್ದನಕೇರಿ ರಸ್ತೆಯಲ್ಲಿರುವ ಸ್ಪಿನಿಂಗ್ ಮಿಲ್ 54 ಎಕರೆ ಭೂಮಿ ಬಿಡ್ ಮೂಲಕ ಬಿವಿವಿ ಸಂಘದ ಪಡೆದಿದೆ. ಮಿಲ್ ಬಂದ್‌ಗೆ ಕಾರಣಗಳೇನು ? ಹಗರಣದ ರೂವಾರಿಗಳು ಯಾರು ? ತಿಳಿದುಕೊಳ್ಳಲಿ. ಬಾಗಲಕೋಟೆ ನಗರದ ಹೊರ ವಲಯದ ಎಪಿಎಂಸಿಗೆ ಸೇರಿದ 30 ಎಕರೆ ಜಮೀನು ಎನ್‌.ಎ ಆಗಿತ್ತು ಪ್ರತಿ ಎಕರೆಗೆ ಕೇವಲ 50 ಸಾವಿರದಂತೆ ಭೂಮಿ ಖರೀದಿಸಿದ್ದಾರೆ . ಲಕ್ಷಾಂತರ ಬೆಲೆ ಬಾಳುವ ಭೂಮಿ ಕಡಿಮೆ ಮೊತ್ತಕ್ಕೆ ವ್ಯವಹಾರ ಮುಗಿದಿರುವ ಹಿಂದೆ ಯಾರ ಕೈವಾಡವಿದೆ. ಎಪಿಎಂಸಿ ಆವರಣದಲ್ಲಿ ಸರ್ಕಾರದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ರೈತ ಭವನ ಇದು ಯಾವ ಖಾಸಗಿ ವ್ಯಕ್ತಿ ಪಾಲಾಗಿದೆ ? ಯಾರ ಅವಧಿಯಲ್ಲಿ ಇವೆಲ್ಲ ಹಗರಣ ನಡೆದವು ?

ಇಂತಹ ನಿಜವಾದ ಗೋಲ್‌ಮಾಲ್ ವಿರುದ್ಧ ಹೋರಾಟ ಮಾಡಿ ಎಂದು ಕರವೇ ಸಂಘಟನೆಗೆ ಶಾಸಕ ವೀರಣ್ಣ ಚರಂತಿಮಠ ಸವಾಲು ಹಾಕಿದರು. ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ವಿಷಯದಲ್ಲಿ. ಥರ್ಡ್ ಪಾರ್ಟಿ ಇನ್‌ಫೆಕ್ಷನ್ ಬಿವಿವಿ ಸಂಘದ ಕಾಲೇಜುಗಳಿಗೆ ನೀಡಿ ಅಂತ ಹೇಳಿಲ್ಲ ಇಲ್ಲಿರುವ ಸೌಲಭ್ಯ ನೋಡಿಕೊಂಡು ಸರ್ಕಾರದ ವಿವಿಧ ಇಲಾಖೆಗಳು ನಾನಾ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಶಿಫಾರಸು ಮಾಡುತ್ತಾರೆ. ಇದರಲ್ಲಿ ಯಾವ ವೈಯಕ್ತಿಕ ಹಿತಾಸಕ್ತಿ ಅಡಗಿಲ್ಲ. ಕರವೇ ಸಂಘಟನೆ ಆರೋಪದಲ್ಲಿ ಸತ್ಯಾಂಶವಿಲ್ಲ ನನ್ನ ಮೇಲೆ ಇಡಿ , ಸಿಬಿಐ ಯಾವುದೇ ತನಿಖೆ ಸಂಸ್ಥೆಗೆ ದೂರು ಸರ್ಕಾರಿ ನೀಡಬಹುದು ಎಂದರು.

";