This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಕಸಾಪ ಜಿಲ್ಲಾಧ್ಯಕ್ಷರಾಗಿ ಶಿವಾನಂದ ಶೆಲ್ಲಿಕೇರಿ

ನಿಮ್ಮ ಸುದ್ದಿ ಬಾಗಲಕೋಟೆ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿವಾನಂದ ಶೆಲ್ಲಿಕೇರಿ ಆಯ್ಕೆ ಆಗಿದ್ದಾರೆ.

ಭಾನುವಾರ ಜಿಲ್ಲೆಯ 12 ಕೇಂದ್ರಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಿವಾನಂದ ಶೆಲ್ಲಿಕೇರಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜಿ.ಕೆ.ತಳವಾರ ಅವರಿಗಿಂತ 811 ಹೆಚ್ಚಿನ ಮತ ಪಡೆದು ಆಯ್ಕೆಯಾದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿ.ಕೆ.ತಳವಾರ, ಶಿವಾನಂದ ಶೆಲ್ಲಿಕೇರಿ ಹಾಗೂ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಸ್ಫರ್ಧಿಸಿದ್ದರು. ಜಿ.ಕೆ.ತಳವಾರ 1641, ಶಿವಾನಂದ ಶೆಲ್ಲಿಕೇರಿ 2452 ಹಾಗೂ ಮಹಾಂತೇಶ ಗಜೇಂದ್ರಗಡ 562 ಮತ ಪಡೆದರು.

ಜಿಲ್ಲೆಯ 12 ಕೇಂದ್ರಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಬಿರುಸಿನ ಮತದಾನ ನಡೆಯಿತು. ಸಂಜೆ 4 ಕ್ಕೆ ಆಯಾ ಮತಗಟ್ಟೆವಾರು ಫಲಿತಾಂಶ ಘೋಷಣೆ ನಂತರ ಬಾಗಲಕೋಟೆ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾವಾರು ಮತ ಕ್ರೂಡೀಕರಿಸಿ ಫಲಿತಾಂಶ ಘೋಷಿಸಲಾಯಿತು.

";