This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Crime News

ನಗರಸಭೆ ಅಧಿಕಾರಿ ಎಸಿಬಿ ಬಲೆಗೆ

ಬಾಗಲಕೋಟೆ

ಪ್ರಧಾನಮಂತ್ರಿ ಆವಾಸ್ ಯೋಜನೆಯ ಕುರಿತು ಪ್ರಮಾಣ ಪತ್ರ ನೀಡಲು ಲಂಚ ಕೇಳಿದ್ದ ಆಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆ ಅಧಿಕಾರಿ ಸದಾನಂದ ಎಸಿಬಿ ಬಲೆಗೆ ಬಿದ್ದವರು. ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಮಾಣಪತ್ರ ನೀಡಲು ಫಲಾನುಭವಿಯೊಬ್ಬರಿಂದ ಲಂಚ ಕೇಳಿದ್ದರು ಎಂಬ ಆರೋಪ ಸದಾನಂದ ಅವರ ಮೇಲಿತ್ತು.

ಮುಧೋಳ ನಗರದ ಮಂಜುನಾಥ ಎಂಬುವವರಿಂದ ಪ್ರಮಾಣಪತ್ರ ನೀಡಲು 15 ಸಾವಿರ ಹಣ ಲಂಚ ಕೇಳಿದ್ದರು. ಈ ಮೊದಲು 5 ಸಾವಿರ ರೂ. ನೀಡಿದ್ದ ಮಂಜುನಾಥ ಅವರು ಸೋಮವಾರ ಮತ್ತೆ 10 ಸಾವಿರ ರೂ. ನೀಡುತ್ತಿದ್ದ ವೇಳೆ ನಗರಸಭೆ ಅಧಿಕಾರಿ ಸದಾನಂದ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಡಿ.ಎಸ್.ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿತ್ತು.

 

Nimma Suddi
";