ಬಾಗಲಕೋಟೆ
ನಗರದ ಭಾವಸಾರ ಕ್ಷತ್ರೀಯ ಸಮಾಜದಿಂದ ಇತ್ತೀಚಿಗೆ ಶಿವಮೊಗ್ಗದ ಭಾವಸಾರ ಕ್ಷತ್ರೀಯ ಸಮಾಜದ ಯುವಕ ಹರ್ಷ ಹತ್ಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಹತ್ಯೆಯ ಬಗ್ಗೆ ಸಮಗ್ರ ತನಿಖೆ ಹಾಗೂ ಸಂಬಂಧಿಸಿದವರ ವಿರುದ್ಧ ಉಗ್ರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು. ನಗರದ ಬಸವೇಶ್ವರ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ, ಮೇಣದಬತ್ತಿ ಬೆಳಗಿಸುವುದರ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ನೂರಾರು ಸಮಾಜ ಸದಸ್ಯರು, ಸಮಾಜದ ಅಧ್ಯಕ್ಷ ಚಂದ್ರಕಾಂತ ತೇಲಕರ, ಚೇರಮನ್ ಕೃಷ್ಣಾಜಿ ಅಂಬೋರೆ, ಕಾರ್ಯದರ್ಶಿ ಸಂಜಯ ಮಹೀಂದ್ರಕರ, ಎಬಿಬಿಕೆ ಮಹಾಸಭಾ ಉಪಾಧ್ಯಕ್ಷ ದತ್ತಾತ್ರೇಯ ಚೌಧರಿ, ವಿಠ್ಠಲ-ರುಕ್ಮಿಣಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಶಿಂತ್ರೆ, ಭಾವಸಾರ ವ್ಹಿಜನ್ ಇಂಡಿಯಾ ಅಧ್ಯಕ್ಷ ಸತೀಶ ಲಾತೂರಕರ, ನಾಗೇಶ ಉತ್ತರಕರ, ಸುಭಾಸಚಂದ್ರ ಕೋಳೆಕರ, ಕ್ಷತ್ರೀಯ ಸಮಾಜದ ಮುಖಂಡ ಡಾ.ಮಾನೆ, ಮರಾಠಾ ಸಮಾಜದ ಮುಖಂಡ ಗುಂಡೂರಾವ ಶಿಂಧೆ ಇತರರು ಇದರು.