This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಹಜರತ್ ಸೈಯ್ಯದ ಷಾ ಮುರ್ತುಜಾ ಖಾದ್ರಿ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಕ

ಹಜರತ್ ಸೈಯ್ಯದ ಷಾ ಮುರ್ತುಜಾ ಖಾದ್ರಿ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಕ

ಹಜರತ್ ಸೈಯ್ಯದ ಷಾ ಮುರ್ತುಜಾ ಖಾದ್ರಿ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಕ

ನಿಮ್ಮ ಸುದ್ದಿ ಇಳಕಲ್

ಇಲ್ಲಿನ ಮಹಾನ ಸೂಫಿ ಸಂತ ಹಜರತ್ ಸೈಯ್ಯದ ಷಾ ಮುರ್ತುಜಾ ಖಾದ್ರಿ ದರ್ಗಾದ ಆಡಳಿತ ಮಂಡಳಿಯ ವಿರುದ್ಧ ಅನೇಕ ಭೃಷ್ಟಾಚಾರದ ಆರೋಪಗಳು ಇದ್ದು ಕಳೆದ ಹಲವು ತಿಂಗ ಳುಗಳಿಂದ ಆರೋಪ ಪ್ರತ್ಯಾರೋಪಗಳು ಹೊಂದಿ ಪೋಲಿಸ್ ಪ್ರಕರಣಗಳು ಕೂಡ ದಾಖಲಾಗಿರುತ್ತವೆ.

ಅಲ್ಲದೆ ಈ ಹಿಂದೆ ಇದ್ದ ಆಡಳಿತ ಮಂಡಳಿಯ ಅವಧಿಯು ಈಗಾಗಲೇ ಮುಗಿದು ಹೊಗಿರುವದರಿಂದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಆಡಳಿತಾಧಿಕಾರಿಯನ್ನು ನೇಮಿಸುವದು ಅನಿವಾರ್ಯವಾಗಿತ್ತು.

ಹೀಗಾಗಿ ಭೃಷ್ಟಾಚಾರದ ಆರೋಪ ಹೊತ್ತಿರುವ ಆಡಳಿತ ಮಂಡಳಿಯ ವಿರುದ್ಧ ತನಿಖೆ ಪೂರ್ಣಗೊಳ್ಳವ ವರೆಗೆ ಹಾಗೂ ಮಂಡಳಿಯ ಮುಂದಿನ ಆದೇಶದ ವರೆಗೆ ಅಬ್ದುಲ್‌ರಜಾಕ ಬಾಲೇಸಾಬ ಕಲಾಲ ಇವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಕರ್ನಾಟಕ ವಕ್ಫ ಮಂಡಳಿಯು ಶನಿವಾರ ದಂದು ಆದೇಶಿಸಿದೆ.

ಇವರನ್ನು ದರ್ಗಾದ ಎಲ್ಲಾ ಆಡಳಿತದ ಹೊಣೆಗಾರಿಕೆಯನ್ನು ನೀಡಿ ಯಾವ ರೀತಿ ಈ ಹಿಂದಿನ ಆಡಳಿತ ಮಂಡಳಿಯು ತನ್ನ ಎಲ್ಲ ಜವಾಬ್ದಾರಿಗಳನ್ನು ಯಾವ ರೀತಿಯಾಗಿ ನಿಭಾಹಿಸುತ್ತಿತ್ತೋ ಆ ಎಲ್ಲಾ ಜವಾಬ್ದಾರಿಗಳನ್ನು ಆಡಳಿತಾಧಿಕಾರಿಗಳು ಆದ ಕಲಾಲ ರವರು ನಿಭಾಹಿಸಬೇಕೆಂದು ಸೂಚಿಸಿದೆ.

";