ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಕೋಟಿ ಹಣ
ನಿಮ್ಮ ಸುದ್ದಿ ಬೆಂಗಳೂರು
ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರ ಹತ್ತಿರ ಬರೋಬರಿ 6 ಕೋಟಿ ಹಣ ಪತ್ತೆಯಾಗಿದೆ.
ಪ್ರಶಾಂತ್ ಅವರು ಗುತ್ತಿಗೆದಾರರ ಹತ್ತಿರ 40 ಲಕ್ಷ ರೂ ಲಂಚ ಸ್ವೀಕರಿಸುವಾಗಲೇ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಕೆಎಸ್‌ಡಿಎಲ್ ಅಧ್ಯಕ್ಷರಾಗಿರುವ ತಮ್ಮ ತಂದೆಯ ಪರವಾಗಿ ಪ್ರಶಾಂತ್ ಲಂಚ ಸ್ವೀಕರಿಸುತ್ತಿದ್ದರು ಎಂದು ತಿಳಿದುಬಂದಿದೆ. ಕಚೇರಿಯಲ್ಲಿ ಶೋಧಕಾರ ಚಾರಣೆ ನಡೆಸಿದಾಗ 2.2 ಕೋಟಿ ರೂ ಹಣ ಅಧಿಕೃತ ಹಣ ಪತ್ತೆಯಾಗಿತ್ತು. ಸಧ್ಯ ಶೋಧ ಕಾರ್ಯ ಮುಂದುವರಿಸಿದ್ದು ಒಟ್ಟಾರೆ ಆರು ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ ಇಡೀ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. 6 ಕೋಟಿಗೂ ಅಧಿಕ ಹಣದ ಮೂಲದ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. ಸದ್ಯಕ್ಕೆ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಪುತ್ರನ ಬಂಧನದ ಬೆನ್ನಲ್ಲೇ ಶಾಸಕ ವಿರೂಪಾಕ್ಷಪ್ಪ ಅವರಿಗೂ ತನಿಖೆ ಉರುಳು ಸುತ್ತಿಕೊಳ್ಳುವ ಸಾಧ್ಯತೆ. ಪ್ರಕರಣದ ಮೊದಲ ಆರೋಪಿಯನ್ನಾಗಿ ಪ್ರಶಾಂತ್ ಅವರನ್ನು ಪರಿಗಣಿಸಲಾಗಿದೆ. ಇನ್ನು ಹಲವರು ಈ ಪ್ರಕರಣದಲ್ಲಿ ಶಾಮಿಲ್ ಆಗಿದ್ದಾರೆ. ಆರೋಪಿ ನೇರವಾಗಿ ಲಂಚ ಕೇಳುವುದಕ್ಕೆ ಪ್ರಬಲ ಸಾಕ್ಷಾಧಾರಗಳು ಲಭ್ಯವಾಗಿವೆ. ಅಷ್ಟೇ ಅಲ್ಲದೆ ಯಾರ ಪ್ರಭಾವದಿಂದ ಲಂಚಕ್ಕೆ ಬೇಡಿಕೆ ಇರಿಸಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಯಲಿದೆ.