This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ತೋಟಗಾರಿಕೆ ವಿವಿಯಲ್ಲಿ ಮತ ಎಣಿಕೆ ನಾಳೆ

ತೋಟಗಾರಿಕೆ ವಿವಿಯಲ್ಲಿ ಮತ ಎಣಿಕೆ ನಾಳೆ

ಕರ್ನಾಟಕ ವಿಧಾನಸಭಾ ಚುನಾವಣೆ-2023

ನಿಮ್ಮ ಸುದ್ದಿ ಬಾಗಲಕೋಟೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ 13 ರಂದು ತೋಟಗಾರಿಕೆ ವಿವಿಯಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದ್ದಾರೆ.

ಮತ ಎಣಿಕೆಗೆ ಎಲ್ಲ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುವದರಿಂದ ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರುಗಳು ಅಂದು ಬೆಳಿಗ್ಗೆ 7 ಗಂಟೆಗೆ ಎಣಿಕೆ ಕೇಂದ್ರಗಳಲ್ಲಿ ಹಾಜರಿರಬೇಕು.

ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ತಲಾ ಒಂದು ಭದ್ರತಾ ಕೊಠಡಿ ಹಾಗೂ ಒಂದು ಮತ ಎಣಿಕೆ ಕೊಠಡಿ ಮಾಡಲಾಗಿದೆ. ನೆಲ ಮಹಡಿಯಲ್ಲಿ ಮುಧೋಳ ಮೀಸಲು ಕ್ಷೇತ್ರ, ತೇರದಾಳ, ಜಮಖಂಡಿ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ನಡೆಯಲಿದೆ.

ಮೊಲದನೇ ಮಹಡಿಯಲ್ಲಿ ಬೀಳಗಿ, ಬಾದಾಮಿ, ಬಾಗಲಕೋಟೆ ಹಾಗೂ ಹುನಗುಂದ ಮತಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಯು ಪ್ರತ್ಯೇಕ ಕೊಠಡಿಗಳಲ್ಲಿ ಜರುಗಲಿದ್ದು, ಎಣಿಕೆಗೆ 4 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಮತಕ್ಷೇತ್ರಕ್ಕೆ ಇವಿಎಂ ಮತ ಎಣಿಕೆಗೆ 14 ಟೇಬಲ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ಟೇಬಲ್‍ಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರವರ ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಸಹಾಯಕ ಚುನಾವಣಾಧಿಕಾರಿಗಳು ನೇಮಿಸಲಾಗಿದೆ.

ಸೇವಾ ಮತದಾರರಿಂದ ಸ್ವೀಕರಿಸಲ್ಪಡುವ ಅಂಚೆ ಮತಪತ್ರಗಳ ಎಣಿಕೆಗೆ ಪ್ರತಿ ಮತಕ್ಷೇತ್ರಕ್ಕೆ 4 ಸ್ಕ್ಯಾನರ್, 8 ಸ್ಕ್ಯಾನಿಂಗ್ ಅಸಿಸ್ಟಂಟ್ ಹಾಗೂ ಒಬ್ಬ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದೆ. ಒಟ್ಟಾರೆಯಾಗಿ ಎಣಿಕೆ ಕಾರ್ಯಕ್ಕೆ ಕಾಯ್ದಿಟ್ಟ ಸಿಬ್ಬಂದಿ ಸೇರಿದಂತೆ 636 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಮತ ಎಣಿಕೆಗೆ ಓರ್ವ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 5 ಜನ ಡಿಎಸ್‍ಪಿ, 11 ಜನ ಸಿಪಿಐ, 28 ಜನ ಪಿಎಸ್‍ಐ, 57 ಜನ ಎಎಸ್‍ಐ, 134 ಜನ ಹೆಡ್ ಕಾನ್ಸಟೇಬಲ್, 249 ಪೊಲೀಸ್ ಕಾನ್ಸಟೇಬಲ್, 25 ಡಬ್ಲೂಪಿಸಿ, 3 ಜನ ಕೆ.ಎಸ್.ಆರ್.ಪಿ, 4 ಜನ ಡಿಎಆರ್ ಹಾಗೂ 150 ಹೋಮ್ ಗಾರ್ಡ ನಿಯೋಜನೆ ಮಾಡಲಾಗಿದೆ.

ರಸ್ತೆ ಮಾರ್ಗ ಬದಲಾವಣೆ

ಮತ ಎಣಿಕೆ ದಿನ ಮೇ 13 ರಂದು ಬಾಗಲಕೋಟೆ ತೋವಿವಿಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ಎಣಿಕೆ ಕಾರ್ಯ ಜರುಗುವದರಿಂದ ಸೀಮಿಕೇರಿಯಿಂದ ನವನಗರ ಕಡೆಗೆ ಬರುವ ರಸ್ತೆಯು ಸೀಮಿಕೇರಿಯಿಂದ ತೇಜಸ್ ಇಂಟರನ್ಯಾಷನಲ್ ಸ್ಕೂಲವರೆಗೆ ಬಂದ್ ಇರುತ್ತದೆ. ಚುನಾವಣೆಯ ಮತ ಎಣಿಕೆಗೆ ಬರುವ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕ ವಾಹನಗಳಿಗೆ ಸೀಮಿಕೇರಿಯಿಂದ ತೇಜಸ್ ಇಂಟರ್‍ನ್ಯಾಷನಲ್ ಸ್ಕೂಲವರೆಗೆ ನಿರ್ಭಂದವಿರುತ್ತದೆ. ಕಾರಣ ಬಾಗಲಕೋಟೆ ನಗರಕ್ಕೆ ಬರುವ ಸಾರ್ವಜನಿಕರು ಗದ್ದನಕೇರಿಯಿಂದ ವಿದ್ಯಾಗಿರಿಗೆ ಹೋಗುವ ಮಾರ್ಗವನ್ನು ಉಪಯೋಗಿಸಲು ವಿನಂತಿ.
*- ಪಿ.ಸುನೀಲ್‍ಕುಮಾರ, ಜಿಲ್ಲಾಧಿಕಾರಿ*

 

Nimma Suddi
";