ವಾಷಿಂಗ್ಟನ್ : ಅಮೆರಿಕದ ಶಸ್ತ್ರ ಸಜ್ಜಿತ ಡ್ರೋನ್‌ಗಳು ಭಾರತದ ಗಡಿಯನ್ನು ಕಾಯಲಿದ್ದು, ಅತ್ಯಾಧುನಿಕ ಎಂಕ್ಯು – 9ಬಿ ಡ್ರೋನ್‌ಗಳನ್ನು ಭಾರತಕ್ಕೆ ಮಾರಲು ಅಮೆರಿಕ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
31 ಡ್ರೋನ್‌ಗಳ ಖರೀದಿಗಾಗಿ ಭಾರತ 4 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ವೆಚ್ಚ ಮಾಡಲಿದ್ದು, ಅಮೆರಿಕದ ರಕ್ಷಣಾ ಸಹಕಾರ ಏಜೆನ್ಸಿಯು ಭಾರತಕ್ಕೆ ಡ್ರೋನ್ ಮಾರಾಟ ಮಾಡಲು ಸಮ್ಮತಿ ಸೂಚಿಸಿದ್ದು, ಅಮೆರಿಕ ಕಾಂಗ್ರೆಸ್‌ನಲ್ಲೂ ಈ ವಿಚಾರ ಪ್ರಸ್ತಾಪಕ್ಕೆ ಬರಲಿದೆ.ಇದು ಒಂದು ಸರ್ಕಾರದಿಂದ ಮತ್ತೊಂದು ಸರ್ಕಾರದ ನಡುವೆ ನಡೆಯುತ್ತಿರುವ ರಕ್ಷಣಾ ಒಪ್ಪಂದವಾಗಿದೆ.
ಸರ್ಕಾರದಿಂದ ಸರ್ಕಾರದ ನಡುವೆ ಶಸ್ತ್ರಾಸ್ತ್ರ ಮಾರಾಟ ಒಪ್ಪಂದ ಯಶಸ್ವಿಯಾಗಿ ನಡೆದಿದ್ದು, ಭಾರತ ಹಾಗೂ ಅಮೆರಿಕ ಸರ್ಕಾರಗಳ ನಡುವಣ ಬಾಂಧವ್ಯ ವೃದ್ದಿಯ ದ್ಯೋತಕವಾಗಿದ್ದು, ಭಾರತಕ್ಕೆ ಎಂಕ್ಯು – 9ಬಿ ಗಾರ್ಡಿಯನ್ ಡ್ರೋನ್‌ಗಳನ್ನ ಮಾರಾಟ ಮಾಡುವಂತೆ 2023ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಮಾಡಿದ್ದಾಗ ಮನವಿ ಮಾಡಿದ್ದರು.
ಈ ಮನವಿಗೆ ಜೋ ಬೈಡನ್ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಿದ್ದು ಡ್ರೋನ್‌ಗಳ ಮಾರಾಟಕ್ಕೆ ಸಮ್ಮತಿ ಸೂಚಿಸಿದ್ದು, ಭಾರತ – ಅಮೆರಿಕ ದೇಶಗಳ ನಡುವೆ ರಕ್ಷಣಾ ಸಹಕಾರ ಬಾಂಧವ್ಯ ವೃದ್ದಿ ಸೇರಿದಂತೆ ಉಭಯ ರಾಷ್ಟ್ರಗಳ ಸಮಗ್ರ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಈ ಒಪ್ಪಂದವು ಸಹಕಾರಿಯಾಗಿದೆ ಎಂದು ಮಾಹಿತಿ ಕಂಡು ಬಂದಿದೆ.