ನ್ಯೂಯಾರ್ಕ್: ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರು ಕೆಟಮೈನ್‌ನಂಥಾ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಾರೆ ಎಂಬ ಸಂಗತಿ ಬಯಲಾಗಿದೆ. ಖಿನ್ನತೆಗೆ ಒಳಗಾಗುವ ಎಲಾನ್ ಮಸ್ಕ್, ಅದರಿಂದ ಹೊರ ಬರಲು ಮಾದಕ ವಸ್ತುಗಳನ್ನ ಸೇವನೆ ಮಾಡುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಎಲಾನ್ ಮಸ್ಕ್ ಅವರ ವಿಶ್ವ ವಿಖ್ಯಾತ ಸಂಸ್ಥೆಗಳಾದ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್‌ನ ಆಡಳಿತ ಮಂಡಳಿ ಸದಸ್ಯರು ಆತಂಕಕ್ಕೆ ಒಳಗಾಗಿದ್ದು, ಡ್ರಗ್ಸ್ ಸೇವನೆಯಿಂದ ಎಲಾನ್ ಮಸ್ಕ್ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಆತಂಕ ವ್ಯಕ್ತವಾಗಿದ್ದು, ಎಲಾನ್ ಮಸ್ಕ್ ಅತಿ ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದು, ಕೆಟಮೈನ್‌ನಂಥಾ ಮಾದಕ ವಸ್ತುಗಳು ಹಾನಿಕರ ಆಗಿದ್ದರೂ ಕೂಡಾ ಎಲಾನ್ ಮಸ್ಕ್ ಅವರ ಸುಗಮ ಕಾರ್ಯ ನಿರ್ವಹಣೆಗೆ ಹಾಗೂ ಕಂಪನಿಯನ್ನು ಮುನ್ನಡೆಸಲು ಮಾನಸಿಕ ಸ್ಥೈರ್ಯ ತುಂಬಲು ನೆರವಾಗ್ತಿವೆ ಎನ್ನಲಾಗಿದೆ.
ಮಾದಕ ವಸ್ತುವನ್ನು ವಾರಕ್ಕೆ ಒಮ್ಮೆ ಅಥವಾ ತುಂಬಾನೇ ಅಪರೂಪವಾಗಿ ಸಣ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತೇನೆ ಎಂದೂ ಎಲಾನ್ ಮಸ್ಕ್ ಹೇಳಿದ್ದಾರೆ. ಓರ್ವ ವೈದ್ಯರಿಂದಲೇ ನನಗೆ ಡ್ರಗ್ಸ್ ಸೇವನೆಗೆ ಸಲಹೆ ಸಿಕ್ಕಿತು ಎಂದೂ ಮಸ್ಕ್ ಹೇಳಿದ್ದಾರೆ. ನಾನು ದಿನಕ್ಕೆ 16 ಗಂಟೆ ಕಾಲ ಕೆಲಸ ಮಾಡುತ್ತೇನೆ. ಆದರೆ ಅತಿಯಾದ ಕೆಟಮೈನ್ ಸೇವನೆ ಮಾಡಿದರೆ ನಾನು ಕೆಲಸ ಮಾಡೋದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಅಲ್ಪ ಪ್ರಮಾಣದಲ್ಲಿ ಸೇವಿಸುತ್ತೇನೆ ಎಂದು ಮಸ್ಕ್ ಹೇಳಿದ್ದಾರೆ.
ಪತ್ರಕರ್ತ ಡಾನ್ ಲೆಮನ್ ಅವರಿಗೆ ಸಂದರ್ಶನ ನೀಡಿದ ಎಲಾನ್ ಮಸ್ಕ್, ನಾನು ಖಿನ್ನತೆಗೆ ಒಳಗಾದಾಗ, ನನ್ನ ಮಿದುಳಿನಲ್ಲಿ ಋಣಾತ್ಮಕ ರಾಸಾಯನಿಕ ವಸ್ತುಗಳು ಹೆಚ್ಚಾದಾಗ ನಾನು ಕೆಟಮೈನ್ ಸೇವನೆ ಮಾಡುತ್ತೇನೆ. ಈ ಮಾದಕ ವಸ್ತು ನನ್ನ ಮನಸ್ಸಿನಲ್ಲಿ ಇರುವ ಋಣಾತ್ಮಕ ಸಂಗತಿಗಳನ್ನು ಹೊರ ಹಾಕಲು ನೆರವಾಗುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.