ಕಲಬುರಗಿ,: ಮದುವೆಗೆ ನಿರಾಕರಿಸಿದ್ದಕ್ಕೆ ಕಲಬುರಗಿಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ ಯುವತಿ ಪುಷ್ಪಾ(26) ನಿನ್ನೆ ಸಂಜೆ (ಮೇ.10) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ತಿಲಿದು ಬಂದಿದೆ.
ದೊಡ್ಡಬಳ್ಳಾಪುರ ಹೊರವಲಯದ ನವೋದಯ ಶಾಲೆ ಬಳಿ ಭೀಕರ ಘಟನೆಯೊಂದು ನಡೆದಿದೆ. ಹಳೇ ದ್ವೇಷಕ್ಕೆ ಯುವಕರ ಗುಂಪೊಂದು ಹುಸ್ಕೂರು ನಿವಾಸಿ ಹೇಮಂತ್ ಗೌಡ (27) ಮೇಲೆ ಅಟ್ಯಾಕ್ ಮಾಡಿ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ತಡರಾತ್ರಿ ಹೇಮಂತ್ ಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿಗಳು ಕುತ್ತಿಗೆ ಎದೆಗೆ ಚಾಕುವಿನಿಂದ ಇರಿದಿದ್ದಾರೆ. 10 ಕ್ಕೂ ಹೆಚ್ಚು ಯುವಕರು ಅಟ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ವಾಕಿಂಗ್ ಮಾಡುವ ವೇಳೆ ಹೆದ್ದಾರಿ ಬದಿಯಲ್ಲಿ ಮೃತ ದೇಹ ಪತ್ತೆಯಾಗಿದೆ.
UPSC ಪರೀಕ್ಷೆಗೆ ಸಿದ್ದತೆ ನಡೆಸಿದ್ದ ಪುಷ್ಪಾ ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಕಳೆದ ಕೆಲ ದಿನಗಳಿಂದ ಪುಷ್ಪಾ ತನ್ನ ಪ್ರಿಯಕರ ಕಿರಣ್ಗೆ ಮದುವೆ ಮಾಡಿಕೋ ಎಂದು ಒತ್ತಾಯ ಮಾಡ್ತಿದ್ದರು. ಆದರೆ ಪುಷ್ಪಾ ಹಾಗೂ ಕಿರಣ್ಗೆ ಜಾತಿ ವಿಚಾರ ಅಡ್ಡ ಬಂದಿತ್ತು. ಅನ್ಯ ಜಾತಿ ಹಿನ್ನೆಲೆ ಯುವತಿ ಮದುವೆಗೆ ಕಿರಣ್ ಮನೆಯವರು ನಿರಾಕರಿಸಿದ್ದರು.
ಕಿರಣ್ ಕೂಡ ಈಗಲೇ ಮದುವೆ ಬೇಡವೆಂದು ಪುಷ್ಪಾಗೆ ಸಮಾಧಾನ ಮಾಡಿದ್ದ. ಆದರೆ ಇದರಿಂದ ಮನನೊಂದ ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.