| Latest Version 9.0.7 |

State News

ಅಲೆಮಾರಿ, ಎಸ್‌ಸಿ/ಎಸ್‌ಟಿ ಅಭಿವೃದ್ಧಿಗೆ ಸರ್ಕಾರ ಬದ್ಧ: ಪಲ್ಲವಿ ಜಿ

ಬಾಗಲಕೋಟೆ: ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಸಮಾಜದ ಆರ್ಥಿಕ–ಸಾಮಾಜಿಕ ಉನ್ನತಿಗೆ ಸರ್ಕಾರ ಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ತಿಳಿಸಿದ್ದಾರೆ.

ಶನಿವಾರ ಬಾಗಲಕೋಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದ ಅನೇಕ ಎಸ್‌ಸಿ–ಎಸ್‌ಟಿ ಹಾಗೂ ಅಲೆಮಾರಿ ಕುಟುಂಬಗಳು ಮನೆ, ದಾಖಲೆ ಪತ್ರಗಳ ಕೊರತೆಯಿಂದ ಹಿಂದುಳಿದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇವರ ಪುನರ್ವಸತಿ, ಗೃಹ ವ್ಯವಸ್ಥೆ ಹಾಗೂ ಜೀವನೋನ್ನತಿ ಸರ್ಕಾರದ ಆದ್ಯತೆಯಾಗಿದೆ” ಎಂದು ಹೇಳಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಲ್ಯಾಣ ಯೋಜನೆಗಳ ಮೂಲಕ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಬಲವರ್ಧನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. “ಸಮಾಜದ ಮೂಲಭೂತ ಸಮಸ್ಯೆಗಳನ್ನು ತಿಳಿದುಕೊಳ್ಳಲು ಹಾಗೂ ಯೋಜನೆಗಳ ಜಾರಿಗೆ ವೇಗ ನೀಡಲು ನಿಗಮ ಮಟ್ಟದಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳಲಾಗುತ್ತಿದೆ” ಎಂದು ಪಲ್ಲವಿ ಜಿ ಹೇಳಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಅನುದಾನವನ್ನು ಗೃಹ ನಿರ್ಮಾಣ, ಶೈಕ್ಷಣಿಕ ನೆರವು, ಸ್ವಾವಲಂಬನೆ ಯೋಜನೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದಾಗಿ ತಿಳಿಸಿದರು.

“ಅಲೆಮಾರಿ ಸಮುದಾಯದ ಬಹುಮಂದಿಗೆ ಶಾಶ್ವತ ಮನೆ ಮತ್ತು ಕಾನೂನುಬದ್ಧ ದಾಖಲೆಗಳ ಕೊರತೆ ಇದೆ. ಸಮಾಜದ ಹಿತಾಸಕ್ತಿ ಮನಸ್ಸಿನಲ್ಲಿ ಖಾಸಗಿ ವ್ಯಕ್ತಿಗಳು ಜಾಗ ನೀಡಿದರೆ, ಸರ್ಕಾರ ಆ ಜಾಗವನ್ನು ಖರೀದಿ ಮಾಡಿ ಅಲೆಮಾರಿ ಕುಟುಂಬಗಳಿಗೆ ಸೂರಿನ ವ್ಯವಸ್ಥೆ ಮಾಡಲು ಸಿದ್ಧವಿದೆ” ಎಂದು ಅವರು ಸ್ಪಷ್ಟಪಡಿಸಿದರು.

ಅಲೆಮಾರಿ–ಎಸ್‌ಸಿ–ಎಸ್‌ಟಿ ಸಮುದಾಯದ ಸಬಲೀಕರಣದ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

Balachandra Roogi
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";