ಅಭ್ಯರ್ಥಿಯ ರತಿಕ್ರೀಡೆ ವಿಡಿಯೋ ರಿಲೀಸ್
ನಿಮ್ಮ ಸುದ್ದಿ ವಿಜಯಪುರ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಇನ್ನೆರಡು ದಿನ ಬಾಕಿ ಇರುವಂತೆ ವಿಜಯಪುರ-ಬಾಗಲಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರದ್ದು ಎನ್ನಲಾದ ಕಾಸಗಿ ವಿಡಿಯೋವೊಂದು ಹರಿದಾಡುತ್ತಿದೆ. ಅಪರಿಚಿತರು ಈ ವಿಡಿಯೋವನ್ನು ಹೊರಹಾಕಿದ್ದಾರೆ.
ಪ್ರಬಲ ಪಕ್ಷೇತರ ಅಭ್ಯರ್ಥಿ ಎಂದೆ ಗುರ್ತಿಸಲಾದ ಮಲ್ಲಿಕಾರ್ಜುನ ಲೋಣಿ ಅವರದ್ದು ಎಂದು ಹೇಳಲಾಗುತ್ತಿರುವ ಖಾಸಗಿ ವಿಡಿಯೋವೊಂದನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಮಹಿಳೆಯೊಂದಿಗೆ ರತಿಕ್ರೀಡೆಯಲ್ಲಿರುವ ವಿಡಿಯೋ ಇದೆ.
ವಿಡಿಯೋದಲ್ಲಿ ಮಹಿಳೆಯೊಂದಿಗೆ ಖಾಸಗಿಯಾಗಿರುವ ವಿಡಿಯೋ ಇದಾಗಿದ್ದು ಈ ಕುರಿತು ಮಂಗಳವಾರವಷ್ಟೇ ಪಕ್ಷೇತರ ಅಭ್ಯರ್ಥಿ ಲೋಣಿ ವಿಡಿಯೋ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದರು. ಮುಂದಿನ ದಿನದಲ್ಲಿ ತಮ್ಮ ಮಾನ ಹರಾಜು ಮಾಡುವುದಾಗಿ ಕೆಲವರು ತಮ್ಮ ಕಾರ್ಯಕರ್ತರ ಬಳಿ ಹೇಳಿದ್ದರು ಎಂದಿದ್ದರು. ಈಗ ಈ ವಿಡಿಯೋ ವೈರಲ್ ಆಗಿದೆ.