ನಿಮ್ಮ ಸುದ್ದಿ ಬಾಗಲಕೋಟ
ನಗರದ ಬವಿವ ಸಂಘದ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರದ ಅಡುಗೆ ಸಿಬ್ಬಂದಿಗೆ ಬಾಗಲಕೋಟೆಯ ಗೆಳೆಯರ ಬಳಗದಿಂದ ರೇಷನ್ ಕಿಟ್ ವಿತರಿಸಲಾಯಿತು.
ಚಿನ್ಮಯ ಹೆಬ್ಬಾಳ, ಆಕಾಶ ಹಲಕಿ, ರಜತ್ ದಾವಣಗೆರೆ ಮತ್ತು ಇಶಾನ್ ಶಿರಬೂರ ಅವರ ನೇತೃತ್ವದ ಗೆಳೆಯರ ಬಳಗ ರೇಷನ್ ಕಿಟ್ ವಿತರಿಸಿತು. ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾದ ಕೋವಿಡ್ ಸೋಂಕಿತರಿಗೆ ಕಳೆದೊಂದು ತಿಂಗಳಿನಿಂದ ಪ್ರತಿನಿತ್ಯ ರುಚಿಕಟ್ಟಾದ ಅಡುಗೆ ಸಿದ್ಧಪಡಿಸಿ ಉಣಬಡಿಸುತ್ತಿರುವ ಅಡುಗೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಈ ಯುವ ಗೆಳೆಯರು ೫೦ ರೇಷನ್ ಕಿಟ್‌ಗಳನ್ನು ವಿತರಿಸಿ ತಮ್ಮ ಸಾಮಾಜಿಕ ಕಾಳಜಿ ಮೆರೆದಿರುವರು.
ಬವಿವ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ಕಿಟ್ ಸ್ವೀಕರಿಸಿ ಕೋವಿಡ್ ಚಿಕಿತ್ಸಾ ಕೇಂದ್ರದ ೫೦ ಅಡುಗೆ ಸಿಬ್ಬಂದಿಗೆ ವಿತರಿಸಿದರು.
ವೈದ್ಯಕೀಯ ಕಾಲೇಜ್ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ವಸತಿ ನಿಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಸದಸ್ಯರಾದ ಅಶೋಕ ಕಲ್ಯಾಣಶೆಟ್ಟಿ, ಅಶೋಕ ರೇಣುಕಪ್ಪ, ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ.ಆಶಾಲತಾ ಮಲ್ಲಾಪೂರ ಇದ್ದರು.