ನಿಮ್ಮ ಸುದ್ದಿ ಬೆಳಗಾವಿ
ಮಹಾದಾಯಿ ನೀರನ್ನು ಕರ್ನಾಟಕ ತಿರುಗಿಸಿದೆ ಎಂಬ ಗೋವಾದ ಆರೋಪದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ನಿಂದ ರಚನೆಯಾದ ಸಮಿತಿ ಮಾ.೨೬ರಂದು ಭೇಟಿ ನೀಡಲಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟç ರಾಜ್ಯದ ನೀರಾವರಿ ಇಲಾಖೆಗಳ ತ್ರಿಸದಸ್ಯ ಸಮಿತಿ ಜಿಲ್ಲೆಯ ಖಾನಾಪುರ ಬಳಿಯ ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಲಿದ್ದು ಸಮಿತಿ ಬರುವಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಗೋವಾ ರಾಜ್ಯದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಿಂದ ರಚಿತವಾದ ಸಮಿತಿ ಈಗಾಗಲೆ ಮಾ.೧೯ರಂದು ಭೇಟಿ ನೀಡಿದ್ದರೂ ಒಮ್ಮತದ ನಿರ್ಧಾರಕ್ಕೆ ಬಂದಿರಲಿಲ್ಲ. ಗೋವಾದ ಅಧಿಕಾರಿಗಳು ರಾಜ್ಯದ ಪೊಲೀಸರು ಮತ್ತು ನೀರಾವರಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರಿಂದ ಸಮಿತಿ ಅರ್ಧಕ್ಕೆ ವಾಪಸ್ಸಾಗಿತ್ತು.
ಹೀಗಾಗಿ ತ್ರಿಸದಸ್ಯ ಸಮಿತಿ ಮಾ.೨೬ರಂದು ಕಳಸಾ ಬಂಡೂರಿ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಲಿದೆ. ಮಹಾದಾಯಿ ವಿವಾದ ಇತ್ಯರ್ಥಕ್ಕೆ ಗೋವಾ ಸರಕಾರ ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿರುವ ಧೋರಣೆ ಖಂಡಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಲ್ಲದೆ ಬೆಂಗಳೂರಲ್ಲಿ ಇತ್ತೀಚೆಗೆ ಸಭೆಯನ್ನೂ ನಡೆಸಿದ್ದರು.