ನಿಮ್ಮ ಸುದ್ದಿ ಬಾಗಲಕೋಟೆ
ಜಾಗತಿಕ ಪೆಡಂಭೂತವಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿಗೆ ಎಲ್ಲರೂ ನಲುಗಿದ್ದು, ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿ ನಿರಾಶ್ರಿತರಾದ ಮತ್ತು ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮೀನಗಡ ನಗರ ಬಿಜೆಪಿ ಘಟಕದಿಂದ ಆಹಾರ್ ಕಿಟ್ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಯಮನಪ್ಪ ನಾಗರಾಳ, ಸಂಕ?À್ಟ ಸಮಯದಲ್ಲಿ ಆಹಾರ ಕಿಟ್ ನೀಡಲು ಕರೆ ನೀಡಿದಾಗ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ೧೦೦ಕ್ಕೂ ಹೆಚ್ಚು ಕಿಟ್ ನೀಡುವಲ್ಲಿ ಸಹಕರಿಸಿದರು. ಇಊದ ಎಲ್ಲ ಕಾರ್ಯಕರ್ತರ ಯಶಸ್ಸಾಗಿದೆ ಎಂದರು.
ಕಿಟ್ ವಿತರಿಸಿ ಮಾತನಾಡಿದ ಪಪಂ ಅಧ್ಯಕ್ಷ ಸಂಗಪ್ಪ ತಳವಾರ, ಬಿಜೆಪಿ ನಗರ ಘಟಕದ ಕಾರ್ಯ ಶ್ಲಾಘನೀಯ. ಇದು ಮುಂದೆ ಕಿಟ್ ನೀಡುವವರಿಗೆ ಪ್ರೇರಣೆಯಾಗಲಿದೆ. ಹೆಚ್ಚು ಹೆಚ್ಚು ಸಂಘಟನೆಗಳು ಕೊರೊನಾದಿಂದ ಸಂಕ?À್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಬೇಕೆಂದು ಕರೆ ನೀಡಿದರು.
ರವಿಕುಮಾರ್ ಬಂಡಿ, ಬಸವರಾಜ ಬೇವೂರ, ಪಪಂ ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಹಣಮಂತ ಕತ್ತಿ, ಸಿದ್ದು ಸಜ್ಜನ, ಸುರೇಶ ಕಾಯಿ, ಮಹಾಂತೇಶ್ ಹಿರೇಮಠ, ಯಮನಪ್ಪ ಕತ್ತಿ, ಮುತ್ತಪ್ಪ ವಡ್ಡರ, ರಾಘವೇಂದ್ರ ಗೌಡರ, ಬಾಬು ಛಬ್ಬಿ, ಪಾಪಣ್ಣ ಲಮಾಣಿ, ರಾಮಣ್ಣ ಬ್ಯಾಕೊಡಿ, ಸಿ.ಎಂ.ಅನವಾಲ, ಶಂಕ್ರಯ್ಯ ರೇವಣಕಿಮಠ, ಉಮೇಶ ಕಂಠಿ, ಅಶೋಕ ಯರಗೇರಿ, ಚನ್ನಪ್ಪ ಕುಂಬಾರ ಇತರರು ಇದ್ದರು.