This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಕೇಂದ್ರದಿಂದ ಸ್ವಾಯತ್ತ ಸಂಸ್ಥೆ ದುರುಪಯೋಗ

ಕೇಂದ್ರದಿಂದ ಸ್ವಾಯತ್ತ ಸಂಸ್ಥೆ ದುರುಪಯೋಗ
ಬಾಗಲಕೋಟೆ
ಮೋದಿ ನೇತೃತ್ವದ ಕೇಂದ್ರ ಸರಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶಗೌಡ ಅವರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದು ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಎದ್ದು ಕಾಣುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಆದರೆ ರಾಜಕೀಯ ಕಾರಣಕ್ಕೆ ಸಿಬಿಐಗೆ ಹಸ್ತಾಂತರಿಸಿದರು ಎಂದು ಹೇಳಿದರು.
ಇದರಿಂದ ನಮ್ಮ ರಾಜ್ಯದ ಪೊಲೀಸರಿಗೆ ತನಿಖೆ ಮ‌ಾಡುವ ಚಾಕಚಕ್ಯತೆ ಇಲ್ಲದಂತಾಗಿದೆ. ಪೋಲೀಸರನ್ನು ಡಿಮಾರಲ್ ಮಾಡುವ ತಂತ್ರವಿದು. ವಿನಯ್ ಕುಲಕರ್ಣಿ ಬಿಜೆಪಿಗೆ ಉದ್ದೇಶದಿಂದ ದಾಳಿ ನಡೆದಿದೆ. ದೇಶದಲ್ಲಿ ಅತಿಯಾಗಿ ಸಿಬಿಐ ದುರುಪಯೋಗ ಪಡಿಸಿಕೊಂಡಿದ್ದು ಇದೇ ಮೊದಲು. ಅದೂ ಮರದ ನೇತೃತ್ವದಲ್ಲಿ ಹೆಚ್ಚಾಗಿದ್ದು ಪ್ರತಿಪಕ್ಷದ ಬಲ ಕುಗ್ಗಿಸುವ ಕುತಂತ್ರ ಅಡಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಹೇಳಿದರು.

Nimma Suddi
";