ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಾದ್ಯಂತ ನವೆಂಬರ 3 ರಿಂದ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕೆಲವು ಕಡೆಗಳಲ್ಲಿ ಟೆಂಟಗಳನ್ನು ಹಾಕಿಕೊಂಡು, ಊರ ಹೊರಗಿನ ಸ್ಥಳಗಳಲ್ಲಿ ಗುಂಪು ಸೇರಿಕೊಂಡು ಇಸ್ಪೀಟ್ ಜೂಜಾಟ ಆಡುವ ಸಾಧ್ಯತೆ ಇದ್ದು, ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶ ಇರುವದಿಲ್ಲ.
ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಪೊಲೀಸ್ ಠಾಣೆ, ವೃತ್ತ ಕಚೇರಿ ಹಾಗೂ ಉಪ-ವಿಭಾಗದ ಮಟ್ಟದಲ್ಲಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಇಸ್ಪಿಟ್ ಜೂಜಾಟದಲ್ಲಿ ತೊಡಗಿದವರ ವಿರುದ್ದ ಪೊಲೀಸ್ ಕಾಯ್ದೆ ಅಡಿಯಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.