This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

National News

ಅಂಬಾನಿ ಕುಟುಂಬದ ಮದುವೆಗೆ ಮೊದಲ ಬಾರಿಗೆ ತಮ್ಮ ನಿಯಮವನ್ನೇ ಮುರಿದ ಅಕ್ಷಯ್ ಕುಮಾರ್

ಅಂಬಾನಿ ಕುಟುಂಬದ ಮದುವೆಗೆ ಮೊದಲ ಬಾರಿಗೆ ತಮ್ಮ ನಿಯಮವನ್ನೇ ಮುರಿದ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ತಮ್ಮ ಫಿಟ್ನೆಸ್‌ ಮೂಲಕ ಹೆಸರು ಮಾಡಿದ್ದು, ಅಕ್ಷಯ್ ತಮ್ಮದೇ ಆದ ದಿನಚರಿ ನಿಗದಿಪಡಿಸಿಕೊಂಡಿದ್ದು, ಅದನ್ನು ಅವರು ನಿಖರವಾಗಿ ಅನುಸರಿಸುತ್ತಾರೆ. ಶೂಟಿಂಗ್ ಸಮಯದಲ್ಲಿಯೂ ಅವರು ಊಟ ಮಾಡಲು ಹಾಗೂ ನಿದ್ರಿಸಲು ಸಮಯ ನಿಗದಿಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಅವರ ಜೊತೆ ಕೆಲಸ ಮಾಡುವ ನಿರ್ದೇಶಕರು, ನಿರ್ಮಾಪಕರಿಗೆ ಇದು ಗೊತ್ತಿದ್ದು, ಅವರ ಟೈಮಿಂಗ್ಸ್​ಗೆ ತಕ್ಕಂತೆ ಶೂಟಿಂಗ್ ಶೆಡ್ಯೂಲ್ ಮಾಡುತ್ತಾರೆ. ಆದರೆ ಮುಖೇಶ್ ಅಂಬಾನಿ ಅವರ ಕಾರ್ಯಕ್ರಮಕ್ಕಾಗಿ ಅಕ್ಷಯ್ ಕುಮಾರ್ ಈ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದು, ಮುಖೇಶ್ ಮತ್ತು ನೀತಾ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯ ಪೂರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನಡೆಸಿದ್ದಾರೆ. ಈ ಸಮಾರಂಭದಲ್ಲಿ ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸಿದ್ದರು.

ಅಂಬಾನಿ ಅವರ ಕಾರ್ಯಕ್ರಮದಲ್ಲಿ ಅಕ್ಷಯ್ ಡ್ಯಾನ್ಸ್ ಮಾಡಿದ್ದು, ಅದೂ ಮುಂಜಾನೆ 3 ಗಂಟೆಗೆ.ಗುಜರಾತ್​ನ ಜಾಮ್‌ನಗರದಲ್ಲಿ ನಡೆದ ಈ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಅಂಬಾನಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಈವೆಂಟ್ ಮೂರು ದಿನಗಳ ಕಾಲ ನಡೆದಿದೆ. ಒಂದು ದಿನ ಕಾರ್ಯಕ್ರಮವನ್ನು ಮಧ್ಯರಾತ್ರಿ 3ರವರೆಗೆ ವಿಸ್ತರಿಸಲಾಗಿತ್ತು. ಅಕ್ಷಯ್‌ಗೆ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸವಿದೆ. ಎಷ್ಟೇ ಬಿಗ್ ಬಜೆಟ್ ಸಿನಿಮಾ ಆದರೂ ಯಾವುದೇ ಸಂದರ್ಭಗಳಲ್ಲಿ ಅವರು ಈ ದಿನಚರಿಯನ್ನು ಬದಲಾಯಿಸುವುದಿಲ್ಲ. ಆದರೆ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಅವರು ಬೆಳಗಿನ ಜಾವ 3 ಗಂಟೆಯವರೆಗೂ ಜಾಗರಣೆ ಮಾಡಬೇಕಾಯಿತು.

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ‘ನನ್ನ ಕಾರ್ಯಕ್ರಮ ಮುಂಜಾನೆ 3 ಗಂಟೆಗೆ ಇತ್ತು. ಇಡೀ ಕಾರ್ಯಕ್ರಮವು ತುಂಬಾ ಅದ್ದೂರಿಯಾಗಿತ್ತು. ಅದರ ಹೊರತಾಗಿ ಅಂಬಾನಿ ಕುಟುಂಬವು ತುಂಬಾ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿತ್ತು. ಆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವಂತೆ ನೋಡಿಕೊಂಡಿದ್ದರು. ಅನಂತ್ ಮತ್ತು ರಾಧಿಕಾ ತುಂಬಾ ಸತ್ಕಾರ ಮಾಡಿದರು. ಅವರಿಬ್ಬರಿಗೂ ಮಹಾಕಾಳನಿಂದ ಆಶೀರ್ವಾದ ಸಿಗಲಿ’ ಎಂದು ಅಕ್ಷಯ್ ಕುಮಾರ್ ತಿಳಿಸಿದರು.

Nimma Suddi
";