This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ತಾಲೂಕಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆ

ಜಿಲ್ಲೆಯಾದ್ಯಂತ ಎರಡು ಹಂತಗಳ ಚುನಾವಣೆ ಯಶಸ್ವಿ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳ ಚುನಾವಣೆಗೆ ಎರಡು ಹಂತದಲ್ಲಿ ಮತದಾನ ನಡೆದಿದ್ದು, ಡಿಸೆಂಬರ ೩೦ ರಂದು ಬೆಳಗ್ಗೆ ೮ ರಿಂದ ಜರುಗಲಿರುವ ಮತ ಎಣಿಕೆಗೆ ೯ ತಾಲೂಕಾ ಕೇಂದ್ರಗಳಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಮೊದಲ ಹಂತ ಹಾಗೂ ಎರಡನೇ ಹಂತ ಸೇರಿ ಒಟ್ಟು ೧೯೧ ಗ್ರಾಮ ಪಂಚಾಯತಿಗಳ ೧೦೩೮ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದೆ. ಮತ ಎಣಿಕೆ ಜಿಲ್ಲೆಯ ೯ ತಾಲೂಕಾ ಕೇಂದ್ರಗಳಲ್ಲಿ ನಡೆಯಲಿದೆ. ಮತ ಎಣಿಕೆಗೆ ಒಟ್ಟು ೧೬೭ ಕೊಠಡಿಗಳಲ್ಲಿ ಒಟ್ಟು ೪೪೪ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ೪೦ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ ಮತ್ತು ಇಬ್ಬರು ಎಣಿಕೆ ಸಹಾಯಕರು ಸೇರಿ ಒಟ್ಟು ೧೪೫೨ ಜನ ನೇಮಕ ಮಾಡಲಾಗಿದೆ.

ಬಾಗಲಕೋಟೆ ತಾಲೂಕಿನಲ್ಲಿ ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರದಲ್ಲಿ ೨೮ ಗ್ರಾಮ ಪಂಚಾಯತಿಗಳ ೧೪೪ ಸ್ಥಾನಗಳ ೩೬೯ ಅಭ್ಯರ್ಥಿಗಳ ಮತ ಎಣಿಕೆ ನಡೆಯಲಿದೆ. ಒಟ್ಟು ೧೩ ಕೊಠಡಿಗಳಲ್ಲಿ ೫೮ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೪ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೬೨ ಮೇಲ್ವಿಚಾರಕರು ಮತ್ತು ೧೨೪ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಬಾದಾಮಿ ತಾಲೂಕಿನಲ್ಲಿ ವೀರಪುಲಕೇಶಿ ವಿದ್ಯಾವರ್ಧಕ ಸಂಘದಲ್ಲಿ ಮತ ಎಣಿಕೆ ನಡೆಯಲಿದೆ. ೩೦ ಗ್ರಾಮ ಪಂಚಾಯತಿಗಳ ೧೭೪ ಸ್ಥಾನಗಳ ೪೨೬ ಅಭ್ಯರ್ಥಿಗಳ ಮತ ಎಣಿಕೆಗೆ ೩೦ ಕೊಠಡಿಗಳಲ್ಲಿ ೯೦ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೯ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೯೯ ಮೇಲ್ವಿಚಾರಕರು ಮತ್ತು ೧೯೮ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಗುಳೇದಗುಡ್ಡ ತಾಲೂಕಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, ೧೨ ಗ್ರಾಮ ಪಂಚಾಯತಿಗಳ ೪೮ ಸ್ಥಾನಗಳ ೧೨೪ ಅಭ್ಯರ್ಥಿಗಳ ಮತ ಎಣಿಕೆಗೆ ೧೨ ಕೊಠಡಿಗಳಲ್ಲಿ ೨೦ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೩ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೨೩ ಮೇಲ್ವಿಚಾರಕರು ಮತ್ತು ೪೬ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಹುನಗುಂದ ತಾಲೂಕಿನಲ್ಲಿ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, ೧೬ ಗ್ರಾಮ ಪಂಚಾಯತಿಗಳ ೮೪ ಸ್ಥಾನಗಳ ೨೧೧ ಅಭ್ಯರ್ಥಿಗಳ ಮತ ಎಣಿಕೆಗೆ ೧೩ ಕೊಠಡಿಗಳಲ್ಲಿ ೩೧ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೨ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೩೩ ಮೇಲ್ವಿಚಾರಕರು ಮತ್ತು ೬೬ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಇಲಕಲ್ಲ ತಾಲೂಕಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ೧೬ ಗ್ರಾಮ ಪಂಚಾಯತಿಗಳ ೧೦೨ ಸ್ಥಾನಗಳ ೨೫೦ ಅಭ್ಯರ್ಥಿಗಳ ಮತ ಎಣಿಕೆಗೆ ೧೪ ಕೊಠಡಿಗಳಲ್ಲಿ ೪೧ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೩ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೪೪ ಮೇಲ್ವಿಚಾರಕರು ಮತ್ತು ೮೮ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಜಮಖಂಡಿ ತಾಲೂಕಿನಲ್ಲಿ ಪಿ.ಬಿ.ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ೨೬ ಗ್ರಾಮ ಪಂಚಾಯತಿಗಳ ೧೫೨ ಸ್ಥಾನಗಳ ೪೨೫ ಅಭ್ಯರ್ಥಿಗಳ ಮತ ಎಣಿಕೆಗೆ ೨೫ ಕೊಠಡಿಗಳಲ್ಲಿ ೬೦ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೫ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೬೫ ಮೇಲ್ವಿಚಾರಕರು ಮತ್ತು ೧೩೦ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಮುಧೋಳ ತಾಲೂಕಿನಲ್ಲಿ ಆರ್.ಎಂ.ಜಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ೨೨ ಗ್ರಾಮ ಪಂಚಾಯತಿಗಳ ೧೨೭ ಸ್ಥಾನಗಳ ೩೬೧ ಅಭ್ಯರ್ಥಿಗಳ ಮತ ಎಣಿಕೆಗೆ ೨೨ ಕೊಠಡಿಗಳಲ್ಲಿ ೫೦ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೫ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೫೫ ಮೇಲ್ವಿಚಾರಕರು ಮತ್ತು ೧೧೦ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ಬೀಳಗಿ ತಾಲೂಕಿನಲ್ಲಿ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ೨೪ ಗ್ರಾಮ ಪಂಚಾಯತಿಗಳ ೧೧೧ ಸ್ಥಾನಗಳ ೩೦೦ ಅಭ್ಯರ್ಥಿಗಳ ಮತ ಎಣಿಕೆಗೆ ೨೧ ಕೊಠಡಿಗಳಲ್ಲಿ ೫೬ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೬ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೬೨ ಮೇಲ್ವಿಚಾರಕರು ಮತ್ತು ೧೨೪ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಜನತಾ ಶಿಕ್ಷಣ ಸಂಸ್ಥೆ, ಎಸ್.ಟಿ.ಸಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ೧೭ ಗ್ರಾಮ ಪಂಚಾಯತಿಗಳ ೯೬ ಸ್ಥಾನಗಳ ೩೧೧ ಅಭ್ಯರ್ಥಿಗಳ ಮತ ಎಣಿಕೆಗೆ ೧೭ ಕೊಠಡಿಗಳಲ್ಲಿ ೩೮ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೩ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ೪೧ ಮೇಲ್ವಿಚಾರಕರು ಮತ್ತು ೮೨ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Nimma Suddi
";