ವಾಷಿಂಗ್ಟನ್: ಅಮೆರಿಕದ ಆರ್ಥಿಕತೆ ನಿರೀಕ್ಷೆಮೀರಿ ಬೆಳವಣಿಗೆ ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದು, 2023ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕದ ಜಿಡಿಪಿ ಶೇ. 3.3ರಷ್ಟು ವೃದ್ಧಿಯಾಗಿದ್ದು, 2023ರ ವರ್ಷ ಅಮೆರಿಕಕ್ಕೆ ಸಂತಸದ ವರ್ಷವೆನಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
2020ರಲ್ಲಿ ಕೋವಿಡ್ ಉದ್ಭವವಾದಾಗಿನಿಂದಲೂ ಚೀನಾ ಸಂಕಷ್ಟಕ್ಕೆ ಸಿಲುಕಿದೆ. ಅನೇಕ ದೇಶಗಳಿಗಿಂತ ಹೆಚ್ಚು ಬಾರಿ ಚೀನಾದಲ್ಲಿ ಲಾಕ್ಡೌನ್ಗಳಾಗಿವೆ. ಇದರಿಂದಾಗಿ ಚೀನಾದ ಆರ್ಥಿಕತೆ ಬಹಳಷ್ಟು ಮಂದಗೊಂಡಿದೆ. ವಿಶ್ವಕ್ಕೆ ಫ್ಯಾಕ್ಟರಿ ಎನಿಸಿದ್ದ ಚೀನಾದ ಈ ಸ್ಥಿತಿಯಿಂದಾಗಿ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಗೆ ಧಕ್ಕೆಯಾಗಿತ್ತು. ಬಹಳಷ್ಟು ಕಂಪನಿಗಳು ಚೀನಾದಿಂದ ಹೊರಗೆ ಕಾಲಿಡಲು ಪ್ರಯತ್ನಿಸುತ್ತಿವೆ.
2022ರಲ್ಲಿ ಕೇವಲ 1.9 ಪ್ರತಿಶತದಷ್ಟು ಮಾತ್ರ ಇದ್ದ ಜಿಡಿಪಿ ವೃದ್ಧಿ 2023ರಲ್ಲಿ ಶೇ. 2.5ಕ್ಕೆ ಏರಿದೆ. 2023ರ ಮೂರನೇ ತ್ರೈಮಾಸಿಕ ಅವಧಿಯಾದ ಜುಲೈನಿಂದ ಸೆಪ್ಟೆಂಬರ್ನವರೆಗಿನ ಅವಧಿಯಲ್ಲಿ 4.9 ಪ್ರತಿಶತದಷ್ಟು ಬೆಳೆದಿದ್ದು, ಚೀನಾದ ಜಿಡಿಪಿ 2023ರಲ್ಲಿ ಶೇ. 5ರ ಆಸುಪಾಸಿನ ದರದಲ್ಲಿ ಬೆಳೆಯುವ ನಿರೀಕ್ಷೆ ಇದೆಯಾದರೂ ನಾಮಿನಲ್ ಜಿಡಿಪಿಯಲ್ಲಿ ಅಮೆರಿಕ ಉತ್ತಮ ಬೆಳವಣಿಗೆ ಕಂಡಿದೆ.
2023ರಲ್ಲಿ ಚೀನಾದ ನಾಮಿನಲ್ ಜಿಡಿಪಿ ಶೇ. 4.6ರಷ್ಟು ಹೆಚ್ಚಾಗಿದ್ದರೆ, ಅಮೆರಿಕದ್ದು ಶೇ. 6.3ರಷ್ಟು ಹೆಚ್ಚಾಗಿದ್ದು, ಚೀನಾ ವಿಶ್ವದ ಅಗ್ರ ಆರ್ಥಿಕತೆಯ ದೇಶವಾಗುವ ಪ್ರಯತ್ನಕ್ಕೆ ಸದ್ಯ ತುಸು ತೊಡರುಗಾಲು ಬಿದ್ದಂತಾಗಿದ್ದು, ನಾಮಿನಲ್ ಜಿಡಿಪಿ ಎಂದರೆ ಹಣದುಬ್ಬರ, ಬೆಲೆ ಏರಿಕೆಯ ಪರಿಣಾಮ ಇಲ್ಲದ ಒಟ್ಟಾರೆ ಉತ್ಪನ್ನ ಮೊತ್ತವಾಗಿದೆ.