This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Feature ArticlePolitics News

ದೇಶದ ಏಕತೆಯ ಸಂಕೇತವಾಗಿ ಅಮೃತ ಉದ್ಯಾನ ನಿಮಾರ್ಣ ಸಂಸದ ಗದ್ದಿಗೌಡರ ನನ್ನ ದೇಶ ನನ್ನ ಮಣ್ಣು ಅಭಿಯಾನಕ್ಕೆ ಚಾಲನೆ

ಬಾಗಲಕೋಟೆ : ನನ್ನ ಮಣ್ಣು ನನ್ನ ದೇಶದ ಅಭಿನಾಯದಡಿ ದೇಶದ್ಯಾಂತ ಮೃತ್ತಿಕೆ ಸಂಗ್ರಹಸಿ ದೇಶದ ಏಕತೆಗಾಗಿ ಅಮೃತ ಉದ್ಯಾನ ನಿರ್ಮಾಣಮಾಡಲಾಗುವುದು ಎಂದು ಸಂಸದ ಪಿ.ಸಿ ಗದ್ದಿಗೌಡರ ಹೇಳಿದರು.

ಅವರು ಶನಿವಾರ ಐತಿಹಾಸಿಕ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ವಿಧಾನ ಸಭಾಮತಕ್ಷೇತ್ರ ಬಾಗಲಕೋಟೆಯಿಂದ ಹಮ್ಮಿಕೊಂಡ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ದೇವಸ್ಥಾನದಲ್ಲಿ ವೀರಭದ್ರೇಶ್ವರ ಸ್ವಾಮಿಗೆ ಹಾಗೂ ಮಣ್ಣೀಗೆ ಪೂಜೆ ಸಲ್ಲಿಸಿ ಚಾಲನೆ ನಿಡಿ ಮಾತನಾಡಿದರು.

ಈಗಾಗಲೇ ದೇಶವು ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ, ಈವರೆಗೆ ಸುಮಾರು 2 ಲಕ್ಷದಷ್ಟು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿರುವ ಹುತಾತ್ಮರ ಸ್ಮರಣಾರ್ಥವಾಗಿ ಮೇರಿ ಮಾಟಿ ಮೇರಾ ದೇಶ್ ಎಂಬ ಅಭಿಯಾನದಡಿ. ದೇಶದ ಮೂಲೆ ಮೂಲೆಗಳಿಂದಲೂ ಮೃತ್ತಿಕೆ ಸಂಗ್ರಹಿಸಿ, ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪದಲ್ಲೇ ಆ ಮಣ್ಣಿನಲ್ಲಿ ಗಿಡಗಳನ್ನು ನೆಟ್ಟು “ಅಮೃತ್ ಉದ್ಯಾನ’ ನಿರ್ಮಿಸಲಾಗುವುದು.ಈ ಉದ್ಯಾನವು ಏಕ ಭಾರತ ಶ್ರೇಷ್ಠ ಭಾರತದ ಸಂಕೇತವಾಗಿ ಹೊರಹೊಮ್ಮಲಿದೆ ಎಂದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ದೇಶದ ಮುಂದಿನ ಯುವ ಪಿಳಿಗೆಗೆ ಬೇಕಾಗುವ ಭಾರತವನ್ನು ಕಟ್ಟಿಕೊಡುವ ಸಂಕಲ್ಪದೊಂದಿಗೆ ಭಾರತದ ಏಕತೆಯನ್ನು ಗಟ್ಟಿಗೊಳಸಿವು ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ಕನಸಿನ ನನ್ನ ಮಣ್ಣು ನನ್ನ ದೇಶ ಅಭಿಯಾನ ಯಶಸ್ವಿಯಾಗಿಸೋಣ ಮತ್ತೆ ಭಾರತ ವಿಶ್ವಗುರುವಾಗುವತ್ತ ಎಲ್ಲರು ಶ್ರಮಿಸೋಣ ಎಂದರು.
ಮಾಜಿ ವಿಧಾನ ಪರಿಷತ್ತಿನ ಸದಸ್ಯ ಅರುಣ ಶಹಾಪುರ ಮಾತನಾಡಿ ಈಗಾಗಲೆ ದೇಶದಾದ್ಯಂತ ಕೇಂದ್ರ ಸರಕಾರದ ನೆಹರೂ ಯುವ ಕೇಂದ್ರ ಹಾಗೂ ಎಲ್ಲ ಗ್ರಾಮ ಪಂಚಾಯತಿ ವ್ಯವಸ್ಥೆಮೂಲಕ ಈಗಾಗಲೆ ಸರಕಾರಿ ಅಭಿಯಾನ ನಡೆದಿದೆ. ಭಾರತೀಯ ಜನತಾ ಪಾರ್ಟಿಯಿಂದಲೂ ಕಾರ್ಯಕರ್ತರಲ್ಲಿ ಈ ಮಣ್ಣೆ ನನ್ನ ದೇಶ ಎಂಬ ದೇಶಾಭಿಮಾನ ಇಮ್ಮಡಿಗೋಳಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೋಂಡಿದ್ದು ಅಕ್ಟೋಬರ 30ಕ್ಕೆ ದೇಹಲಿಯಲ್ಲಿ ನಡೆಯುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಅಮೃತ ಉದ್ಯಾನವನದಲ್ಲಿ ಈ ಮಣ್ಣುನ್ನು ಸುರಿಯುವ ಮೂಲಕ ಚಾಲನೆ ನಿಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ನನ್ನ ದೇಶ ನನ್ನ ಮಣ್ಣು ಅಭಿಯಾನದ ಜಿಲ್ಲಾ ಪ್ರಮುಖ ನಂದು ಗಾಯಕವಾಡ,ಬೆಳಗಾವಿ ಪ್ರಭಾರಿ ಬಸವರಾಜ ಯಂಕAಚಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ಮಧ್ಯಮ ವಕ್ತಾರ ಸತ್ಯನಾರಯಣ ಹೇಮಾದ್ರಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುರೇಶ ಕೋಣ್ಣರು.ಮಲ್ಲೇಶ ವಿಜಾಪುರ.ಕಲ್ಲಪ್ಪ ಭಗವತಿ.ಬಸವರಾಜ ಹುನಗುಂದ,ಉಮೇಶ ಹಂಚಿನಾಳ.ಶ್ರೀಧರ ನಾಗರಬೇಟ್ಟ, ಮಲ್ಲಯ್ಯ ಮೂಗನೂರಮಠ,ಬಸವರಾಜ ಅವರಾದಿ,ಸಂಗಯ್ಯ ಸರಗಣಾಚಾರಿ, ಸುರೇಶ ಮಜ್ಜಿಗಿ ಸೇರಿದಂತೆ ಅನೇಕರು ಬಾಗವಹಿಸಿದ್ದರು