ಬೆಂಗಳೂರು: ನಗರದ ಸೈಬರ್ ಕ್ರೈಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ತೆಲಂಗಾಣದ ಇಬ್ಬರು, ಹೈದರಾಬಾದ್ನ ಮೂವರು, ಮಹಾರಾಷ್ಟ್ರದ ಇಬ್ಬರು ಸೇರಿ 11 ಮಂದಿಯನ್ನು ಬಂಧಿಸಿದ್ದು, ಕೆಲಸಕ್ಕಾಗಿ ಪರದಾಡುತ್ತಿರುವವರನ್ನು ಟಾರ್ಗೆಟ್ ಮಾಡಿ ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ನಂಬಿಸಿ ವಂಚಿಸ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಒಟ್ಟು 2143 ಪ್ರಕರಣಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿದ್ದ ಸೈಬರ್ ವಂಚನೆ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದು,ಆರೋಪಿಗಳು 2143 ಅಕೌಂಟ್ಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ಎಗರಿಸಿದ್ದರು. ಸದ್ಯ ಸೈಬರ್ ಪೊಲೀಸರು 30 ಅಕೌಂಟ್ ಫ್ರೀಜ್ ಮಾಡಿದ್ದಾರೆ. 62 ಲಕ್ಷದ 83 ಸಾವಿರ ರೂಪಾಯಿಗಳು ಬೆಂಗಳೂರು ಪೊಲೀಸರಿಂದ ಫ್ರೀಜ್ ಆಗಿದೆ. ಮನೆಯಿಂದಲೇ ಕೆಲಸ ಮಾಡಿ ದಿನಕ್ಕೆ ಸಾವಿರಾರು ರೂ ಗಳಿಸಿ ಎಂದು ಈ ಗ್ಯಾಂಗ್ ನಂಬಿಸುತ್ತಿತ್ತು.
ಇನ್ಸ್ಟಾಗ್ರಾಂ ಅಕೌಂಟ್ಗೆ ಲಿಂಕ್ ಕಳಿಸಿ ನಂತರ ಹಣ ಎಗರಿಸ್ತಿದ್ರು. ಸದ್ಯ ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ, ಮುಂಬೈ ಸೇರಿ ಒಟ್ಟು 11 ಮಂದಿ ಅರೆಸ್ಟ್ ಆಗಿದ್ದಾರೆ. 11 ಮೊಬೈಲ್, 2 ಲ್ಯಾಪ್ ಟಾಪ್, 15 ಸಿಮ್ ಕಾರ್ಡ್, 3 ಬ್ಯಾಂಕ್ ಚೆಕ್ ಬುಕ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ಕಂಡು ಬಂದಿದೆ.