ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸದ ಮಧ್ಯೆ ರೆಮ್‌ಡಿಸಿವರ್ ಇಂಜೆಕ್ಷನ್‌ನ ಮಾರಾಟದ ಅಕ್ರಮ ಜಾಲವೊಂದನ್ನು ಸಿಇಎನ್ ಕ್ರೆöಮ್ ಪೊಲೀಸರು ಪತ್ತೆ ಹಚ್ಚಿ 11 ಜನರಲ್ಲಿ ಬಂಧಿಸಿದ್ದಾರೆ.
ಬಂಧಿತರಲ್ಲಿ ಜಿಲ್ಲಾ ಆಸ್ಪತ್ರೆಯ ಮೂವರು ಸಿಬ್ಬಂದಿ ಸೇರಿದಂತೆ ಖಾಸಗಿ ಆಸ್ಪತ್ರೆಯ 8 ಜನರೂ ಇದ್ದಾರೆ. ೧೦ ಜನರನ್ನು ಸದ್ಯ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ೧೪ ರೆಮ್‌ಡಿಸಿವರ್ ಇಂಜಕ್ಷನ್ ವೈಲ್ ಹಾಗೂ 2 ಖಾಲಿ ರೆಮ್ ಡಿಸಿವರ್ ವೈಲ್ ಹಾಗೂ 30 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.
ಒಂದು ರೆಮ್‌ಡಿಸಿವರ್ ಇಂಜಕ್ಷನ್‌ಗೆ 18 ಸಾವಿರ ರೂವರೆಗೆ ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಬೆನ್ನು ಬಿದ್ದ ಪೊಲೀಸರು ಈ ಅಕ್ರಮ ಬಯಲಿಗೆಳೆದಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳಿಗೆ ರೆಮ್‌ಡಿಸಿವರ್ ನೀಡದೆ ಅಲ್ಲಿಂದ ಖಾಸಗಿ ಆಸ್ಪತ್ರೆಗಳಿಗೆ ಇಂಜಕ್ಷನ್ ರವಾನೆ ಆಗುತ್ತಿತ್ತು ಎನ್ನಲಾಗಿದ್ದು ಜಿಲ್ಲಾಸ್ಪತ್ರೆ ಸಿಬ್ಬಂದಿ ಮೂಲಕ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳಿಗೆ ರವಾನೆ ಆಗುತ್ತಿತ್ತು.
ಇಂಜಕ್ಷನ್ ಮುಗಿದ ಕೂಡಲೆ ಖಾಲಿಯಾದ ವೈಲ್‌ಗಳನ್ನು ಜಿಲ್ಲಾಸ್ಪತ್ರೆಯಲ್ಲಿ ತಂದಿಡುತ್ತಿದ್ದರು ಎಂಬ ಮಾಹಿತಿ ಇದೆ. ಕಳೆದೆರಡು ದಿನದಿಂದ ಆರೋಪಿಗಳ ಬೆನ್ನು ಹತ್ತಿದ ಪೊಲೀಸರು ೨೫ ಸಾವಿರ ರೂ.ಗೆ ಇಂಜಕ್ಷನ್ ಪಡೆಯುವ ನೆಪದಲ್ಲಿ ತೆರಳಿದ ಪೊಲೀಸರು 10 ಜನ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಜಿಲ್ಲಾಸ್ಪತ್ರೆಯ ವಿಠ್ಠಲ ಚಲವಾದಿ, ರಂಗಪ್ಪ ದಿನ್ನಿ, ರಾಜು ಗುಡಿಮನಿ, ಖಾಸಗಿ ಆಸ್ಪತ್ರೆಯ ತಿಮ್ಮಣ್ಣ ಗಡದನ್ನವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ ಲಮಾಣಿ, ಗಣೇಶ ನಾಟಿಕಾರ, ಪ್ರವೀಣ ಕೊತ್ಲಿ, ಮಹಾಂತಗೌಡ ಬಿರಾದಾರ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಡ್ರಗ್ಸ್ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಲ್ಲದೆ ಜಿಲ್ಲೆಯ ೭ ಆಸ್ಪತ್ರೆಗಳ ವಿರುದ್ಧ ತೀವ್ರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.
ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ಲೋಕೇಶ ಜಗಲಾಸರ್ ಸಿಇಎನ್ ಕ್ರೆö ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ಎಸ್ಪಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಬಾಗಲಕೋಟೆ ಶಹರ ಠಾಣೆಯ ಪಿಐ ವಿಜಯ ಮುರಗುಂಡಿ, ಸಿಇಎನ್ ಕ್ರೈಮ್ ಪಿಐ ಮಲ್ಲಯ್ಯ ಮಠಪತಿ, ಪಿಎಸ್ಐ ಮಣಿಕಂಠ ಪೂಜಾರಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆದಿತ್ತು.