This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics News

ಬಾಗಲಕೋಟೆ ಡಿಸಿಸಿ ಬ್ಯಾಂಕ್ ಚುನಾವಣೆ:೨೫ ಅಭ್ಯರ್ಥಿಗಳು ಕಣದಲ್ಲಿ

ಡಿಸಿಸಿ ಬ್ಯಾಂಕ್ ಚುನಾವಣೆ:೨೫ ಅಭ್ಯರ್ಥಿಗಳು ಕಣದಲ್ಲಿ
ಬಾಗಲಕೋಟೆ
ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಕ್ಷೇತ್ರವಾದ ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ನ.೫ರಂದು ನಡೆಯಲಿರುವ ಚುನಾವಣೆಗೆ ೨೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅ.೩೦ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು ಒಟ್ಟು ೧೧ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರು. ೧೩ ಕ್ಷೇತ್ರಗಳಲ್ಲಿ ಬಾಗಲಕೋಟೆ ಪಿಕೆಪಿಎಸ್ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ ೧೧ ಕ್ಷೇತ್ರಗಳಿಗೆ ೨೫ ಅಭ್ಯರ್ಥಿಗಳ ಚುನಾವಣೆ ಎದುರಿಸಲಿದ್ದಾರೆ.
ಅಂತಿಮ ಕಣದಲ್ಲಿರುವವರು:
ಬಾದಾಮಿ ಪಿಕೆಪಿಎಸ್-ಕುಮಾರಗೌಡ ಜನಾಲಿ, ಡಾ.ಎಂ.ಜಿ.ಕಿತ್ತಲಿ, ಹನುಮಂತಗೌಡ ಗೌಡ್ರ, ಹುನಗುಂದ ಪಿಕೆಪಿಎಸ್-ವಿಜಯಾನಂದ ಕಾಶಪ್ಪನವರ, ವಿರೇಶ ಉಂಡೋಡಿ, ಜಮಖಂಡಿ ಪಿಕೆಪಿಎಸ್-ಶಾಸಕ ಆನಂದ ನ್ಯಾಮಗೌಡ, ಯೋಗಪ್ಪ ಸವದಿ, ಮುಧೋಳ ಪಿಕೆಪಿಎಸ್-ಮಹಾಂತೇಶ ಉದುಪುಡಿ, ರಾಮಪ್ಪ ತಳೇವಾಡ, ಬೀಳಗಿ ಪಿಕೆಪಿಎಸ್-ಈರಣ್ಣ ಗಿಡಪ್ಪಗೋಳ, ಎಸ್.ಆರ್.ಪಾಟೀಲ, ರಬಕವಿ-ಬನಹಟ್ಟಿ ಪಿಕೆಪಿಎಸ್-ಬಸವರಾಜ ಪಾಟೀಲ, ಭೀಮಸಿ ಮಗದುಮ, ಸಿದ್ದು ಸವದಿ, ಇಳಕಲ್ ಪಿಕೆಪಿಎಸ್-ಮಹಾಂತೇಶ ನರಗುಂದ, ಶಿವನಗೌಡ ಅಗಸಿಮುಂದಿನ, ಪಟ್ಟಣ ಬ್ಯಾಂಕುಗಳು ಮತ್ತು ಬಿನ್ ಶೇತ್ಕಿ ಸಹಕಾರ ಸಂಘ-ಪ್ರಕಾಶ ತಪಶೆಟ್ಟಿ, ಶಿವಾನಂದ ಉದುಪುಡಿ, ನೇಕಾರ ಸಹಕಾರ ಸಂಘ-ಮಲ್ಲಿಕಾರ್ಜುನ ಬಣಾಕಾರ, ಡಾ.ಎಂ.ಎಸ್.ದಡ್ಡೇನವರ, ಮುರಗೇಶ ಕಡ್ಲಿಮಟ್ಟಿ, ಕುರಿ ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘ-ಎಚ್.ವೈ.ಮೇಟಿ, ಸದಾಶಿವ ಇಟಕನ್ನವರ, ಇತರೆ ಸಹಕಾರಿ ಸಂಘ-ಮಲ್ಲಿಕಾರ್ಜುನ ಕುರಿ, ಹನುಮಂತ ನಿರಾಣಿ ಸ್ಪರ್ಧೆಯಲ್ಲಿದ್ದಾರೆ.
ನಾಮಪತ್ರ ಹಿಂಪಡೆದವರು:
ಜಮಖಂಡಿ ಪಿಕೆಪಿಎಸ್-ಕಲ್ಲಪ್ಪ ಗಿರಡ್ಡಿ, ಬನಹಟ್ಟಿ ಪಿಕೆಪಿಎಸ್-ಸಾಗರ ಚವಜ, ಇಳಕಲ್ಲ ಪಿಕೆಪಿಎಸ್-ಮದಕಪ್ಪ ಸಾಂತಗೇರಿ, ಮುಧೋಳ ಪಿಕೆಪಿಎಸ್-ಹನುಮಂತ ಪಾಟೀಲ, ಸಂಗಮೇಶ ಕಾತರಕಿ, ಬೀಳಗಿ ಪಿಕೆಪಿಎಸ್-ಮಲ್ಲಪ್ಪ ಪೂಜಾರಿ, ಪಟ್ಟಣ ಬ್ಯಾಂಕ್ ಹಾಗೂ ಕೃಷಿಯೇತರ ಪತ್ತಿನ ಸಹಕಾರಿ ಸಂಘ-ಅಶೋಕ ಲಾಗಲೋಟಿ, ಇತರೆ ಸಹಕಾರಿ ಸಂಘ-ಕಾಶಿರಾಯ ಜನಗೊಂಡ, ವಿಠ್ಠಲ ಬಿಜ್ಜಿಗಾರ, ಮಹಾದೇವ ಮಾರಾಪುರ, ರೇಖಾ ಶೇಷಗಿರಿ.

";