ಟಿಕೇಟ್ ಆಕಾಂಕ್ಷಿ ಆಗಿದ್ದೇನೆ:ಪ್ರಮೋದ ಮುತಾಲಿಕೆ ಹೇಳಿಕೆ
ನಿಮ್ಮ ಸುದ್ದಿ ಬಾಗಲಕೋಟೆ
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಕುರಿತಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೆ ನನಗೆ ೬೬ ವಯಸ್ಸಾಗಿದ್ದು ಇದು ನನ್ನ ಕೊನೆಯ ಚುನಾವಣೆ ಆಗಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಆಕಾಂಕ್ಷಿಯಾಗಿ ಬಿಜೆಪಿಗೆ ಮನವಿ ಮಾಡಿದ್ದೇನೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇನ್ನು ಮೂರು ವರ್ಷ ಅವಧಿಯಿದ್ದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಅಭಿವೃದ್ಧಿ ಹಾಗೂ ಹಿಂದುತ್ವದ ಕೆಲಸ ಮಾಡುತ್ತೇನೆ. ಒಂದು ವೇಳೆ ಟಿಕೇಟ್ ನನಗೆ ದೊರೆಯದೆ ಸುರೇಶ ಅಂಗಡಿ ಕುಟುಂಬಕ್ಕೋ, ಜಗದೀಶ ಶೆಟ್ಟರ್ ಕುಟುಂಬಕ್ಕೆ ಕೊಟ್ಟರೆ ಅವರ ಪರ ಪ್ರಚಾರದಲ್ಲಿ ತೊಡಗುತ್ತೇನೆ ಎಂದರು.
ಸದನದಲ್ಲಿ ಭದ್ರಾವತಿ ಶಾಸಕ ಸಂಗಮೇಶ ಬಟ್ಟೆ ಬಿಚ್ಚಿದ ಪ್ರಕರಣವನ್ನು ಖಂಡಿಸಿದ ಮುತಾಲಿಕ್, ಶಾಸಕ ಸಂಗಮೇಶ ಅವರ ನಡುವಳಿಕೆ ನಿರ್ಲಜ್ಜತನದ ನಡುವಳಿಕೆ ಆಗಿದೆ. ಕುಡುಕರ ಮಾದರಿಯಲ್ಲಿ ಬೀದಿಯಲ್ಲಿ ಬಟ್ಟೆ ಬಿಚ್ಚುವ ಅವರ ನಡುವಳಿಕೆಗೆ ಧಿಕ್ಕಾರವಿರಲಿ. ಅವರೊಬ್ಬ ಬೀದಿ ಹೋಕ ಎಂದು ಹರಿಹಾಯ್ದರು.
ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದ ತಂಡ ಶ್ರೀರಾಮ ಕಿ ಜೈ, ಭಾರತಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ಅದಕ್ಕೆ ಸಂಗಮೇಶ ಮತ್ತು ಅವರ ಮಕ್ಕಳು ಹಾಗೂ ಅವರು ಚೇಲಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಶ್ರೀರಾಮ ಕಿ ಜೈ, ಭಾರತ ಮಾತಾ ಕಿ ಜೈ ಘೋಷಣೆ ಕೂಗುವುದು ತಪ್ಪಾ.? ಹಲ್ಲೆಗೆ ಒಳಗಾದವರು ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್‌ನವರು ಸಂಗಮೇಶ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ತಪ್ಪು. ಸದನದಲ್ಲಿ ಅದಕ್ಕೇ ಆದ ಗೌರವವಿದೆ. ಕುಡುಕರ ರೀತಿಯಲ್ಲಿ ನಡೆದುಕೊಳ್ಳುವುದಕ್ಕೆ ಜನ ನಿಮ್ಮನ್ನು ಆಯ್ಕೆ ಮಾಡಿಲ್ಲ ಎಂದರು.
ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಮುತಾಲಿಕ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದಾಗಿ ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಇದು ಹಲವು ವಿಚಾರಗಳ ಮೇಲೆ ಪರಿಣಾಮ ಬೀರುತ್ತದೆ. ಜನತೆ ವಿರೋಧ ಮಾಡುವುದು ತಪ್ಪಲ್ಲ. ಚುನಾವಣೆ ಸಂದರ್ಭದಲ್ಲಿ ಅನೇಕ ರಾಜ್ಯಗಳಲ್ಲಿ ಭಾಷಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವುದಾಗಿ ಕೊಡುತ್ತಾರೆ. ಆದರೆ ಇದೆಲ್ಲ ಕಾಂಗ್ರೆಸ್ ಪಕ್ಷದ ೬೦ ವರ್ಷದ ಅವ್ಯವಸ್ಥೆಯಿಂದಾಗಿ ಹೀಗಾಗಿದೆ. ಮುಂದೆ ಮೋದಿ ಹಂತಹಂತವಾಗಿ ಎಲ್ಲವನ್ನೂ ಬಗೆಹರಿಸುತ್ತಾರೆ. ಇನ್ನೂ ಎರಡು ಅವಧಿಯನ್ನು ಪ್ರಧಾನಿ ಮೋದಿಯವರಿಗೆ ಅವಕಾಶ ಕೊಡಬೇಕು ಎಂದರು.