ನಿಮ್ಮಸುದ್ದಿ ಬಾಗಲಕೋಟೆ
ಜನಪದ ವೈಭವವನ್ನು ಹೇಳುವ ಅಂದಿನ ಜನರ ಜನಪದಗಳನ್ನು ಕೇಳುವುದು ಒಂದು ಭಾಗ್ಯವೆಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ತಾಲೂಕಿನ ರಾಂಪುರ ಗ್ರಾಮದ ಮರುಳಸಿದ್ಧೇಶ್ವರ ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಲಾಗಿದ್ದ ಸುಗ್ಗಿಹುಗ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಜನ ಸುಶಿಕ್ಷಿತರಲ್ಲ, ವಿದ್ಯಾವಂತರಲ್ಲದಿದ್ದರೂ ತಮ್ಮ ನಿತ್ಯ ಕಾರ್ಯ ಮಾಡುತ್ತಾ ತಮಗಾದ ದನಿವು ಮರೆಯಲು ತಾವೇ ರಚಿಸಿ ಹಾಡಿದ ಹಾಡುಗಳೇ ಜನಪದಗಳಾಗಿ ಹೊರಹೊಮ್ಮಿವೆ. ರೈತರು, ಕೃಷಿ ಮಹಿಳೆಯರು ಹಬ್ಬ ಹರಿದಿನಗಳಲ್ಲಿ ಹಾಡುವ ಸಂಪ್ರದಾಯದ ಹಾಡುಗಳು ಕೇಳುಗರ ಮನಸೂರೆಗೈಯುತ್ತವೆ ಎಂದರು.
ಅರ್ಥಗರ್ಭಿತವಾದ ತತ್ವಗಳುಳ್ಳ ಸಾಹಿತ್ಯದ ಈ ಪದಗಳು ಇಂದು ಅಳಿವಿನ ಅಂಚಿನಲ್ಲಿವೆ. ಅಂಥಹ ಕಲೆಯನ್ನು, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಾಡುತ್ತಿದೆ. ಜನಪದ ಕಲಾವಿದರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ ಕಳೆದ ಒಂದು ವರ್ಷದಿಂದ ಕರೋನಾ ಮಹಾಮಾರಿ ಎಲ್ಲ ಕ್ಷೇತ್ರದ ಜನತೆಯನ್ನು ಕಂಗಾಲು ಮಾಡಿದ್ದರೂ ಕೃಷಿಕರು ಅದ್ಯಾವುದನ್ನು ಗಮನಿಸದೆ ಹಗಲಿರುಳು ದುಡಿದು ನಾಡಿಗೆ ಅನ್ನ ನೀಡುವ ಕಾರ್ಯ ಮಾಡಿದ್ದು ಅವಿಸ್ಮರಣೆ ಎಂದರು.
ರೈತರ ತಮಗೆ ಅನೇಕ ಸಂಕಷ್ಟಗಳಿದ್ದರು ಹಾಡುತ್ತಾ ನಲಿಯುತ್ತಾ ಬಂದ ತೊಂದರೆಗಳನ್ನು ಗಮನಿಸದೆ ಜೀವನ ಸಾಗಿಸುತ್ತಿರುವುದು ಒಂದು ಹೆಮ್ಮೆ ಎನಿಸುತ್ತಿದೆ ಎಂದರು.
ಇನ್ನೊರ್ವ ಅತಿಥಿ ತಾಲೂಕು ಪಂಚಾಯತ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಮಠದ ಪೂಜ್ಯ ರಾಮಸ್ವಾಮೀಜಿ ಮಾತನಾಡಿ ರೈತರಿಲ್ಲದೆ ಮಠಗಳಿಲ್ಲ. ರೈತರು ತಮ್ಮ ಸುಗ್ಗಿ ಕಾಲದಲ್ಲಿ ಬೆಳೆದ ಬೆಳೆಗಳನ್ನು ಮಠಮಂದಿರಗಳಿಗೆ ಮೀಸಲಿಡುತ್ತಿದ್ದು, ಮಠಗಳಿಗೂ ರೈತರಿಗೂ ಅವಿನಾಭಾವ ಸಂಬಂಧಗಳಿರುವುದರಿಂದ ಇಂದು ಈ ಕಾರ್ಯಕ್ರಮವನ್ನು ನಮ್ಮ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದು, ಇನ್ನು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ರಾಜ್ಯದ ನಾನಾ ಭಾಗದಿಂದ ಆಗಮಿಸಿದ ಜನಪದ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಸದಸ್ಯರಾದ ಬಸವರಾಜ ಕೆಂಜೋಡಿ, ಪ್ರಭಾವತಿ ಚಲವಾದಿ, ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಹಕಾರಿ, ಉಪಾಧ್ಯಕ್ಷೆ ರೋಹಿಣಿ ಹಡಗಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಎಂ. ಹೇಮಾವತಿ ಸ್ವಾಗತಿಸಿದರು, ಶೇಖರ ಆಲೂರ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.