This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Politics News

ಬಿಜೆಪಿ ಕಾಂಗ್ರೆಸ್ ಜಿದ್ದಾಜಿದ್ದಿ, ಪಕ್ಷೇತರರೇ ನಿರ್ಣಾಯಕರು

ಡಿಸಿಸಿ ಬ್ಯಾಂಕ್ ಚುನಾವಣೆ
ಬಿಜೆಪಿ ಕಾಂಗ್ರೆಸ್ ಜಿದ್ದಾಜಿದ್ದಿ, ಪಕ್ಷೇತರರೇ ನಿರ್ಣಾಯಕರು
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ೧೧ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಒಟ್ಟು ೧೩ ನಿರ್ದೇಶಕ ಸ್ಥಾನಗಳಲ್ಲಿ ೨ ಸ್ಥಾನ ಅವಿರೋಧವಾಗಿ ಆಯ್ಕೆ ಆಗಿದ್ದವು. ಇನ್ನುಳಿದ ೧೧ ಸ್ಥಾನಗಳಿಗೆ ಗುರುವಾರ ಮತದಾನ ಪ್ರಕ್ರಿಯೆ ನಡೆದು ಸಂಜೆ ಫಲಿತಾಂಶ ಘೋಷಣೆ ಆಯಿತು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನ ೧೩ ನಿರ್ದೇಶಕ ಸ್ಥಾನಗಳಲ್ಲಿ ೨ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿ ಮುನ್ನುಡಿ ಬರೆದಿದ್ದರು. ೧೩ ನಿರ್ದೇಶಕ ಸ್ಥಾನಗಳಲ್ಲಿ ಕಾಂಗ್ರೆಸ್-೭ (ಬಂಡಾಯ ಸೇರಿ), ಬಿಜೆಪಿ ಬೆಂಬಲಿತ-೬ (ಬಂಡಾಯ ಸೇರಿ) ಆಯ್ಕೆ ಆಗಿದ್ದು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳು ನಿರ್ಣಾಯಕರಾಗಲಿದ್ದಾರೆ.
ಬಾಗಲಕೋಟೆ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಎಸ್.ಬಿ.ಪಾಟೀಲ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ ೯ ರಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಿತು. ಭಾರೀ ಪೊಲೀಸ್ ಬಿಗಿ ಭದ್ರತೆ ಮಧ್ಯೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಂತಿಯುತವಾಗಿ ನಡೆದು, ಸಂಜೆ ೫.೩೦ರೊಳಗೆ ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ. ಘಟಾನುಘಟಿ ನಾಯಕರ ಸ್ಪರ್ಧೆಯಿಂದ ಬಿಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು.
ಆಯ್ಕೆ ಆದವರ ವಿವರ
ಬಾದಾಮಿ ಪಿಕೆಪಿಎಸ್-ಕುಮಾರಗೌಡ ಜನಾಲಿ, ಹುನಗುಂದ ಪಿಕೆಪಿಎಸ್-ವಿಜಯಾನಂದ ಕಾಶಪ್ಪನವರ, ಜಮಖಂಡಿ ಪಿಕೆಪಿಎಸ್-ಆನಂದ ನ್ಯಾಮಗೌಡ, ಮುಧೋಳ ಪಿಕೆಪಿಎಸ್-ರಾಮಣ್ಣ ತಳೇವಾಡ, ಬೀಳಗಿ ಪಿಕೆಪಿಎಸ್-ಎಸ್.ಆರ್.ಪಾಟೀಲ, ರಬಕವಿ-ಬನಹಟ್ಟಿ ಪಿಕೆಪಿಎಸ್-ಸಿದ್ದು ಸವದಿ, ಇಳಕಲ್ ಪಿಕೆಪಿಎಸ್-ಶಿವನಗೌಡ ಅಗಸಿಮುಂದಿನ, ಪಟ್ಟಣ ಬ್ಯಾಂಕುಗಳು ಮತ್ತು ಬಿನ್ ಶೇತ್ಕಿ ಸಹಕಾರ ಸಂಘ-ಪ್ರಕಾಶ ತಪಶೆಟ್ಟಿ, ನೇಕಾರ ಸಹಕಾರ ಸಂಘ-ಮುರಗೇಶ ಕಡ್ಲಿಮಟ್ಟಿ, ಕುರಿ ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘ-ಎಚ್.ವೈ.ಮೇಟಿ, ಇತರೆ ಸಹಕಾರಿ ಸಂಘ-ಹನುಮAತ ನಿರಾಣಿ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಬಾಗಲಕೋಟೆ ಪಿಕೆಪಿಎಸ್-ಅಜಯಕುಮಾರ ಸರನಾಯಕ, ಟಿಎಪಿಸಿಎಂಎಸ್-ನAದಕುಮಾರ ಪಾಟೀಲ.
ಅಭ್ಯರ್ಥಿಗಳು ಪಡೆದ ಮತದ ವಿವರ
ಬಾದಾಮಿ ಪಿಕೆಪಿಎಸ್-ಕುಮಾರಗೌಡ ಜನಾಲಿ (೨೨), ಡಾ.ಎಂ.ಜಿ.ಕಿತ್ತಲಿ (೧೧), ಹನುಮಂತಗೌಡ ಗೌಡ್ರ (೧೮), ಹುನಗುಂದ ಪಿಕೆಪಿಎಸ್-ವಿಜಯಾನಂದ ಕಾಶಪ್ಪನವರ (೧೩), ವಿರೇಶ ಉಂಡೋಡಿ (೧೩), ಜಮಖಂಡಿ ಪಿಕೆಪಿಎಸ್-ಶಾಸಕ ಆನಂದ ನ್ಯಾಮಗೌಡ (೨೪), ಯೋಗಪ್ಪ ಸವದಿ (೧೩), ಮುಧೋಳ ಪಿಕೆಪಿಎಸ್-ರಾಮಪ್ಪ ತಳೇವಾಡ (೨೬), ಮಹಾಂತೇಶ ಉದುಪುಡಿ (೧೪), ಬೀಳಗಿ ಪಿಕೆಪಿಎಸ್-ಎಸ್.ಆರ್.ಪಾಟೀಲ (೨೫), ಈರಣ್ಣ ಗಿಡಪ್ಪಗೋಳ (೧೫), ರಬಕವಿ-ಬನಹಟ್ಟಿ ಪಿಕೆಪಿಎಸ್-ಸಿದ್ದು ಸವದಿ (೧೮), ಭೀಮಸಿ ಮಗದುಮ (೯), ಇಳಕಲ್ ಪಿಕೆಪಿಎಸ್-ಶಿವನಗೌಡ ಅಗಸಿಮುಂದಿನ (೯), ಮಹಾಂತೇಶ ನರಗುಂದ (೮), ಪಟ್ಟಣ ಬ್ಯಾಂಕುಗಳು ಮತ್ತು ಬಿನ್ ಶೇತ್ಕಿ ಸಹಕಾರ ಸಂಘ-ಪ್ರಕಾಶ ತಪಶೆಟ್ಟಿ (೧೭೯), ಶಿವಾನಂದ ಉದುಪುಡಿ (೧೩೬), ನೇಕಾರ ಸಹಕಾರ ಸಂಘ- ಮುರಗೇಶ ಕಡ್ಲಿಮಟ್ಟಿ (೩೯), ಮಲ್ಲಿಕಾರ್ಜುನ ಬಣಕಾರ (೨೪), ಡಾ.ಎಂ.ಎಸ್.ದಡ್ಡೇನವರ (೨೨), ಕುರಿ ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘ-ಎಚ್.ವೈ.ಮೇಟಿ (೩೪), ಸದಾಶಿವ ಇಟಕನ್ನವರ (೭),ಇತರೆ ಸಹಕಾರಿ ಸಂಘ-ಹನುಮAತ ನಿರಾಣಿ (೨೩೫), ಮಲ್ಲಿಕಾರ್ಜುನ ಕುರಿ (೫).

Nimma Suddi
";